ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗತ್‌ ಸಿಂಗ್‌ ಡೈರಿಯಲ್ಲಿ ಏನಿದೆ? ಸ್ವಲ್ಪ ದಿನ ಕಾಯೋಣ!

By Staff
|
Google Oneindia Kannada News


ಫಿರೋಜ್‌ಪುರ್‌ : ಲಾಹೋರಿನ ಸೆಂಟ್ರಲ್‌ ಜೈಲಿನಲ್ಲಿ ಕ್ರಾಂತಿಕಾರಿ ಭಗತ್‌ಸಿಂಗ್‌ ಬರೆದ ಡೈರಿ, ಮಾ.23ರಂದು ಪುಸ್ತಕ ರೂಪದಲ್ಲಿ ಬಿಡುಗಡೆಯಾಗಲಿದೆ.

Shahid Bhagat singhದೆಹಲಿಯ ಹೋಪ್‌ ಇಂಡಿಯಾ ಹೊರತರುತ್ತಿರುವ ಈ ಪುಸ್ತಕ, 400 ಪುಟಗಳನ್ನು ಹೊಂದಿದೆ. Shaheed Bhagat Singhs Jail Diary ಶೀರ್ಷಿಕೆಯಡಿ, ಆಂಗ್ಲ ಭಾಷೆಯಲ್ಲಿ ಪುಸ್ತಕವನ್ನು ಹೊರತರಲಾಗುತ್ತಿದೆ. ಭಗತ್‌ ಸಿಂಗ್‌ ಹುತಾತ್ಮರಾದ ದಿನವಾದ ಮಾ.23ರಂದು ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಭಗತ್‌ ಸಿಂಗ್‌ರ ಸಂಬಂಧಿ ಅಭಯ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಹಾಗೂ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಮತ್ತಿತರ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಜೈಲ್‌ ಡೈರಿಯನ್ನು ಹೊರತರುವಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದ ಪ್ರೊ. ಕೆ.ಸಿ. ಯಾದವ್‌ ಮತ್ತು, ಭಗತ್‌ಸಿಂಗ್‌ ಅವರ ಸೋದರ ಕುಲಬೀರ್‌ ಹಾಗೂ ನಮ್ಮ ತಂದೆ ಬಬ್ಬರ್‌ ಸಿಂಗ್‌ ಶ್ರಮಿಸಿದ್ದಾರೆ ಎಂದು ಅಭಯ್‌ ಸಿಂಗ್‌ ಹೇಳಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X