ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಗೂರು, ದೊಡ್ಡರಂಗೇಗೌಡ, ಐತಾಳರ ಕೃತಿ ಬಿಡುಗಡೆ

By Staff
|
Google Oneindia Kannada News


Baragurus two books to be released on Sunday 11th February ಬೆಂಗಳೂರು : ಸಾಹಿತಿ ಬರಗೂರು ರಾಮಚಂದ್ರಪ್ಪ , ಕವಿ ದೊಡ್ಡರಂಗೇಗೌಡ ಮತ್ತು ನಾಗ ಐತಾಳ್‌ರ ಪುಸ್ತಕಗಳ ಬಿಡುಗಡೆ, ನಿಸಾರ್‌ ಕಾವ್ಯೋತ್ಸವ ಈವಾರದ ವಿಶೇಷಗಳು.

ಶನಿವಾರ(ಫೆ.10) ಸಂಜೆ 5.30ಕ್ಕೆ ನಗರದ ಎಚ್‌.ಎನ್‌.ಕಲಾಕ್ಷೇತ್ರ(ನ್ಯಾಷನಲ್‌ ಕಾಲೇಜು, ಬಸವನಗುಡಿ)ದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಹಿತಾನಲ(ನಾಗ ಐತಾಳ್‌) ಸಂಪಾದಿಸಿರುವ ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಸಾಹಿತ್ಯ ಸಮೀಕ್ಷೆ ) ಪುಸ್ತಕ ಲೋಕಾರ್ಪಣೆಯಾಗಲಿದೆ.

ಕವಿ ನಿಸಾರ್‌ ಅಹಮದ್‌ ಪುಸ್ತಕ ಬಿಡುಗಡೆ ಮಾಡುವರು. ಕೃತಿ ಬಗ್ಗೆ ಕೆ.ಕೇಶವಶರ್ಮ ಮಾತನಾಡುವರು. ‘ಇಗೋ ಕನ್ನಡ’ ಖ್ಯಾತಿಯ ಜಿ.ವೆಂಕಟಸುಬ್ಬಯ್ಯ ಅಧ್ಯಕ್ಷತೆವಹಿಸುವರು. ಅಭಿನವ ಮತ್ತು ಕ್ಯಾಲಿಪೋರ್ನಿಯಾದ ಸಾಹಿತ್ಯಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿವೆ.

ಬರಗೂರು ಪುಸ್ತಕ :

ಭಾನುವಾರ(ಫೆ.11) ಬೆಳಗ್ಗೆ 10.30ಕ್ಕೆ ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಜರ್‌(ವಾಡಿಯಾ ರಸ್ತೆ, ಬಸವನಗುಡಿ)ನಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಶಬ್ದವಿಲ್ಲದ ಯುದ್ಧ’ ಮತ್ತು ‘ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ’ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ.

ಹಂಪಿ ವಿವಿ ಕುಲಪತಿ ಡಾ.ಬಿ.ಎ.ವಿವೇಕ ರೈ ಪುಸ್ತಕ ಬಿಡುಗಡೆ ಮಾಡುವರು. ಖ್ಯಾತ ವಿಮರ್ಶಕ ಡಾ.ಎಚ್‌.ಎಸ್‌.ರಾಘವೇಂದ್ರರಾವ್‌ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಹೈಕೋರ್ಟ್‌ ನ್ಯಾಯಾಧೀಶ ನಾಗಮೋಹನ ದಾಸ್‌ ಅಧ್ಯಕ್ಷತೆವಹಿಸುವರು ಎಂದು ಕಾರ್ಯಕ್ರಮ ಸಂಘಟಿಸಿರುವ ಅಂಕಿತ ಪುಸ್ತಕ ಪ್ರಕಾಶನ ತಿಳಿಸಿದೆ.

ದೊಡ್ಡರಂಗೇಗೌಡರ ಗ್ರಹಿಕಾಮೃತ :

ಕವಿ ದೊಡ್ಡ ರಂಗೇಗೌಡರ 61ನೇ ಹುಟ್ಟುಹಬ್ಬದ ಸಡಗರದ ಮಧ್ಯೆ, ನಾಲ್ಕು ಪುಸ್ತಕಗಳು ಭಾನುವಾರ ಲೋಕಾರ್ಪಣೆಯಾಗಲಿವೆ.

ಹಂಪಿನಗರದ ಪಶ್ಚಿಮ ವಲಯ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ , ಸಂಜೆ 6ಕ್ಕೆ ದೊಡ್ಡರಂಗೇಗೌಡರ ಲೇಖನಿಯಿಂದ ಹೊರಬಂದ ಅರಿವಿನ ಪರಿಧಿ, ಸಾಹಿತ್ಯತವನಿಧಿ, ಸಾಹಿತ್ಯ ಶರಧಿ, ವಾಗರ್ಥವಾರಿಧಿ ಪುಸ್ತಕಗಳ ಬಿಡುಗಡೆ ಮತ್ತು ಗೀತೆಗಳ ಗಾಯನ ನಡೆಯಲಿದೆ.

ಅಂದ ಹಾಗೆ ಭಾನುವಾರ ಬೆಳಗ್ಗೆ ಯವನಿಕಾದಲ್ಲಿ ನಿಸಾರ್‌ ಕಾವ್ಯೋತ್ಸವವಿದೆ... ಒಟ್ಟಿನಲ್ಲಿ ಈವಾರ ಸಾಹಿತ್ಯ ಪ್ರೇಮಿಗಳಿಗೆ ರಸಗವಳ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X