ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮಲ್ಲಿಗೆ-65: ಆಹಾ ಎಂಥಾ ಮೋಹಕ ಸುಗಂಧ

By Staff
|
Google Oneindia Kannada News


K.S. Narasimha Swamy ಬೆಂಗಳೂರು : ಪ್ರೇಮಿಗಳ ಪಾಲಿನ ಭಗವದ್ಗೀತೆ; ‘ಮೈಸೂರು ಮಲ್ಲಿಗೆ’! ಕೆ.ಎಸ್‌.ನರಸಿಂಹಸ್ವಾಮಿ ಅವರ ಈ ಕವನ ಸಂಕಲನ ಪ್ರಕಟವಾಗಿ ಈಗ 65ವರ್ಷಗಳು ಸಂದಿವೆ. ಆದರೂ ಮಲ್ಲಿಗೆ ಇಂದೂ ತಾಜಾ ಆಗಿಯೇ ಉಳಿದಿದೆ!

1942ರಲ್ಲಿ ಪ್ರಕಟಗೊಂಡ ‘ಮೈಸೂರು ಮಲ್ಲಿಗೆ’ ಈವರೆಗೆ 30ಮುದ್ರಣಗಳನ್ನು ಕಂಡಿದೆ. ಎಲ್ಲರ ಮನೆಯ ಕಪಾಟಿನಲ್ಲೂ ಗತ್ತಿನಿಂದ ಕುಳಿತಿದೆ. ಪ್ರೀತಿಯ ವಿಷಯ ಮೈಸೂರು ಮಲ್ಲಿಗೆ ಪ್ರಸ್ತಾಪವಿಲ್ಲದೇ ಮುಗಿಯುವುದೇ ಇಲ್ಲ. ಅಷ್ಟು ಸೊಗಸು ಮತ್ತು ಸತ್ವವನ್ನು ಮಲ್ಲಿಗೆ ಹೊಂದಿದೆ.

ಈ ಸಂದರ್ಭದಲ್ಲಿ ರಮಾ ಫೌಂಡೇಷನ್‌ ನಗರದ ಕಹಳೆಬಂಡೆ ಆವರಣ(ಬ್ಯೂಗಲ್‌ ರಾಕ್‌, ಬಸವನಗುಡಿ)ದಲ್ಲಿ ಗುರುವಾರ ಸಂಜೆ -ಮೈಸೂರು ಮಲ್ಲಿಗೆ 65 ಎಂಬ ಕವನ ಸಂಜೆಯನ್ನು ಏರ್ಪಡಿಸಿದೆ. ಜೊತೆಗೆ ರಾಜ್‌ಗೆ ಗಾಯನ ಗೌರವವೂ ಇದೆ. ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸುವರು.

ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಕವನ ಮತ್ತು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X