ಡಾ. ಅಶ್ವತ್ಥ ಎನ್. ರಾವ್ ಅವರ ಪರಿಚಯ
ಡಾ. ಅಶ್ವತ್ಥ ಎನ್.ರಾವ್ ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ 1963ರಲ್ಲಿ ಅಮೆರಿಕಾಕ್ಕೆ ಬಂದು ಶಸ್ತ್ರ ಚಿಕಿತ್ಸೆಮತ್ತು ಆರ್ಥೋಪಿಡಿಕ್ ಸರ್ಜರಿ ವಿಭಾಗದಲ್ಲಿ ತರಬೇತಿ ಪಡೆದರು.
1970ರಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅದರೊಡನೆ ಸೆಂಟ್ ಲೂಯಿಸ್ನ ವಿಶ್ವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿಯೂ ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ
ವಿಷಯಗಳನ್ನು ಕುರಿತು ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.
ಮೊದಲಿಂದಲೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇಟ್ಟುಕೊಂಡಿರುವ ಡಾ. ಅಶ್ವತ್ ಅವರಿಗೆ,ಅಮೆರಿಕನ್ನಡ’ ಪತ್ರಿಕೆಯು ಕನ್ನಡದಲ್ಲಿ ಬರೆಯುವ ಗೀಳನ್ನು ಹುಟ್ಟಿಸಿತು ಎಂದು ಅವರೇ ಹೇಳುತ್ತಾರೆ. ಇವರು ಆ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಲ್ಲದೆ, ಸೆಂಟ್ ಲೂಯಿಸ್ ಕನ್ನಡ ಕೂಟ ಸಂಗಮ’ದ ಸಾಹಿತ್ಯ ಸಂಚಿಕೆ ಮತ್ತು ವಿಶೇಷ ಸಂಚಿಕೆಗಳ ಸಂಪಾದಕರಾಗಿದ್ದರು. ಹ್ಯೂಸ್ಟನ್, ಡೆಟ್ರಾಇಟ್, ಆರ್ಲಾಂಡೋ ವಿಶ್ವ ಕನ್ನಡ ಸಮ್ಮೇಳನಗಳ ಸ್ಮರಣ ಸಂಚಿಕೆ ಮಂಡಳಿಯಲ್ಲಿ ಸಹಾ ಕಾರ್ಯವಹಿಸಿದ್ದಾರೆ. ಇವರ ಲೇಖನಗಳು ಅಮೆರಿಕ ಮತ್ತು ಭಾರತದ ಹಲವಾರು ಪತ್ರಿಕೆಗಳಲ್ಲೂ ಸಹಾ ಪ್ರಕಟವಾಗಿವೆ.
ಕನ್ನಡ ಸಾಹಿತ್ಯ ಕೃಷಿಯನ್ನು ಸಾಕಷ್ಟು ಮಾಡಿರುವ ಡಾ. ಅಶ್ವತ್ಥ ರಾವ್ ಅವರು ಡಿಟೂರ್ ಟು ಹ್ಯಾಪಿನೆಸ್’ ಎಂಬ ಆಂಗ್ಲ ಕಥೆಗಳ ಸಂಕಲನವನ್ನು ಕೂಡ ಇತ್ತೀಚೆಗೆ ಪ್ರಕಟಿಸಿದ್ದಾರೆ. ಇವರು ಪತ್ನಿ ಶಕುಂತಲ, ಮಕ್ಕಳು ಗೀತಾ, ಸೋನಿ, ವಿಜಾಯ್ ಮತ್ತು ಮೂರು ಮೊಮ್ಮಕ್ಕಳೊಂದಿಗೆ ಸೆಂಟ್ ಲೂಯಿಸ್ನಲ್ಲಿ ವಾಸಿಸುತ್ತಿದ್ದಾರೆ.