• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಭಾನುವಾರ ‘ರಜನಿ -ವಿಚಿತ್ರ, ವಿಶಿಷ್ಟ, ವಿಕ್ಷಿಪ್ತ ರೂಪ’

By Staff
|


A book on Superstar Rajanikanth to be released on June 10ಬೆಂಗಳೂರು : ಸದ್ದಿಲ್ಲದೇ ಸೂಪರ್‌ ಸ್ಟಾರ್‌ ರಜನಿಕಾಂತ್‌, ಬೆಂಗಳೂರಿನ ಬೀದಿಬೀದಿಗಳಲ್ಲಿ ಜನ ಸಾಮಾನ್ಯರಂತೆ ಸುತ್ತಾಡುತ್ತಾರೆ ಎನ್ನುವ ಮಾಹಿತಿಯನ್ನು ಮೊದಲ ಸಲ ಸ್ಫೋಟಿಸಿದ್ದು; ವಿಜಯ ಕರ್ನಾಟಕ. ಈ ಪತ್ರಿಕೆಯ ಸಿನಿಮಾ ಪತ್ರಕರ್ತ ದೇವಶೆಟ್ಟಿ ಮಹೇಶ್‌, ಬರೆದ ಲೇಖನ ಮಾಲಿಕೆ, ಓದುಗರಲ್ಲಿ ಮತ್ತು ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿತ್ತು.

ಆ ಬರಹಗಳನ್ನು ಹಿಡಿಹಿಡಿಯಾಗಿ ಓದುವ ಅವಕಾಶ, ಈಗ ಓದುಗರ ಮುಂದಿದೆ. ‘ರಜನಿ-ವಿಚಿತ್ರ, ವಿಶಿಷ್ಟ, ವಿಕ್ಷಿಪ್ತ ’ ಹೆಸರಿನಲ್ಲಿ ಪುಸ್ತಕ ರೂಪುಗೊಂಡಿದೆ. ಭಾನುವಾರ(ಜೂ.10) ಪುಸ್ತಕವನ್ನು ಪತ್ರಕರ್ತ ರವಿ ಬೆಳಗೆರೆ ಲೋಕಾರ್ಪಣೆ ಮಾಡುವರು.

ನಗರದ ಎಸ್‌ಜೆಆರ್‌ಸಿ ಕಾಲೇಜು ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ , ರಜನಿ ಪುಸ್ತಕದ ಭಾಷಾಂತರಗಳೂ ಲಭ್ಯ. ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್‌ ತಮಿಳು ಅನುವಾದದ ಪ್ರತಿಯನ್ನು, ಹಿರಿಯ ನಟ ಶ್ರೀನಿವಾಸ ಮೂರ್ತಿರವರು ತೆಲುಗು ಅನುವಾದದ ಪ್ರತಿಯನ್ನು ಹಾಗೂ ರಜನಿಕಾಂತ್‌ರವರ ಆಪ್ತ ಸ್ನೇಹಿತ ರಾಜ್‌ ಬಹಾದ್ದೂರ್‌ರವರು ಮಲಯಾಳಂ ಅನುವಾದದ ಪ್ರತಿಯನ್ನು ಬಿಡುಗಡೆ ಮಾಡುವರು.

ಈ ಪುಸ್ತಕದಲ್ಲಿ ಶಿವಾಜಿರಾವ್‌ ಗಯಾಕ್‌ವಾಡ್‌ ಎಂಬ ಮರಾಠಿ ಹುಡುಗ ರಜನಿಕಾಂತ್‌ ಎಂಬ ಸೂಪರ್‌ಸ್ಟಾರ್‌ ಆಗಲು ಪಟ್ಟಂತ ಕಷ್ಟಗಳು, ಸ್ಟಾರ್‌ ಆದ ಮೇಲಿನ ಸುಖದ ದಿನಗಳು, ಸಿಹಿ-ಕಹಿ ಘಟನೆಗಳನ್ನು ವಿಸ್ತಾರವಾಗಿ, ರಜನಿ ಅವರ ಸ್ನೇಹಿತರ ಮಾತುಕತೆಯಾಂದಿಗೆ ವಿವರಿಸಲಾಗಿದೆ.

ಪ್ರಕಾಶಕ ರವಿಚಂದ್ರರಾವ್‌ರವರು ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.

  • ಸ್ಥಳ : ಎಸ್‌ಜೆಆರ್‌ಸಿ ಕಾಲೇಜು ಸಭಾಂಗಣ, ಆನಂದರಾವ್‌ ಸರ್ಕಲ್‌, ಟೂರಿಸ್ಟ್‌ ಹೋಟೆಲ್‌ ಪಕ್ಕ, ಬೆಂಗಳೂರು.
  • ಸಮಯ : ಬೆಳಗ್ಗೆ 10:30.
(ದಟ್ಸ್‌ ಕನ್ನಡವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more