• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಗಿನೆಲೆ ಕಾದಂಬರಿ ಬಿಳಿಯ ಚಾದರ ಆ.15ರಂದು ಬಿಡುಗಡೆ

By Staff
|

ಇನ್ನೇನು ಬರೆಯದಿರಲು ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾದಾಗಲೇ ಬರಹಗಾರನಿಂದ ಅತ್ಯುತ್ತಮ ಕೃತಿ ಹೊರಹೊಮ್ಮುವುದೇ? ಅಂಥದೇ ಸ್ಥಿತಿಯಲ್ಲಿದ್ದ ವೈದ್ಯರಾದ ಗುರುಪ್ರಸಾದ್ ಕಾಗಿನೆಲೆ ಅವರು ಬಿಳಿಯ ಚಾದರ ಎಂಬ ಕಾದಂಬರಿಯನ್ನು ಬರೆದು ಕಾದಂಬರಿ ಲೋಕಕ್ಕೆ ಮೊದಲ ಹೆಜ್ಜೆಯಿಟ್ಟಿದ್ದಾರೆ. ಬಿಡುಗಡೆ ಎಂದು ಎಲ್ಲಿ ಗುರುತುಹಾಕಿಕೊಳ್ಳಿ. ಧಾರವಾಡ ಪೇಡೆ ಸವಿದುಬನ್ನಿ.


Guruprasad Kagineles first novel Biliya Chadaraಇನ್ನೂ ನೆನಪಿದೆ.

1996ರ ದಿನಗಳು.. ದೇಶದಿಂದ ಹೊರಗೆ ಇದ್ದು ಕನ್ನಡದ ಅಕ್ಷರಗಳ ಪ್ರೀತಿಯನ್ನೇ ಕಳಕೊಳ್ಳುತ್ತಿದ್ದವರಿಗೆಲ್ಲಾ ಸಂಜೆವಾಣಿ ಪತ್ರಿಕೆಯ ಮೊದಲ ಆವೃತ್ತಿ ಕಂಪ್ಯೂಟರಿನ ಪರದೆಯ ಮೇಲೆ ಮೂಡಿಬಂದಾಗ ಆಗಿದ್ದ ರೋಮಾಂಚನವನ್ನು ಬರೆದು ವಿವರಿಸಲು ಸಾಧ್ಯವೇ ಇಲ್ಲ. ನಂತರ ಶೇಷಾದ್ರಿವಾಸು ‘ಬರಹ’ದಿಂದ ಹುಟ್ಟಿಕೊಂಡ ಅಕ್ಷರಿಗರು ಎಷ್ಟೋ. ನಮ್ಮಗಳ ಹೆಸರನ್ನು ನಾವೇ ಕಂಪ್ಯೂಟರ್ ಪರದೆಯ ಮೇಲೆ ಛಾಪಿಸಿ, ಎಂದೋ ಬರೆದು ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದ ಕವನವನ್ನು ‘ಬರಹ’ದಲ್ಲಿ ಬರೆದು ಅದರದೇ ಪ್ರಿಂಟ್‌ಔಟ್ ತೆಗೆದು ‘ನನ್ನ ಕವನವೂ ಪ್ರಿಂಟ್ ಆಯ್ತು’ ಎಂದು ಬೀಗಿದವರೆಷ್ಟೋ. ಆದರೆ, ಕನ್ನಡದ ಅಂತರ್ಜಾಲದ ಓದುಗರಲ್ಲಿ ಮೊಟ್ಟ ಮೊದಲು ಒಂದು ರಿದಂ ಅನ್ನು ಕೊಟ್ಟದ್ದು‘ದಟ್ಸ್‌ಕನ್ನಡ ಡಾಟ್ ಕಾಮ್’. ಇಂದಿಗೂ ಎಷ್ಟೋಜನ ಹೊರನಾಡಿನಲ್ಲಿರುವವರು ನಿಜವಾಗಿಯೂ ‘ಮುಂಜಾನೆ ಚಹಾವೇಳೆಗೆ’ ತಮ್ಮ ಇ-ಮೇಲನ್ನು ಒಮ್ಮೆ ನೋಡಿ ದಟ್ಸ್‌ಕನ್ನಡ ಓದದೇ ಮುಂದೆ ಹೋಗುವುದಿಲ್ಲ. ಆ ಮಟ್ಟಿಗೆ ಎಲ್ಲರ ದೈನಿಕದ ಭಾಗವಾಗಿ ಹೋಗಿದೆ ದಟ್ಸ್‌ಕನ್ನಡ ಡಾಟ್ ಕಾಮ್

.ನಾನು ಮೊಟ್ಟಮೊದಲಿಗೆ ಬೇರೆಯವರು ಓದಬಹುದು ಎಂಬುವಂತಿದೆ ಎಂದು ನಂಬಿ ಅದನ್ನು ಛಾಪಿಸಿದ್ದು ಮಿತ್ರ ವಸುವಿನ ‘ಸೃಜನ’ದಲ್ಲಿ. ನಂತರ ದಟ್ಸ್‌ಕನ್ನಡ ಡಾಟ್ ಕಾಮ್, ಕನ್ನಡಸಾಹಿತ್ಯ ಡಾಟ್ ಕಾಮ್ ಇಂತಹ ಅಂತರ್ಜಾಲ ಪತ್ರಿಕೆಗಳಲ್ಲಿ. ಅಲ್ಲಿಂದ ಶುರುವಾದ ಈ ಒಂದು ಹವ್ಯಾಸವನ್ನು ಕನ್ನಡಪ್ರಭ, ವಿಜಯಕರ್ನಾಟಕ, ಮಯೂರ, ಪ್ರಜಾವಾಣಿ, ಸುಧಾ ಇನ್ನೂ ಅನೇಕ ಪತ್ರಿಕೆಗಳವರು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಅದರ ಫಲ ಇಲ್ಲಿಯವರೆಗೆ ಎರಡು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನದವರೆಗೂ ನಿಂತಿತ್ತು. ಈಗ ನಾನು, ನನ್ನ ಕೆಲಸ, ಓದು ಮತ್ತು ಸಿನೆಮಾಗಳಲ್ಲಿ ನಿಂತಿದ್ದ ನನ್ನ ದೈನಿಕವೇ ನನ್ನಿಂದ ‘ಬಿಳಿಯ ಚಾದರ’ ಅನ್ನುವ ಒಂದು ಕಾದಂಬರಿಯನ್ನು ಬರೆಸಿಕೊಂಡಿದೆ. ಇದನ್ನು ಬರೆಯದೇ ಇರಲು ಸಾಧ್ಯವೇ ಇಲ್ಲ ಎನ್ನುವುದರ ಮಟ್ಟಿನ ಒತ್ತಡ ಪಟ್ಟೆಂದು ಒಡೆದುಹೋಗುವ ಮುನ್ನ ಬರೆದಿದ್ದೇನೆ.

ಇಂತಹ ಬರೆಯಲೇಬೇಕಾದ ‘ಅರ್ಜೆನ್ಸಿ’ ಮನಸ್ಸಿನಲ್ಲಿ ಇದ್ದರೂ ಇವತ್ತು ಬರೆಯುತ್ತಿರುವ ಬರಹಗಾರರು ಎದುರಿಸುವ ಮೊದಲ ಸಮಸ್ಯೆಯೆಂದರೆ ಕಾದಂಬರಿಯಂತಹ ಪ್ರಕಾರಕ್ಕೆ ಬೇಕಾದ ಸಮಯ ಮತ್ತು ಏಕಾಗ್ರತೆಯ ಕೊರತೆ. ಕೆಲಸ ಮತ್ತು ದೈನಿಕದ ಒತ್ತಡ ಯಾರಿಗಿಲ್ಲ. ಆದರೆ, ಎಷ್ಟು ಹೇಳಬಾರದೆಂದರೂ ಹೇಳದಿದ್ದರೆ ಪ್ರಾಮಾಣಿಕವಾಗಿರದೇ ಇರುವುದರಿಂದ ಹೇಳುತ್ತಿದ್ದೇನೆ. ಇದು ನಿರೀಕ್ಷಣಾ ಜಾಮೀನಂತೂ ಅಲ್ಲವೇ ಅಲ್ಲ. ಕಾದಂಬರಿಯ ಕಾಲವನ್ನು ಮತ್ತು ಬೇಕಾದ ನರೇಟಿವ್‌ನ ಒಂದೇ ಒಗರನ್ನು ಉಳಿಸಿಕೊಳ್ಳುವುದು ನಾ ಎದುರಿಸಿದ ದೊಡ್ಡ ಸವಾಲು. ಒಂದೈದಾರು ಬಾರಿ ಪರಿಷ್ಕರಿಸಿ ಇಂದು ನಿಮ್ಮ ಮುಂದಿದೆ ‘ಬಿಳಿಯ ಚಾದರ’.

ಒಂದು ಮಾತ್ರ ನಿಜ.. ನಾನು ವೈದ್ಯನಾಗಿರದಿದ್ದರೆ, ಅಮೆರಿಕಾಕ್ಕೆ ಬರದಿದ್ದರೆ, ಅಂತರ್ಜಾಲದಲ್ಲಿ ಕನ್ನಡ ಮೂಡಿಬರದಿದ್ದರೆ, ನಾನು ಇದುವರೆಗೂ ಬರೆದ ಕಥೆಗಳನ್ನು ಬರೆಯುತ್ತಲೂ ಇರಲಿಲ್ಲ (ಯಾರಿಗೆ ನಷ್ಟವಾಗುತ್ತಿತ್ತು ಎಂದು ಕೇಳಬೇಡಿ) ಮತ್ತು ಕಾದಂಬರಿಯಂತಹ ಪ್ರಕಾರದಲ್ಲಿ ನನ್ನನ್ನು ತೊಡಗಿಸಿಕೊಳುತ್ತಿದ್ದೆ ಎನ್ನುವ ಧೈರ್ಯವನ್ನೂ ಮಾಡುತ್ತಿರಲಿಲ್ಲ.

ನಾನು ಬರೆಯುವುದನ್ನು ಶುರುಮಾಡಿದಂದಿನಿಂದಲೂ ನನ್ನ ಬರವಣಿಗೆಯನ್ನು ಓದಿ ಪ್ರತಿಕ್ರಯಿಸುತ್ತಾ ಮೆಚ್ಚಿಕೊಂಡು ಬಂದಿದ್ದೀರ, ನೀವೆಲ್ಲರೂ. ನನ್ನ ‘ಬಿಳಿಯ ಚಾದರ’ ಕಾದಂಬರಿ ಇದೇ ಆಗಸ್ಟ್ ಹದಿನೈದರಂದು ಮನೋಹರ ಗ್ರಂಥಮಾಲೆಯಿಂದ ಧಾರವಾಡದಲ್ಲಿ ಬಿಡುಗಡೆಯಾಗುತ್ತಿದೆ. ಡಾ ಯುಆರ್ ಅನಂತಮೂರ್ತಿಯವರು ಪ್ರೀತಿಯಿಂದ ಮುನ್ನುಡಿ ಬರೆದಿದ್ದಾರೆ. ಡಾ. ಸಿಎನ್ ರಾಮಚಂದ್ರನ್‌ರವರು ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ. ಡಾ ಜಿಎಸ್ ಆಮೂರರವರು ಸಮಾರಂಭದ ಅಢ್ಯಕ್ಷತೆ ವಹಿಸುತ್ತಿದ್ದಾರೆ.

ದಯವಿಟ್ಟು ಬನ್ನಿ ಪುಸ್ತಕವನ್ನು ಕೊಳ್ಳಿ. ಪುಸ್ತಕ ಬೇಕಿದ್ದರೆ ನನಗೊಂದುಇ-ಮೇಲ್ ಮಾಡಿ. ಎಲ್ಲಕ್ಕಿಂತ ಮುಖ್ಯ ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಗುರುಪ್ರಸಾದ್ ಅವರ ಕಥೆಗಳು

ಮಧ್ವ ವಿಜಯ!!!

ಬೀಜ

ಅಲಬಾಮಾದ ಅಪಾನವಾಯು

ಆಲ್ಮೋಸ್ಟ್... ಒಂದು ಕಥೆ

...ಹೀಗೆ ಒಂಥರಾ ಪ್ರೇಮ ಕಥೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more