ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರ ಕೈಗೆ ಜೋಗಿ ಕಾದಂಬರಿ 'ನದಿಯ ನೆನಪಿನ ಹಂಗು'

By Staff
|
Google Oneindia Kannada News


'ನದಿಯ ನೆನಪಿನ ಹಂಗು'
ಆತ್ಮೀಯರೇ,
ನನ್ನ ಕಾದಂಬರಿಯೊಂದು ಪ್ರಕಟಣೆಗೆ ಸಿದ್ಧವಾಗುತ್ತಿದೆ. ಅದರ ಹೆಸರು ನದಿಯ ನೆನಪಿನ ಹಂಗು. ನಾನು ತುಂಬ ಹಿಂದೆ ಗೆಳೆಯ ಶಾಮಸುಂದರ್ ಪೋರ್ಟಲ್ಲಿಗೆ ಬರೆದ ಕಾದಂಬರಿ ಇದು. ಅಲ್ಲಿ ನನ್ನ ಹೆಸರು ಪ್ರಕಟವಾಗಿರಲಿಲ್ಲ. ಆಮೇಲೆ ಇದನ್ನು ನನ್ನದೇ ಬ್ಲಾಗಿನಲ್ಲಿ ಹಾಕಲು ಆರಂಭಿಸಿದೆ. ಅದೃಷ್ಟವಶಾತ್ ಅದನ್ನು ಪೂರ್ತಿಯಾಗಿ ಹಾಕುವುದು ಸಾಧ್ಯವಾಗಲೇ ಇಲ್ಲ.

ಇದನ್ನು ತಾಂತ್ರಿಕ ಕಾರಣಗಳಿಗಾಗಿ ಕಾದಂಬರಿ ಎಂದು ಕರೆದಿದ್ದೇನೆ ಅಷ್ಟೇ. ಇದಕ್ಕೆ ಕಾದಂಬರಿಯ ಯಾವ ಗುಣವೂ ಇಲ್ಲ. ಅದು ನೆನಪಿನ ದಾಖಲೆಗಳಷ್ಟೇ. ನನ್ನ ನೆನಪಿಗೆ ದಕ್ಕಿದ್ದನ್ನು ಹಾಗ್ಹಾಗೇ ಬರೆದುಕೊಂಡು ಹೋಗಿದ್ದೇನೆ. ಓದುವ ಕುತೂಹಲ ಉಳಿಸಿಕೊಂಡದ್ದು ಗಾಢವಾಗಿ ತಟ್ಟುತ್ತದೆ ಅನ್ನುವುದು ಸುಳ್ಳು. ಗಾಢವಾಗಿ ಏನನ್ನೋ ಕಟ್ಟಿಕೊಡಲು ಹೊರಟಾಗ ಓದುವ ಕುತೂಹಲ ಉಳಿಸಿಕೊಳ್ಳುವುದು ಕಷ್ಟ.

ಕಾದಂಬರಿಗೆ ಅಪಾರ ಸೊಗಸಾದ ಮುಖಪುಟ ಮಾಡಿದ್ದಾರೆ. ಗೆಳೆಯ ಬಿ ಸುರೇಶ್ ಪ್ರಕಟಿಸುವ ಸಾಹಸ ಮಾಡುತ್ತಿದ್ದಾರೆ. ಕಾದಂಬರಿಗೆ ಬಿಡುಗಡೆಯಿಲ್ಲ. ಪುಸ್ತಕ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ಪುಸ್ತಕದಂಗಡಿಗಳಲ್ಲಿ ಸಿಗುತ್ತದೆ.

ಮುಂದಿನದು ದೇವರಾ ಚಿತ್ತ.

-ಜೋಗಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X