• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುರೇಂದ್ರನಾಥರ ಹೊಸ ಕಾದಂಬರಿ ಈ ಭಾನುವಾರ ಲಭ್ಯ!

By Staff
|

ಬೆಂಗಳೂರು, ಅ.26 : ಸದ್ಯದ ಭರವಸೆಯ ಬರಹಗಾರರಲ್ಲಿ ಒಬ್ಬರಾದ ಎಸ್.ಸುರೇಂದ್ರನಾಥ್ ಅವರ ಹೊಸ ಕಾದಂಬರಿ 'ಎನ್ನ ಭವದ ಕೇಡು'ಬಿಡುಗಡೆ ಸಮಾರಂಭ ಭಾನುವಾರ(ಅ.28)ನಗರದಲ್ಲಿ ನಡೆಯಲಿದೆ.

ಛಂದ ಪುಸ್ತಕ ಹೊರತಂದಿರುವ ಈ ಕಾದಂಬರಿ ಬಿಡುಗಡೆ ಸಮಾರಂಭ, ನಗರದ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್(ಗಾಂಧಿ ಬಜಾರ್ ಬಳಿ, ಬಸವನಗುಡಿ) ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ರವಿ ಬೆಳಗೆರೆ, ವಿವೇಕ ಶಾನಭಾಗ, ಟಿ.ಎನ್.ಸೀತಾರಾಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ವಸುಧೇಂದ್ರ(98444 22782).

ಡಿವಿಜಿ ಒಂದು ನೆನಪು : ಡಿವಿಜಿ ವೇದಿಕೆ(ಬಿನ್ನಿ ಬಡಾವಣೆ, ವಿಜಯನಗರ, ಬೆಂಗಳೂರು) ಭಾನುವಾರ(ಅ.28) ಬೆಳಗ್ಗೆ 10.30ಕ್ಕೆ ಡಿವಿಜಿ ಒಂದು ನೆನಪು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸುರಾನಾ ಕಾಲೇಜು ಸಭಾಂಗಣ(ಸೌತ್ ಎಂಡ್ ಸರ್ಕಲ್, ಬಸವನಗುಡಿ)ನಡೆಯುವ ಸಮಾರಂಭವನ್ನು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಶಿ ಉದ್ಘಾಟಿಸುವರು. ಎಚ್.ಆರ್.ಚಂದ್ರಶೇಖರ್ ನುಡಿ ನಮನ ಸಲ್ಲಿಸುವರು.

ಪತ್ರಕರ್ತ ವಿ.ಎನ್.ಸುಬ್ಬರಾವ್, ಪ್ರೊ.ಕೆ.ಇ.ರಾಧಾಕೃಷ್ಣ, ಸಾಹಿತಿ ಐರಸಂಗ ಅವರಿಗೆ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ಚಲನಚಿತ್ರೋದ್ಯಮಿ ಸಿ.ವಿ.ಎಲ್.ಶಾಸ್ತ್ರಿ ಅಧ್ಯಕ್ಷತೆ ವಹಿಸುವರು.

ಗೋಸಂಧ್ಯಾ : ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವ ಸಾರುವ ಸಾರ್ವಜನಿಕ ಸಮಾವೇಶ ಗಿರಿನಗರ ಮೈದಾನ(ಸ್ವಾಮಿ ವಿವೇಕಾನಂದ ಪಾರ್ಕ್ ಬಳಿ)ದಲ್ಲಿ ಶನಿವಾರ ಸಂಜೆ 5ಕ್ಕೆ ಆರಂಭಗೊಳ್ಳಲಿದೆ. ಶ್ರೀರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ದಿವ್ಯಸಾನಿಧ್ಯವಹಿಸುವರು.

ಪುಸ್ತಕ ಬಿಡುಗಡೆ : ಅಂಕಿತ ಪುಸ್ತಕ ಹೊರತಂದಿರುವ ಹೊ.ರಾ.ಸತ್ಯನಾರಾಯಣರಾವ್ ಅವರ 'ಕನ್ನಡ ಸಾಹಿತ್ಯ ಲೋಕದ ಗಣ್ಯರು', ಸಂಪಟೂರು ವಿಶ್ವನಾಥ್ ಅವರ 'ಹಬ್ಬಗಳು ಮತ್ತು ದಿನಾಚರಣೆಗಳು' ಪುಸ್ತಕಗಳು ಬುಧವಾರ(ಅ.24)ಬಿಡುಗಡೆಯಾದವು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more