ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ ಅಂಕಣಕಾರ ದತ್ತಾತ್ರಿಗೆ ಹಾಮಾ ನಾಯಕ್ ಪ್ರಶಸ್ತಿ

By Staff
|
Google Oneindia Kannada News


Dr. Ha.Ma. Nayak award to ThatsKannada columnist Dattatri Ramanna ಶಿವಮೊಗ್ಗ, ಸೆಪ್ಟೆಂಬರ್ 07: ದಟ್ಸ್‌ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ದತ್ತಾತ್ರಿ ರಾಮಣ್ಣ ಅವರ ಬರಹಗಳ ಸಂಕಲನ ಪೂರ್ವ-ಪಶ್ಚಿಮಕ್ಕೆ ಡಾ. ಹಾ.ಮಾ.ನಾಯಕ್ ಪ್ರಶಸ್ತಿ ಲಭಿಸಿದೆ.

ಶಿವಮೊಗ್ಗ ಕರ್ನಾಟಕ ಸಂಘ 8 ಗೌರವ ಸದಸ್ಯರ ಹೆಸರಿನಲ್ಲಿ 8 ವಿವಿಧ ಕೃತಿಗಳಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತಿದೆ. ದತ್ತಾತ್ರಿ ರಾಮಣ್ಣ, ಪ್ರತಿಭಾ ನಂದಕುಮಾರ್ ಸೇರಿದಂತೆ 7 ಲೇಖಕರನ್ನು 2006ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕ ಸಂಘ ಆಯ್ಕೆ ಮಾಡಿದೆ. ಕೆ.ವಿ.ಸುಬ್ಬಣ್ಣ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಯಾವ ಕೃತಿನ್ನೂ ಆಯ್ಕೆ ಮಾಡಿಲ್ಲ.

ಪ್ರಶಸ್ತಿ 5000 ರು. ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಸೆಪ್ಟೆಂಬರ್ ತಿಂಗಳ 11ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕರ್ನಾಟಕ ಸಂಘದ ಅಧ್ಯಕ್ಷರಾದ ವಿಜಯಾ ಶ್ರೀಧರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸಿ.ಜಿ.ಸಿದ್ದರಾಮಯ್ಯ ಅವರು ಭಾಗವಹಿಸುತ್ತಿದ್ದಾರೆ.

ಪ್ರಶಸ್ತಿ, ಕೃತಿ ಹಾಗೂ ಲೇಖಕರ ವಿವರಗಳು:

1. ಕುವೆಂಪು ಪ್ರಶಸ್ತಿ (ಕಾದಂಬರಿ) - ‘ಪುಂಸ್ತ್ರೀ’ - ಡಾ. ಪ್ರಭಾಕರ ಶಿಶಿಲ
2. ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ (ಅನುವಾದ) - ‘ಪಿಂಜರ್’ -ಡಾ. ಎಲ್.ಸಿ. ಸುಮಿತ್ರ
3. ಎಂ.ಕೆ. ಇಂದಿರಾ ಪ್ರಶಸ್ತಿ (ಮಹಿಳೆಯರಿಗೆ) - ‘ಸ್ತ್ರೀಮತವನುತ್ತರಿಸಲಾಗದೇ’- ಡಾ.ಎಂ.ಎಸ್. ಆಶಾದೇವಿ
4. ಪಿ.ಲಂಕೇಶ್ ಪ್ರಶಸ್ತಿ (ಮುಸ್ಲಿಂ ಬರಹಗಾರರಿಗೆ) - ‘ಬಿಡುಗಡೆಯ ದಾರಿ’- ಎಂ.ಬಿ. ಅಬ್ದುಲ್ ರಹಮಾನ್
5. ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ (ಕವನ ಸಂಕಲನ) - ‘ಅವರು ಪುರಾವೆಗಳನ್ನು ಕೇಳುತ್ತಾರೆ’- ಪ್ರತಿಭಾ ನಂದಕುಮಾರ್
6. ಡಾ. ಹಾ.ಮಾ.ನಾ.ಪ್ರಶಸ್ತಿ (ಅಂಕಣ ಬರಹ) - ‘ಪೂರ್ವ ಪಶ್ಚಿಮ’- ಎಂ.ಆರ್.ದತ್ತಾತ್ರಿ
7. ಡಾ. ಯು.ಆರ್.ಅನಂತಮೂರ್ತಿ ಪ್ರಶಸ್ತಿ (ಸಣ್ಣ ಕಥಾ ಸಂಕಲನ) - ‘ಹುಚ್ಚು ಹುಡುಗರು)-ಡಾ. ಜಾನಕಿ ಸುಂದರೇಶ್
8. ಕೆ.ವಿ. ಸುಬ್ಬಣ್ಣ ಪ್ರಶಸ್ತಿ (ನಾಟಕ ಕೃತಿ) - ಯಾವ ಕೃತಿಗೂ ಲಭ್ಯವಾಗಿಲ್ಲ.

ಸಮಾರಂಭ ನಡೆಯುವ ಸ್ಥಳ

ಕರ್ನಾಟಕ ಸಂಘ
ಹಸೂಡಿ ವೆಂಕಟಶಾಸ್ತ್ರಿಗಳ ಸಾಹಿತ್ಯ ಭವನ
ಬಿ.ಎಚ್.ರಸ್ತೆ, ಶಿವಮೊಗ್ಗ - 577 201

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X