ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಸನಕಟ್ಟೆ, ವಸ್ತಾರೆ, ಕಾಗಿನೆಲೆ ಅವರ ಹೊಸ ಬುಕ್‌ ಬೇಕಾ?

By Staff
|
Google Oneindia Kannada News


3 books by Kaginela, Vastare, Agasanakatte ಬೆಂಗಳೂರು : ಬರುವ ಭಾನುವಾರ(ಜ.28) ಬೆಂಗಳೂರಿನಲ್ಲಿ ಮತ್ತೆ ಮೂರು ಪುಸ್ತಕಗಳು ಪ್ರಕಟಗೊಳ್ಳಲು ಸಜ್ಜಾಗಿವೆ.

ಪ್ರತೀ ಭಾನುವಾರ ಮತ್ತೆ ಯಾವುದೇ ವಾರವಾಗಲಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಅನೇಕಾನೇಕ ಕೃತಿಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಶೇಕಡ 60ರಷ್ಟು ನೇರವಾಗಿ ಸರ್ಕಾರದ ಗ್ರಂಥಾಲಯಗಳಲ್ಲಿ ಲೀನವಾಗುತ್ತವೆ. ಗೌರವ ಪ್ರತಿ, ಉಚಿತ ಪ್ರತಿ, ದಾಕ್ಷಿಣ್ಯದ ಪ್ರತಿ ಎಲ್ಲಾ ಕೊಟ್ಟ ನಂತರ ಉಳಿಯುವ ಪ್ರತಿಗಳನ್ನು ಯಾರು ಕೊಳ್ಳುತ್ತಾರೋ, ಅದ್ಯಾರು ಓದುತ್ತಾರೋ.. ಏನೋ?

ಈ ನಡುವೆ ಭಾನುವಾರ ಲೋಕರ್ಪಣೆಗೊಳ್ಳಲಿರುವ ಮೂರೂ ಪುಸ್ತಕಗಳನ್ನು ಬರೆದ ಲೇಖಕರು, ಹವ್ಯಾಸಿ ಹಂತವನ್ನು ಮೀರಿದವರು. ಉದಯೋನ್ಮುಖ ಗೆರೆಗಳನ್ನು ದಾಟಿ ತಮ್ಮದೇ ಆದ ಓದುವ ವರ್ಗವನ್ನು ಸೃಷ್ಟಿಸಿಕೊಂಡಿರುವಂಥಹ ಲೇಖಕರು. ಮನನೀಯ ಕತೆಗಾರರು ಹಾಗೂ ಮನೋಜ್ಞ ಬರಹಗಾರರು.

ಕೃತಿ ಲೇಖಕರ ವಿವರಗಳು ಹೀಗಿವೆ :

  • ಶಕುಂತಳಾ -ಡಾ. ಗುರುಪ್ರಸಾದ್‌ ಕಾಗಿನೆಲೆ
  • ಹಟ್ಟಿಯೆಂಬ ಭೂಮಿಯ ತುಣಕು- ಲೋಕೇಶ ಅಗಸನಕಟ್ಟೆ
  • ಹಕೂನ ಮಟಾಟ- ನಾಗರಾಜ ವಸ್ತಾರೆ
ಕೃತಿಗಳ ಬಗೆಗೆ ಮಾತನಾಡುವವರು :
  • ಸಿ.ಎನ್‌. ರಾಮಚಂದ್ರನ್‌
  • ಎಸ್‌. ದಿವಾಕರ್‌
  • ಎಂ. ಎಸ್‌. ಶ್ರೀರಾಮ್‌
  • ವಿಶ್ವನಾಥ್‌.
ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು.

ದಿನಾಂಕ -ಸಮಯ : ಜನವರಿ 28 ಭಾನುವಾರ, ಸಮಯ ಬೆಳಗ್ಗೆ : 10 ಗಂಟೆ.

ಛಂದ ಪುಸ್ತಕ ಪ್ರಕಾಶನ ಈ ಕೃತಿಗಳನ್ನು ಹೊರತಂದಿದೆ. ಕಾರ್ಯಕ್ರಮಕ್ಕೆ ಅಕ್ಷರ ಮೋಹಿತರಾದ ನೀವೆಲ್ಲರೂ ಬರಬೇಕು. ಯಾಕೆಂದರೆ ಬರಹ ಬ್ರೆೃಲ್‌ ಪರಿಚಯ ಕಾರ್ಯಕ್ರಮವೂ ಇದೆ. ಲಘು ಉಪಹಾರವೂ ಇದೆ!

ಎಲ್ಲರಿಗೂ ಪ್ರೀತಿಯಿಂದ ಛಂದ ಪರವಾಗಿ ವಸುಧೇಂದ್ರ ಸ್ವಾಗತ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ : 98444 22782. ಇ-ಅಂಚೆ ವಿಳಾಸ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X