• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡುಂಡಿರಾಜ್‌ರ ಬಸಿರಿಳಿವ ಹೊತ್ತಲ್ಲಿ ನೀವಲ್ಲಿರಬೇಕ್ರೀ...

By Staff
|

ಅಕ್ಷರಗಳು ಇವರ ಮಾತು ಕೇಳುತ್ತವೆ... ಹೀಗಾಗಿಯೇ ಮುಖಗಂಟು ಹಾಕಿಕೊಂಡ ಓದುಗರು ಸಹಾ, ಇವರ ಹನಿಗವನಗಳ ಓದಿದ ತಕ್ಷಣ, ಪೇಸ್ಟ್‌ ಜಾಹೀರಾತಿಗೆ ಮುಖವೊಡ್ಡಿದಂತೆ, ದಂತಪ್ರದರ್ಶನ ಮಾಡುತ್ತಾರೆ! ಈಗ ವಿಷ್ಯಾ ಏನು ಅಂದ್ರೆ; ನಿಮ್ಮ ತೀರದ ಬಯಕೆಗೆ ಎರಡು ಪುಸ್ತಕಗಳು ರೆಡಿಯಾಗಿವೆ, ಭಾನುವಾರ ಅವು ನಿಮಗೆ ಲಭ್ಯ!

Dundirajಅವಳು ಎದುರಿಗೆ ಸಿಕ್ಕಳು

ನನ್ನ ನೋಡಿ ನಕ್ಕಳು

ನಮಗೀಗ ಎರಡು ಮಕ್ಕಳು!

***

ಅವಳು ಹುಲಿ

ನಾನು ಇಲಿ

ಇದೇ ನಮ್ಮ ಫ್ಯಾಮಿಲಿ!

-ಇಂತಹ ನೂರಾರು ಪುಡಿಪುಡಿ ಪದ್ಯಗಳ ಮೂಲಕ, ಹಿಡಿಹಿಡಿ ಓದುಗರಿಗೆ ಕಚಗುಳಿಯಿಟ್ಟ ಹನಿಗವನಗಳ ಮಂಡಿ, ನಮ್ಮ ಪ್ರೀತಿಯ ‘ಡುಂಡಿ’ ಯಾರಿಗೆ ಗೊತ್ತಿಲ್ಲ. ಸೌದೆ ಸೀಳಿದಂತೆ ಪದಗಳನ್ನು ಸೀಳುತ್ತ, ಪಂಚ್‌ ನೀಡುತ್ತಾ ಬಂದಿರುವ ನಮ್ಮ ಎಚ್‌.ಡುಂಡಿರಾಜ್‌ರ ಲೇಖನಿಗೆ ಇನ್ನೂ ತುಕ್ಕು ಹಿಡಿದಿಲ್ಲ. ಹೀಗಾಗಿ ಅವರು ಬಹುತೇಕರಂತೆ ಮಾಜಿ ಕವಿಯಾಗಿಲ್ಲ!

ಅವರ ಎಲ್ಲಾ ಹನಿಗವನಗಳನ್ನು ಒಂದೇ ಕಡೆ ಓದಲು ಸಿಕ್ಕರೆ ಎಷ್ಟು ಚೆನ್ನ ಎನ್ನುವ ನಮ್ಮನಿಮ್ಮ ಮಾತು ‘ಅಂಕಿತ ಪುಸ್ತಕ’ದ ಮನೆಯವರಿಗೆ ಕೇಳಿಸಿದೆ. ಹೀಗಾಗಿಯೇ, ಇದುವರೆಗಿನ ಹನಿಗವಿತೆಗಳ ವಿಸ್ತುತ ಆವೃತ್ತಿ ‘ಹನಿಖಜಾನೆೆ ’ ರೆಡಿಯಾಗಿದೆ. ಇದರ ಜೊತೆಗೆ ಡುಂಡಿಯ ‘ಪರವಾಗಿಲ್ಲ’ ಎಂಬ ಲಲಿತ ಪ್ರಬಂಧ ಸಂಕಲವೂ ಬಿಡುಗಡೆಗೆ ಸಜ್ಜಾಗಿದೆ. ವಿಮರ್ಶಕರಿಗಿಂತಲೂ ಮೊದಲೇ, ತಮ್ಮ ಹೊಸ ಕೃತಿಯನ್ನು ‘ಪರವಾಗಿಲ್ಲ’ ಎಂದು ಹೇಳಿಕೊಂಡು ಅವರು ಬೆನ್ನುತಟ್ಟಿಕೊಂಡಿದ್ದಾರೆ!

ಅಂದ ಹಾಗೆ ಈ ಎರಡೂ ಪುಸ್ತಕಗಳು ಭಾನುವಾರ(ಮಾ.4) ಲೋಕಾರ್ಪಣೆಗೊಳ್ಳಲಿವೆ. ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ಆಫ್‌ ವರ್ಲ್ಡ್‌ ಕಲ್ಚರ್‌(ವಾಡಿಯಾ ರಸ್ತೆ, ಬಸವನ ಗುಡಿ)ನಲ್ಲಿ ಪುಸ್ತಕಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಬಿಡುಗಡೆ ಮಾಡುವರು.

ಹಾಸ್ಯ, ನಗೆ, ಸಡಗರ ಇರೋ ಕಡೆ ಎಲ್ಲರ ಮಿತ್ರ ಪ್ರೊ.ಅ.ರಾ.ಮಿತ್ರ ಇಲ್ಲದಿದ್ದರೆ ಹೇಗೆ? ಅವರು ಬಂದೇ ಬರ್ತಾರೆ... ಹೀಗಾಗಿ ಸಮಾರಂಭದ ಅಧ್ಯಕ್ಷತೆವಹಿಸುವ ಜವಾಬ್ದಾರಿಯನ್ನು ಸಂಘಟಕರು ಅವರಿಗೆ ನೀಡಿದ್ದಾರೆ. ಎಲ್ಲಾ ಸರಿ ನೀವು ಬನ್ನಿ ಎಂದು ನಾವು ಕರೆಯೋದಿಲ್ಲ, ಬರೋದಕ್ಕೆ ನೀವಾಗಲೇ ತಲೆಬಾಚಿಕೊಂಡು, ಒಂದು 50ಗ್ರಾಂ ನಗೆಯನ್ನು ಮುಖದಲ್ಲಿ ಲೇಪಿಸಿಕೊಂಡು ಸಿದ್ಧತೆ ನಡೆಸುತ್ತಿರೋದು ನಮ್ಮ ಗಮನಕ್ಕೆ ಬಂದಿದೆ! ಅಲ್ಲಿ ಸಿಗೋಣವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more