• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಗಲ್‌ ಶತಮಾನೋತ್ಸವದಿ‘ಬಾಗಿಲುಗಳು’ ಬಿಡುಗಡೆ

By Staff
|

ಹುಬ್ಬಳ್ಳಿ : ಹೆಸರಾಂತ ಶಿಕ್ಷಕ, ಕವಿ ಪ್ರಹ್ಲಾದ್‌ ನರೇಗಲ್‌ ಅವರ ಜನ್ಮ ಶತಮಾನೋತ್ಸವ(30.05.1906-12.05.1977) ಇತ್ತೀಚೆಗೆ ನಗರದಲ್ಲಿ ನಡೆಯಿತು.

ಜಿನದತ್ತ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ವಾಮನ ಬೇಂದ್ರೆ, ಪ್ರೊ.ಐ.ಜಿ.ಸನದಿ ಹಾಗೂ ಡಾ.ಗೋವಿಂದ ಮಣ್ಣೂರ್‌ ಭಾಗವಹಿಸಿದ್ದರು. ಶ್ರೀ ಕೃಷ್ಣ ಭವನದಲ್ಲಿ ನಡೆದ ಈ ಸಮಾರಂಭವನ್ನು ಡಾ.ಕರ್ಕಿ ಸಾಹಿತ್ಯ ವೇದಿಕೆ ಆಯೋಜಿಸಿತ್ತು.

ಪುಸ್ತಕ ಬಿಡುಗಡೆ : ಇದೇ ಸಂದರ್ಭದಲ್ಲಿ ಮೋಹನ್‌ಚಂದ್‌ ಪಾಟೀಲ್‌ ಅವರ 40ಕವಿತೆಗಳ ಸಂಕಲನ ‘ಬಾಗಿಲುಗಳು’ ಲೋಕಾರ್ಪಣಗೊಂಡಿತು. ಸಾಹಿತ್ಯ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ 30ರೂಪಾಯಿ.

ಇದು ಮೋಹನ್‌ಚಂದ್‌ ಅವರ ಮೊದಲ ಕವನ ಸಂಕಲನ. ಕಳೆದ 26ವರ್ಷಗಳಿಂದ ಕವಿತೆ ಬರೆಯುತ್ತಿರುವ ಅವರು ಇಂಗ್ಲಿಷ್‌ನಲ್ಲಿಯೂ ಕವಿತೆ ಬರೆಯುತ್ತಾರೆ. ಮುಕ್ತ ಸಾಲು, ಲಯ ಹಾಗೂ ಪ್ರಾಸಬದ್ಧತೆ ಅವರ ಕವಿತೆಯ ಶೈಲಿ. ನಿಸರ್ಗ ಹಾಗೂ ಅಧ್ಯಾತ್ಮ ಪ್ರೀತಿ, ಮಾನವೀಯತೆ, ಪ್ರಸ್ತುತ ರಾಜಕೀಯ-ಸಾಮಾಜಿಕ ಸನ್ನಿವೇಶಗಳ ಕುರಿತ ಕಾಳಜಿ ಅವರ ಕವಿತೆಗಳಲ್ಲಿ ಕಾಣುತ್ತದೆ.

ತಮ್ಮ ಸೋದರ ಮಾವ, ಖ್ಯಾತ ಕಥೆಗಾರ-ಕಾದಂಬರಿಕಾರ ಶಾಂತಿನಾಥ ದೇಸಾಯಿ ಅವರ ಒಡನಾಟ ಹಾಗೂ ಗುರು ನಿರಂಜನ ವಾಲಿಶೆಟ್ಟರ್‌ ಅವರ ಸಾಹಚರ್ಯದಿಂದ ಸಾಹಿತ್ಯಾಭಿರುಚಿ ರೂಢಿಸಿಕೊಂಡಿರುವ ಮೋಹನ್‌ಚಂದ್‌, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯುತ್ತಾರೆ. ಕಥೆಗಳನ್ನೂ ಬರೆಯುತ್ತಾರೆ. ಅವರ ಕವಿತೆಗಳು ಕನ್ನಡ ಹಾಗೂ ಇಂಗ್ಲಿಷ್‌ನ ಅನೇಕ ನಿಯತಕಾಲಿಕಗಳಲ್ಲಿ ಮತ್ತು ದಟ್ಸ್‌ಕನ್ನಡ ಅಂತರ್ಜಾಲ ತಾಣದಲ್ಲಿ ಪ್ರಕಟಗೊಂಡಿವೆ.

ಪ್ರಹ್ಲಾದ್‌ ನರೇಗಲ್‌ ಪರಿಚಯ : ರವೀಂದ್ರನಾಥ್‌ ಟ್ಯಾಗೋರ್‌ ಅವರ ಶಿಷ್ಯರಾಗಿ ಶಾಂತಿನಿಕೇತನದಲ್ಲಿ ವ್ಯಾಸಂಗ ಮಾಡಿದ ಪ್ರಹ್ಲಾದ ನರೇಗಲ್‌, ಟ್ಯಾಗೋರರ ‘ಗೀತಾಂಜಲಿ’ ಕೃತಿಯನ್ನು ನೇರವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಮಾನ್ಯವಾಗಿ ಟ್ಯಾಗೋರರ ಇಂಗ್ಲಿಷ್‌ ಪದ್ಯಗಳೇ ಕನ್ನಡಕ್ಕೆ ಅನುವಾದಗೊಂಡಿರುವ ಹಿನ್ನೆಲೆಯಲ್ಲಿ, ಪ್ರಹ್ಲಾದರ ಅನುವಾದ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತದೆ.

ನರೇಗಲ್‌ ಅವರು ಟ್ಯಾಗೋರರ ಕವಿತೆಗಳ ವಿವಿಧ ಭಾವಲಹರಿಗಳನ್ನು ಸೊಗಸಾದ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವುಗಳು ಈಗಲೂ ತಾಜಾತಾಜಾ ಎನಿಸುವುದು ಮತ್ತೂ ವಿಶಿಷ್ಟ. ಪ್ರಹ್ಲಾದ್‌ ನರೇಗಲ್‌ ಶಿಕ್ಷಕ, ಕವಿಯಷ್ಟೇ ಆಗಿರಲಿಲ್ಲ. ಸ್ವಾತಂತ್ತ್ರ್ಯ ಹೋರಾಟಗಾರ, ಪತ್ರಕರ್ತ, ಸಂಪಾದಕ, ಗಾಯಕ, ವಿಮರ್ಶಕರೂ ಆಗಿದ್ದರು. ಇದೆಲ್ಲಕ್ಕೂ ಮಿಗಿಲಾಗಿ ಕನ್ನಡ ನಾಡು-ನುಡಿಯ ನಿಷ್ಠಾವಂತ ಸೇವಕರಾಗಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more