• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಗೆಗನ್ನಡಂ ಗೆಲ್ಗೆ’ : ನಗೆ ಸಮೀಕ್ಷೆ ಜೊತೆ ನಗೆ ಉಪ್ಪಿನಕಾಯಿ

By Staff
|

ದೂರದ ಕನ್ನಡಿಗರನ್ನು, ನಾಡ ಕನ್ನಡಿಗರೊಂದಿಗೆ ಬೆಸೆವ ಕಲ್ಯಾಣ ಕೆಲಸದಲ್ಲಿ ಅಭಿನವ ಪ್ರಕಾಶನಕ್ಕೆ ಸದಾ ಉತ್ಸಾಹ. ಈಗ ನಗೆ ಜೊತೆ ಬೆಸುಗೆ.

  • ಅಮೃತಾ

Nagegannadam Gelge releasedಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಸಹಯೋಗದೊಂದಿಗೆ ಅಭಿನವ ಪ್ರಕಾಶನ, ‘ನಗೆಗನ್ನಡಂ ಗೆಲ್ಗೆ’ ಎನ್ನುವ ಹಾಸ್ಯ ಲೇಖನಗಳ ಕೃತಿಯನ್ನು ಹೊರತಂದಿದೆ. ಪುಸ್ತಕದ 546ಪುಟಗಳಲ್ಲೂ ಹಾಸ್ಯಧಾರೆ. ನಗುವ ಬಯಕೆ ಉಳ್ಳವರು, ಮುಖದ ನೆರಿಗೆಗಳನ್ನು ಸಡಿಲ ಮಾಡಿಕೊಂಡು ಓದಲು ಆರಂಭಿಸಬಹುದು.

ಎಚ್‌. ಕೆ. ನಂಜುಂಡ ಸ್ವಾಮಿ ಮತ್ತು ಎಚ್‌. ವೈ. ರಾಜಗೋಪಾಲ್‌ ಸಂಪಾದಿಸಿರುವ ಈ ಕೃತಿ, ಅಮೆರಿಕಾದ ವಸಂತೋತ್ಸವದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇಲ್ಲಿ ಬೆಂಗಳೂರಿನಲ್ಲಿ ಶನಿವಾರ(ಮೇ.19) ಬೆಳಗ್ಗೆ 11.30ಕ್ಕೆ ಪ್ರೆಸ್‌ಕ್ಲಬ್‌ನಲ್ಲಿ ಸಿ.ಆರ್‌.ಸಿಂಹ ಅವರಿಂದ ಲೋಕಾರ್ಪಣೆಗೊಂಡಿದೆ.

ಹಿರಿಯ ಸಾಹಿತಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರನ್ನು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ಪುಸ್ತಕ ಬೇಕಾ?

ಪುಸ್ತಕದ ಬೆಲೆ 250 ರೂಪಾಯಿ. ಆಸಕ್ತರು ಪುಸ್ತಕಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ -

ಅಭಿನವ

17/18-2, ಮೊದಲನೆಯ ಮುಖ್ಯರಸ್ತೆ,

ಮಾರೇನಹಳ್ಳಿ, ವಿಜಯನಗರ,

ಬೆಂಗಳೂರು -40

ದೂ : 23505825, 9448804905

ಪುಸ್ತಕದ ಬಗ್ಗೆ..

ನಗೆಗನ್ನಡಂ ಗೆಲ್ಗೆ! -ಈ ಹೆಸರೇ ಬಲುಬಲು ಆಕರ್ಷಕ. ಕೃತಿಯ ಮೊದಲ ಭಾಗದಲ್ಲಿ ‘ನಗೆನಾಡ ಸಿರಿವಂತರು’ ಶೀರ್ಷಿಕೆಯಡಿಯಲ್ಲಿ ಕೈಲಾಸಂ, ರಾಶಿ, ಕಸ್ತೂರಿ, ಶ್ರೀರಂಗ ವೈಎನ್ಕೆ, ಬ್ಚೀಜಜಿ, ಪಾ.ವೆಂ.ಆಚಾರ್ಯ , ಅ.ರಾ.ಮಿತ್ರರನ್ನು ಪರಿಚಯಿಸುವ ಬರಹಗಳನ್ನು ಕಾಣಬಹುದು.

ಎರಡನೇ ಭಾಗದಲ್ಲಿ ‘ಹೊರನಾಡ ನಗೆಹೊನಲು’. ಹೊರನಾಡಿನ ಕನ್ನಡ ಲೇಖಕರಾದ ವಲ್ಲೀಶ, ಮೈ.ಶ್ರೀ.ನಟರಾಜ, ನಳಿನ ಮೈಯ, ಹಂ.ಕ.ರಾಮಪ್ರಿಯನ್‌ ಮತ್ತಿತರರ ಹಾಸ್ಯ ಲೇಖನಗಳು ಓದುಗರನ್ನು ಎದುರುಗೊಳ್ಳುತ್ತವೆ. ಇಷ್ಟು ಮಾತ್ರವಲ್ಲದೇ ಕವನ, ಚುಟುಕ, ನಾಟಕ ಹೀಗೆ ಏನೇನೋ ಸಾಕಷ್ಟು ನಗೆ ಸರಕುಗಳು.

***

ಎಚ್‌. ಎಸ್‌. ರಾಘವೇಂದ್ರರಾವ್‌, ಪುಸ್ತಕದ ಬೆನ್ನುಡಿ ಬರೆದಿದ್ದಾರೆ. ಸಾಹಿತ್ಯಾಸಕ್ತರು ಬೆನ್ನುಡಿಯ ಪೂರ್ಣ ಪಾಠವನ್ನು ಇಲ್ಲಿ ಗಮನಿಸಬಹುದು.

‘ಕತೆ, ಕವಿತೆ ಮತ್ತು ಕಾದಂಬರಿಗಳಿಗೆ ಅತಿಯಾದ ಮಹತ್ವಕೊಟ್ಟು, ಉಳಿದ ಪ್ರಕಾರಗಳನ್ನು ನಿರ್ಲಕ್ಷಿಸಿರುವ ಕರ್ನಾಟಕದ ನಮಗೆ ಬುದ್ಧಿಕಲಿಸುವಂತೆ, ಈ ಕೃತಿಯು ಪ್ರಕಟವಾಗಿದೆ. ಅನಿವಾಸಿ ಕನ್ನಡಿಗರು ಬರೆದ ಕಥೆಗಳ ಸಂಕಲನ, ಮಾಸ್ತಿ, ಪು.ತಿ.ನ. ಹಾಗೂ ಕುವೆಂಪು ಅವರನ್ನು ಕುರಿತು ಈಗಾಗಲೇ ಪ್ರಕಟವಾಗಿರುವ ಸಂಪುಟಗಳು ಮತ್ತು ಈ ಪುಸ್ತಕವು, ಅವರ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗಳಿಗೆ ಸಾಕ್ಷಿಯಾಗಿವೆ.

ಉದ್ಯೋಗದ ಒತ್ತಡಗಳ ಫಲವಾಗಿ ಇವರು ಬಳಸುವ ಭಾಷೆಯು ಇಂಗ್ಲಿಷ್‌. ಆದರೆ, ಕನ್ನಡದಲ್ಲಿ ಅಳುವುದನ್ನು, ಕನ್ನಡದಲ್ಲಿ ನಗುವುದನ್ನು ಅಭ್ಯಾಸ ಮಾಡಿಕೊಂಡ ಈ ಮನಸ್ಸುಗಳು ತಮ್ಮ ಅಂತರಂಗವನ್ನು ಇಲ್ಲಿ ಹಂಚಿಕೊಂಡಿವೆ. ನಕ್ಕು ನಗಿಸುವ ವರವನ್ನು ಕೇಳಿಕೊಂಡುಬಂದ ಮಹನೀಯರಿಗೆ ನುಡಿನಮನವನ್ನು ಸಲ್ಲಿಸಿವೆ.

ಬಾಲ್ಯಾನುಭವಗಳ ಮರೆಯಲಾಗದ ಲೋಕವು ಇಲ್ಲಿನ ಹಾಸ್ಯದ ಒಂದು ಮೂಲವಾದರೆ, ಸ್ವಕೀಯವಾಗಿಯೂ ಅನ್ಯವಾದ ಅಮೆರಿಕಾದ ಅನಾವರಣವು ಅದರ ಇನ್ನೊಂದು ನೆಲೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ, ವಿಭಿನ್ನ ಕಾಲಗಳಲ್ಲಿ ವಲಸೆ ಹೋದ ಕನ್ನಡಿಗರಲ್ಲಿ, ಕೆಲವರು ಅಮೆರಿಕನ್‌ ಹಾಸ್ಯದ ವಿಭಿನ್ನ ಪರಿಗಳನ್ನು ಅನಾವರಣ ಮಾಡಿದ್ದಾರೆ, ಉಳಿದ ಅನೇಕರು ಕನ್ನಡದ ಹಾಸ್ಯ ವಿಡಂಬನೆಗಳ ಪರಂಪರೆಯನ್ನು ಮುಂದುವರಿಸಿದ್ದಾರೆ.

ಬದುಕನ್ನು ಸಹನೀಯವಾಗಿಸುವ ನಗೆ ಸನ್ನಿವೇಶಗಳನ್ನು ಅಂತೆಯೇ ಕನ್ನಡ ಭಾಷೆಯ ಮೂಲೆಮುಡುಕುಗಳಲ್ಲಿ ಅಡಗಿರುವ ನಗೆಸಾಧ್ಯತೆಗಳನ್ನು ಇಲ್ಲಿ ಹುಡುಕಲಾಗಿದೆ. ಅನೇಕ ಲೇಖಕರು, ಇಂದಿನ ಕರ್ನಾಟಕ- ದಲ್ಲಿಯೂ ಮರವೆಗೆ ಸಂದಿರುವ ವಿವರಗಳನ್ನು, ಜೀವನ ಕ್ರಮಗಳನ್ನು ಜತನವಾಗಿ ಕಾಪಾಡಿಕೊಂಡು, ಮರಳಿ ನೀಡಿದ್ದಾರೆ.

ಕನ್ನಡದ ಹಾಸ್ಯಸಾಹಿತ್ಯವನ್ನು ಬೆಳೆಸಿದ ಮಹನೀಯರ ಸಾಧನೆಗಳನ್ನು ಬಹುಮಟ್ಟಿಗೆ ಮೆಚ್ಚಿಗೆಯಿಂದ, ಅಪರೂಪಕ್ಕೆ ವಿಮರ್ಶಾತ್ಮಕವಾಗಿ ನೋಡಿರುವ ಲೇಖನಗಳು ಈ ಪುಸ್ತಕದ ಮಹತ್ವವನ್ನು ಹೆಚ್ಚಿಸಿವೆ. ಕೈಲಾಸಂ, ರಾಜರತ್ನಂ, ರಾಶಿ, ಬಿ.ಜಿ.ಎಲ್‌. ಸ್ವಾಮಿ, ಅ.ರಾ.ಸೇ. ಅವರಂತಹ ಹಿರಿಯರಿಂದ ಮೊದಲಾಗಿ ದುಂಡಿರಾಜ್‌ ಅವರವರೆಗೆ ಈ ಲೇಖನಗಳ ಹರಹಿದೆ. ಕರಾವಳಿ, ಉತ್ತರ ಕರ್ನಾಟಕ, ಜಾನಪದ ಮುಂತಾದವಕ್ಕೆ ವಿಶಿಷ್ಟವಾದ ಹಾಸ್ಯ-ವಿನೋದಗಳ ಸಮೀಕ್ಷೆಯೂ ಇಲ್ಲಿ ನಡೆದಿದೆ. ಇದು ಉಪಯುಕ್ತವಾದ, ಸಂತೋಷಕೊಡುವ ಸಂಪುಟ. ನಗೆಗನ್ನಡವು ಇಲ್ಲಿ ಗೆದ್ದಿದೆ’.

***

ಸಾಹಿತ್ಯ ರಂಗದ ಬಗ್ಗೆ ಎರಡು ಮಾತು :

ಉತ್ತರ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಸಿರುವ ಕನ್ನಡಿಗರ ಸಾಹಿತ್ಯಾಸಕ್ತಿಗಳ ಪೋಷಣೆ, ಅಭಿವೃದ್ಧಿಗೆ ಮೀಸಲಾದ ಸಂಸ್ಥೆ ‘ಕನ್ನಡ ಸಾಹಿತ್ಯ ರಂಗ’. ಅಲ್ಲಿನ ಸಾಹಿತ್ಯಪ್ರೇಮಿ ಕನ್ನಡಿಗರನ್ನೆಲ್ಲ ಆಗಿದ್ದಾಗ್ಗೆ ಸೇರಿಸಿ ಸಾಹಿತ್ಯೋತ್ಸವಗಳನ್ನು ಆಯೋಜಿಸುವುದು, ಉತ್ತಮ ವಿಚಾರಶೀಲ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುವುದು, ಅವರ ಬರಹಗಳನ್ನು ಪ್ರಕಟಿಸುವುದು ರಂಗದ ಉದ್ದೇಶ.

‘ಕುವೆಂಪು ಸಾಹಿತ್ಯ ಸಮೀಕ್ಷೆ’ (ಸಂ. ಆಹಿತಾನಲ) ‘ಆಚೀಚೆಯ ಕಥೆಗಳು’ (ಕಡಲಾಚೆಯ ಕನ್ನಡ ಕಥಾಸಂಕಲನ- ಸಂ. ಗುರುಪ್ರಸಾದ್‌ ಕಾಗಿನೆಲೆ) ಮತ್ತು ‘ನಗೆಗನ್ನಡಂ ಗೆಲ್ಗೆ!’-ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ (ಸಂ. ಎಚ್‌.ಕೆ. ನಂಜುಂಡಸ್ವಾಮಿ ಮತ್ತು ಎಚ್‌.ವೈ ರಾಜಗೋಪಾಲ್‌) ರಂಗದ ಪ್ರಕಟಣಾ ಇತಿಹಾಸದ ಮೈಲುಗಲ್ಲುಗಳು. ಈ ಪ್ರಕಟಣೆಗಳು ಅಭಿನವದ ಸಹ ಪ್ರಕಟಣೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X