ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಡ ಕರಗಿದ ಮೇಲೆ ಮತ್ತು ಇತರ ಕಥೆಗಳು

By Staff
|
Google Oneindia Kannada News


ಸೆಂಟ್ ಲೂಯಿಸ್‌ ವಾಸಿ ಡಾ.ಅಶ್ವಥ್ ಅವರ ಕಥಾ ಸಂಕಲನದ ಬಗ್ಗೆ ಎರಡು ಮಾತು.



Dr Ashwath N Rao’ ಇದು ಡಾ. ಅಶ್ವಥ್ ಅವರ ಹನ್ನೆರೆಡು ಕಥೆಗಳ ಸುಮಾರು ಇನ್ನೂರು ಪುಟಗಳ ಕಥಾಗುಚ್ಛ. ಈ ಕಿರು ಹೊತ್ತಿಗೆ, ಡಾ ಅಶ್ವಥ್ ಅವರ ಕಳೆದ ಮೂರು ದಶಕದ ಅವಧಿಯ ಕತೆಗಳ ಸಂಕಲನ.

ಇಲ್ಲಿರುವ ಕಥೆಗಳಲ್ಲಿ ಹಲವು ವಿಶೇಷಗಳಿವೆ. ವಿಚಾರಪ್ರಚೋದಕ, ಮನೋರಂಜಕ, ತಿಳಿಹಾಸ್ಯದಿಂದ ತುಂಬಿರುವ ಸಣ್ಣ ಕಥೆಗಳಲ್ಲದೆ ನಿಜ ಜೀವನ ಘಟನೆಗಳನ್ನೂ ಮತ್ತು ವಿವಿಧ ವಿಷಯಗಳ ಬಗೆಗಿನ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ ಪ್ರಾಸಂಗಿಕ ಕಥನಗಳನ್ನಾಗಿ ಮೂಡಿಸಿದ್ದಾರೆ ಲೇಖಕರು.

ಮೊದಲೆರಡು ಕಥೆಗಳನ್ನು ಓದಿದ ನಂತರ, ನಾನು ಈ ಬರಹಗಳನ್ನು ಬೇರೆ ಬರಹಗಾರರ ಕೃತಿಗಳಿಗೆ ಹೋಲಿಸಲು ಯತ್ನಿಸದೆ ಇದ್ದರೂ, ಅಪ್ರಯತ್ನಪೂರ್ವಕವಾಗಿ ನೆನಪಾದದ್ದು ಆಂಗ್ಲ ಕಥೆಗಾರ ಜೆಫ್ರಿ ಆರ್ಚರ್‌ನ a quiver full of arrowsಎಂಬ ಸಣ್ಣ ಕಥೆಗಳ ಸಂಕಲನ. ಇಲ್ಲಿರುವ ಕಥೆಗಳು ಖಂಡಿತವಾಗಿ ಅವುಗಳಿಗಿಂತ ಭಿನ್ನ. ಆದರೆ ಶುರುವಿನಿಂದ ಓದಿಸಿಕೊಂಡು ಹೋಗುವ ಮತ್ತು ಅವುಗಳು ಅಂತಿಮಗೊಳ್ಳುವ ರೀತಿ ನಿಜಕ್ಕೂ ಜೆಫ್ರಿಯ ನೆರಳೇ ಸರಿ.

ಅಮೆರಿಕನ್ನಡಿಗರು ಸಾಧಾರಣವಾಗಿ ಬರೆಯುವಂತಹ ಭಾರತ ಅಮೆರಿಕಕ್ಕೆ ಸಂಬಂಧಿಸಿದಂತಹ ಕಥೆಗಳೂ ಇಲ್ಲಿವೆ. ಮೊದಲ ಮೂರು ಕಥೆಗಳಾದ ಮೋಡ ಕರಗಿದೆ ಮೇಲೆ’, ಹರ್ಷದೆಡೆಗೆ’ ಮತ್ತು ಕನಸು ನನಸಾಯಿತು’ ಕಥೆಗಳನ್ನು ಈ ವರ್ಗಕ್ಕೆ ಸೇರಿಸಬಹುದಾದರೂ ಉಳಿದ ಕಥೆಗಳ ನೆಲೆಗಟ್ಟೇ ಬೇರೆ.

60ರ ದಶಕದ ಭಾರತದಲ್ಲಿನ ಮೂರು ಗೆಳೆಯರ ಕಥೆಯನ್ನು ಹೇಳುತ್ತ ಹೋಗುವಾಗ ಅವರುಗಳಲ್ಲೊಬ್ಬನ ಅಮೇರಿಕೆಯಲ್ಲಿನ ವೈವಾಹಿಕ, ಸಾಂಸಾರಿಕ ಜೀವನದ ಚಿತ್ರಣದೊಂದಿಗೆ ಮುಂದುವರೆಯುವ ಮೋಡ ಕರಗಿದೆ ಮೇಲೆ’ಯಂತಹ ಉತ್ತಮ ಶೈಲಿಯ ಕಥೆಯನ್ನು ಮೊದಲೇ ಲೇಖಕರು ಅರ್ಪಿಸಿ ಮುಂಬರುವ ಕಥೆಗಳಲ್ಲಿ ಓದುಗರ ಆಸಕ್ತಿಯನ್ನು ಹೆಚ್ಚಿಸಿದ್ದಾರೆ.

ಹರ್ಷದೆಡೆಗೆ’ಯಲ್ಲಿಯೂ ಸಹ, ಭಾರತದಲ್ಲಿ ಸಾಂಸಾರಿಕ ಕಷ್ಟ, ಕಾರ್ಪಣ್ಯಗಳನ್ನು ಅನುಭವಿಸುತ್ತಿರುವ ಮಹಿಳೆಯ ಕಥೆ ಹೇಳುತ್ತದಾದರೂ, ಆಕೆ ಅಮೆರಿಕೆಗೆ ಬಂದ ನಂತರ ನಡೆಯುವ ಪ್ರಸಂಗಗಳು ಆ ಕಥೆಯ ದಿಕ್ಕನ್ನೇ ಬಹುವಾಗಿ ಬದಲಿಸಿ ಆಶ್ಚರ್ಯಕರ ರೀತಿಯಲ್ಲಿ ಕೊನೆಗೊಳ್ಳುವುದು ಓದುಗರ ವಿಸ್ಮಯಗೊಳಿಸುತ್ತದೆ. ಕನಸು ನನಸಾಯಿತು’ ಬೇರೆಯಲ್ಲದಕ್ಕಿಂತ ದೀರ್ಘವಾಗಿರುವ ಒಂದು ಸಣ್ಣ ಕಥೆ. ಇಲ್ಲಿ ಮನುಷ್ಯನ ನಡವಳಿಕೆ ಮತ್ತು ಅಭಿಪ್ರಾಯಗಳಲ್ಲಿ ಮೂಡಿಬರುವ ದ್ವಂದ್ವ ಹಾಗೂ ಮಾನವೀಯ ಸಂಬಂಧಗಳ ವಿಶ್ಲೇಷಣೆಯೂ ಇದೆ. ಸುಲಭವಾಗಿ ಓದಿಸಿಕೊಂಡು ಹೋಗುವ ಈ ಕಥೆಯ ಮುಕ್ತಾಯ ಓದುಗರ ನಿರೀಕ್ಷೆ ಮೀರಿದ್ದು.

ತೀರ ತಡವಾಯಿತು’ ಎಂಬ ಕಥೆ ಭಾರತದಿಂದ ಬಂದು ಅಮೆರಿಕೆಯಲ್ಲಿನೆಲಸುವ ದಂಪತಿಗಳು ಅಲ್ಲಿನ ಅಂದರೆ ಅಮೆರಿಕೆಯಲ್ಲಿನ ಸಂಸ್ಕೃತಿಯಲ್ಲಿ ಬೆರೆಯದಿರದಂತೆ ಎಚ್ಚರಿಕೆ ವಹಿಸಿ, ಅದೇ ರೀತಿ ಮಕ್ಕಳನ್ನು ಬೆಳೆಸಲು ಪ್ರಯತ್ನಿಸುವ ಹಾಗೂ ಇಲ್ಲಿನ ಸಮಾಜದ ರೀತಿ ರಿವಾಜುಗಳನ್ನು ಅರಿತೂ ಸಹಾ ಮಕ್ಕಳ ಮೇಲೆ ಹೇರಲಿಚ್ಛ್ಛಿಸುವ ಕಟ್ಟಳೆಗಳಿಂದ, ಮುಂದಾಗುವ ವೈಯಕ್ತಿಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. ನಿಜಕ್ಕೂ ಈ ಕಥೆ ಅಲ್ಲಲ್ಲಿ ನಡೆದಿರಲ್ಲಿಕ್ಕೂ ಉಂಟು. ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿರುವ ಈ ಕಥೆಯನ್ನು ಓದಿದ ನಂತರ ಕೆಲವರಿಗಾದರೂ ಕಣ್ಣಲ್ಲಿ ಎರಡು ಹನಿ ನೀರು ಕಂಡರೆ ಆಶ್ಚರ್ಯವಿಲ್ಲ.

ನಾ ಕಂಡ ದೇವರು’ ಮತ್ತು ಗಂಧರ್ವ ಕಲೋಪಾಸಕರು’ ನಿಜ ಘಟನೆಗಳ ಸಂಬಂಧಿಸಿದ್ದಾದರು, ಅವು ಕೇವಲ ಘಟನೆಗಳ ವಿವರ ಎಂದು ತಳ್ಳ್ಳಿಹಾಕುವಂತಿಲ್ಲ. ನಾ ಕಂಡ ದೇವರು’ಗಳಲ್ಲಿನ ಮೂರು ಘಟನೆಗಳು, ಹೇಗೆ ಕಾಣದ ಆ ಒಂದು ಅದ್ಭುತ, ಅದೃಶ್ಯ ಶಕ್ತಿ ಎಣಿಸಲಾಗದಂತಹದ ಸಮಯದಲ್ಲಿ ಬಂದು ನಮ್ಮನ್ನು ಕಷ್ಟಗಳಿಂದ ಪಾರುಮಾಡುತ್ತವೆ ಮತ್ತು
ಅಂತಹ ಸಂದರ್ಭಗಳಲ್ಲಿ ನಾವು ಕಾಣದ ದೇವರನ್ನು ಅಪದ್ಬಾಂಧವರಲ್ಲಿ ಹೇಗೆ ಕಾಣುತ್ತೇವೆ ಎಂಬುದನ್ನು ನಿರೂಪಿಸುತ್ತದೆ. ಅದರಲ್ಲೂ, ಲೇಖಕ ಡಾ. ಅಶ್ವತ್ ಅವರು ತಾವು ಸ್ವತಃ ಕಂಡ ದೇವರ’ ಕಥೆಯನ್ನು ಓದುವಾಗುವಂತೂಘಟನೆಗಳು ನಮ್ಮ ಕಣ್ಣೆದುರೇ ನಡೆದಂತೆ ತೋರುತ್ತದೆ.

ಗಂಧರ್ವ ಕಲೋಪಾಸಕರು’ ಎಂಬುದರಲ್ಲಿರುವ ನಾಲ್ಕು ನೈಜ ಘಟನೆಗಳ ಕಥನ ಸಂಗೀತಗಾರರಿಗೆ ಸಂಬಂಧಿಸಿದ್ದವು. ಈ ಕಲಾವಿದರ ಒಡನಾಟದಿಂದಾಗುವ ಸ್ವಾರಸ್ಯಕರ ಅನುಭವಗಳ ವಿವರ ಇಲ್ಲಿವೆ. ಅಲ್ಲದೆ ಕೆಲವೊಮ್ಮೆ ಅವರ ಆ ಅನುಭವಾಮೃತದ ನುಡಿಮುತ್ತುಗಳಿಂದ ಆಶ್ಚರ್ಯಗೊಂಡು ವಿವೇಕದ ಅರಿವು ಲೇಖಕರಲ್ಲಿ ಆದದ್ದನ್ನು ಇಲ್ಲೆ ಕಾಣಬಹುದು.

ಡಾ. ಅಶ್ವತ್ ಅವರ ಹಾಸ್ಯಪ್ರಿಯತೆಯ ಸಾಕ್ಷಿಯಾಗಿ ಕಾರ್ ವಾರ್ಮಿಂಗ್’ ಮತ್ತು ಅಮೆರಿಕನ್ ಮೈಡ್’ ಎರಡು ಉತ್ತಮ ಹಾಸ್ಯ ಕಥೆಗಳಾಗಿ ಮೂಡಿಬಂದಿವೆ. ನಾವು ನಮ್ಮ ಬಗ್ಗೆ ಬೇರೆಯವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸಲು, ಸ್ವಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುವ ಇಲ್ಲಿನ ಜೀವನ ಶೈಲಿಯನ್ನು ಅಳವಡಿಸುವಲ್ಲಿ ಎದುರಿಸುವ ಕಷ್ಟ, ಅತಂಕಗಳ ಮೇಲೆ ಅಣುಕು ನೋಟ ಬೀರಿರುವ ಈ ಕಥೆಗಳನ್ನು ನಾವೆಲ್ಲರೂ ಓದಬೇಕಾದದ್ದೆ.

ಹಣವಿಲ್ಲದಿದ್ದರೆ ಹಣ ಇಲ್ಲ’ ಎನ್ನುವುದೊಂದೇ ಚಿಂತೆಯಂತೆ. ಹಣವಿದ್ದರೆ ಸಾವಿರಾರು ಚಿಂತೆಯಂತೆ. ಈ ಮಾತುಗಳನ್ನು ಕಥೆ ರೂಪಕ್ಕೆ ಯಥಾವತ್ತಾಗಿ ಇಳಿಸಿದ್ದಾರೆ ’ಲಾಟರಿ ಟಿಕೇಟ್’ ಎಂಬ ತಿಳಿ ಹಾಸ್ಯ ಕಥೆಯಲ್ಲಿ. ಅಗೋಚರ ಸೌಂದರ್ಯ’ ಮತ್ತು ಮಲ್ಲಿಗೆಯ ವನ’ ಮತ್ತೆರೆಡು ಗಮನಾರ್ಹ ಕಥೆಗಳು.

ಡಾ. ಅಶ್ವತ್ ಅವರು ಬಹುಶಃ ತಮ್ಮ ಮನದಲ್ಲಿ, ಭಾರತವೋ, ಅಮೆರಿಕವೋ - ಯಾವುದು ಹಿತವೋ ಈ ಎರಡೊರಳಗೆ?’ ಕುರಿತ ಚಿಂತನೆಗಳನ್ನು, ಅಭಿಪ್ರಾಯಗಳನ್ನು ಇತರರೊಡನೆ ಈ ಎರಡೂ ಕಥೆಗಳ ಮೂಲಕ ಹಂಚಿಕೊಂಡಿದ್ದಾರೆ. ನಾನು - ತಾನು’ ಎಂಬುದರ ಹೆಗ್ಗಳಿಕೆ, ಪೈಪೋಟಿಯ ನಡುವೆ ಮತ್ತೊಬ್ಬರಲ್ಲಿ ಇರಬಹುದಾದ ಸೌಂದರ್ಯ (ಒಳ್ಳೆಯತನ)ವನ್ನು ನೋಡಲಾಗದಂತಹ ಪೊರೆ ಬೆಳಸಿಕೊಳ್ಳುವವರನ್ನು ಬಡಿದು ಕಣ್ತೆರೆಸುವ ಪ್ರಯತ್ನ ಅಗೋಚರ ಸೌಂದರ್ಯ’ದಲ್ಲಿ ಇದ್ದರೆ ಮಲ್ಲಿಗೆಯ ವನ’ದಲ್ಲಿ ಪರ ಭಾಷಾ ಸಂಸ್ಕೃತಿಯ ಮೇಲೆ ಪ್ರಭುತ್ವ ಸಾಧಿಸಿವೆಯೆಂದ ಭ್ರಮೆಯಿಂದ ಟೊಳ್ಳು ಜೀವನದಲ್ಲಿ ಹಾರಾಡುವವರನ್ನು ಭೂಮಿಗಿಳಿಸುವ ಪ್ರಯತ್ನ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X