• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ವ್ಯಕ್ತಿಚಿತ್ರಕ್ಕೊಂದು ಹೊಸ ಬಗೆಯ ಮುನ್ನುಡಿ

By Staff
|

S.R. Vijayshankarಕನ್ನಡದಲ್ಲಿ ಕವಿಗಳ, ಸಾಹಿತಿಗಳ ಕುರಿತಾದ ಅನೇಕ ಲೇಖನಗಳು ಹಾಗೂ ವ್ಯಕ್ತಿಚಿತ್ರಗಳು ಬಂದಿದ್ದರೂ, ನೆನಪಲ್ಲಿ ಉಳಿಯುವಂತದ್ದು ಒಂದೋ ಎರಡೋ. ಈ ಕೊರತೆಯನ್ನು ನೀಗಿಸಲೆಂಬಂತೆ ವಿಮರ್ಶಕ ಎಸ್.ಆರ್.ವಿಜಯಶಂಕರ್ ಅವರ ಹೊಸ ಪುಸ್ತಕ ಈ ಭಾನುವಾರ ಸುಚಿತ್ರಾ ಸೊಸೈಟಿಯಲ್ಲಿ ಲೋಕಾರ್ಪಣೆಯಾಗುತ್ತಿದೆ. ಬಿಡುಗಡೆ ಮಾಡುತ್ತಿರುವವರು ಖ್ಯಾತ ಲೇಖಕ ಚಂದ್ರಶೇಖರ್ ಕಂಬಾರ್.

ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾಡಿನ 26 ಧೀಮಂತ ವ್ಯಕ್ತಿಗಳೊಂದಿಗೆ ಒಡನಾಡಿದ ರಸನಿಮಿಷಗಳನ್ನು, ಅವರ ಕೃತಿಗಳನ್ನು, ಟೀಕೆ-ಟಿಪ್ಪಣಿಗಳನ್ನು 'ಒಡನಾಟ' ಪುಸ್ತಕದಲ್ಲಿ ಕಥಾನಿರೂಪಣೆಯ ವಿನೂತನ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ ವಿಜಯಶಂಕರ್.

ಇದಲ್ಲದೆ, ಸಾಹಿತಿಗಳ ಜತೆಗಿನ ಭಾವನಾತ್ಮಕ ಸಂಬಂಧ, ನಾಗರೀಕ ಸಮಾಜಕ್ಕೆ ಅವರ ಕೊಡುಗೆಯ ಬಗ್ಗೆ ಸಂದರ್ಶನಕ್ಕೂ ಮಿಗಿಲಾದ ಆಪ್ತ ಧಾಟಿಯ ಸಂಭಾಷಣೆಯಲ್ಲಿ ವಿಜಯಶಂಕರ್ ಅವರು ಲೇಖಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇವರ 'ಒಡನಾಟ'ದ ಹಿಡಿತಕ್ಕೆ ಬೇಂದ್ರೆ, ಎ .ಎನ್ .ಮೂರ್ತಿ ರಾವ್, ಸೇಡಿಯಾಪು ಕೃಷ್ಣಭಟ್ಟ, ಗೌರೀಶ ಕಾಯ್ಕಿಣಿ, ಶಿವರಾಮ ಕಾರಂತ,ಯು ಆರ್ ಅನಂತ ಮೂರ್ತಿ, ವೈಎನ್ ಕೆ,ಪ್ರೊ.ಸಿ.ಡಿ ರಾಮಯ್ಯ,, ಕನ್ನೆಪಾಡಿ ರಾಮಕೃಷ್ಣ, ಉದ್ಯಮಿ ಎಚ್ .ಆರ್. ಆಳ್ವಾ, ಕುದೂರು ಕೃಷ್ಣಭಟ್ ಸೇರಿದಂತೆ 26 ವ್ಯಕ್ತಿಗಳ ಪರಿಚಯತ್ಮಾಕ ಲೇಖನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಅನಾವರಣಗೊಳಿಸಲಾಗುತ್ತಿದೆ.

ಡಾ. ಚಂದ್ರಶೇಖರ ಕಂಬಾರ್ ಅವರು 'ಒಡನಾಟ' ಪುಸ್ತಕ ಸೇರಿದಂತೆ, ಜಿ.ಟಿ.ರಾಘವ ಅವರ ವಿಮರ್ಶೆ ಕುರಿತ ಪ್ರಬಂಧ ಸಂಕಲನ 'ಪರಿಗ್ರಹ'ವನ್ನು ಅನಾವರಣಗೊಳಿಸಲಿದ್ದಾರೆ.

ಬಿಡುಗಡೆಯಾಗುತ್ತಿರುವ ಪುಸ್ತಕಗಳು : ವಿಜಯಶಂಕರ್ ಅವರ 'ಒಡನಾಟ', ಜಿ.ಟಿ.ರಾಘವ ಅವರ 'ಪರಿಗ್ರಹ'

ಅನಾವರಣ ಮಾಡುತ್ತಿರುವವರು : ಡಾ.ಚಂದ್ರಶೇಖರ್ ಕಂಬಾರ್

ಸ್ಥಳ : ಸುಚಿತ್ರಾ ಫಿಲ್ಮಂ ಸೊಸೈಟಿ, ಬಿ.ವಿ.ಕಾರಂತ್ ರಸ್ತೆ, ಬನಶಂಕರಿ, ಬೆಂಗಳೂರು

ದಿನಾಂಕ ಮತ್ತು ಸಮಯ : ಏಪ್ರಿಲ್ 20, ಬೆಳಿಗ್ಗೆ 10.30ಕ್ಕೆ

(ದಟ್ಸ್ ಕನ್ನಡವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more