ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲಿಯೇ‘ಧರ್ಮಕಾರಣ’ ಮೇಲಿನ ನಿಷೇಧ ತೆರವು?

By Staff
|
Google Oneindia Kannada News


Basavanna, the leader of 12th Centurys Vachana movement ಬೆಂಗಳೂರು : ಬಸವಣ್ಣನಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದಗಳ ಸುಳಿಗೆ ಸಿಲುಕಿ ರಾಜ್ಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ‘ ಧರ್ಮಕಾರಣ’ ಕಾದಂಬರಿಗೆ, ಮುಕ್ತಿ ದೊರಕುವ ದಿನಗಳು ಹತ್ತಿರದಲ್ಲೇ ಇವೆ!

ನಿಷೇಧವನ್ನು ತೆರವುಗೊಳಿಸಲು ಸಿದ್ಧ ಎಂದು ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ಕಾದಂಬರಿ ಬಗ್ಗೆ ನಮ್ಮದೇನೂ ಅಭ್ಯಂತವಿಲ್ಲ. ಆದರೆ ಕೆಲವು ಅಂಶಗಳು ಸಮುದಾಯವೊಂದರ ಭಾವನೆಗಳಿಗೆ ನೋವು ಮಾಡುವಂತಿವೆ. ಆ ವಿವಾದಾತ್ಮಕ ಭಾಗಗಳನ್ನು ಕೈಬಿಟ್ಟರೆ ಸೂಕ್ತ ಎಂದು ಸರ್ಕಾರದ ಪರವಾಗಿ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಕೋರ್ಟ್‌ಗೆ ವಿನಂತಿ ಸಲ್ಲಿಸಿದರು. ಈ ಬಗೆಗಿನ ವಿಚಾರಣೆಯನ್ನು ಕೋರ್ಟ್‌ ಮುಂದೂಡಿತು.

ಏನಿದು ಧರ್ಮಕಾರಣ? : 1995ರಲ್ಲಿ ಪಿ.ವಿ.ನಾರಾಯಣ ಬರೆದಿದ್ದ ‘ಧರ್ಮಕಾರಣ’ ಕಾದಂಬರಿ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಕಾದಂಬರಿಯಲ್ಲಿ ಬಸವಣ್ಣ, ಅಕ್ಕನಾಗಮ್ಮ ಮತ್ತಿತರ ಪಾತ್ರಗಳಿಗೆ ಅಪಚಾರ ಮಾಡಲಾಗಿದೆ ಎಂದು ವೀರಶೈವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಲೇಖಕರು ಅಪಚಾರವೆಸಗಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.

ಕೊನೆಗೆ ಸರ್ಕಾರ ಕಾದಂಬರಿ ಮಾರಾಟಕ್ಕೆ ನಿಷೇಧ ವಿಧಿಸಿತ್ತು. ಸರ್ಕಾರದ ತೀರ್ಮಾನವನ್ನು ಹೈಕೋರ್ಟ್‌ ಸಹಾ ಎತ್ತಿಹಿಡಿದಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ, ಸುಪ್ರೀಂಕೋರ್ಟ್‌ನಲ್ಲಿ ಪಿ.ವಿ.ನಾರಾಯಣ, ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಜಿ.ವೆಂಕಟಸುಬ್ಬಯ್ಯ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಈ ಬಗ್ಗೆ ನೀವೇನಂತೀರಾ?

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X