• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದಿದ್ದು ಹೇಳುವ ‘ಕುವೆಂಪು ಸಾಹಿತ್ಯಸಮೀಕ್ಷೆ’

By Staff
|
  • ಜಾನಕಿ

Cover page of Kuvempu Sahithya Sameeksheಕುವೆಂಪು ಕೃತಿಗಳನ್ನು ಓದಿದವರೂ ಓದದೇ ಇರುವವರೂ ಅವರನ್ನು ಮೆಚ್ಚುತ್ತಾರೆ. ತೀರಾ ಓದದೇ ಉಳಿದವರು ಕೂಡ ಅಲ್ಲೊಂದು ಇಲ್ಲೊಂದು ಗೀತೆಗಳನ್ನು ಕೇಳಿರುತ್ತಾರೆ. ಕನಿಷ್ಠ ಯಾವ ಜನ್ಮದ ಮೈತ್ರಿ, ಜೀವನಾ ಸಂಜೀವನಾ, ತೆರೆದಿದೆ ಮನೆ ಓ ಬಾ ಅತಿಥಿ, ತನುವು ನಿನ್ನದು.. ಮುಂತಾದ ಹಾಡುಗಳಂತೂ ಜನಪ್ರಿಯ.

ಹೀಗೆ ಕುವೆಂಪು ಅವರನ್ನು ಕೇಳಿ, ಓದಿ, ಮೆಚ್ಚಿಕೊಂಡು ತುಂಬ ಸಜ್ಜನರ ಥರ ಇರುವವರ ಹತ್ತಿರ ಕುವೆಂಪು ಬಗ್ಗೆ ನಾಲ್ಕು ಸಾಲು ಬರೆದುಕೊಡಿ ಅಂತ ಕೇಳಿದರೆ ಸಾಕು ಥಟ್ಟನೆ ಹುಷಾರಾಗಿಬಿಡುತ್ತಾರೆ. ತಾವು ಓದಿದ ವಿಮರ್ಶೆಗಳನ್ನೂ ಪರಿಭಾಷೆಗಳನ್ನೂ ತಾವು ಎಂದೂ ಬಳಸದ ಪದಪುಂಜಗಳನ್ನೂ ಬಳಸಿ ಕುವೆಂಪು ಮೇಲೆ ತಮಗಿರುವ ಪ್ರೀತಿಯನ್ನೂ ಮೆಚ್ಚುಗೆಯನ್ನೂ ಹರಿಬಿಡುತ್ತಾರೆ. ಈ ಉತ್ಸಾಹದಲ್ಲಿ ಅವರವರು ಕಂಡ ಕುವೆಂಪು ಮೂಡದೇ, ಎಲ್ಲೋ ಓದಿದ, ಕೇಳಿದ ಕುವೆಂಪು ಆ ಲೇಖನಗಳಲ್ಲಿ ಹಣಿಕಿ ಹಾಕುತ್ತಾರೆ.

ಹಾಗಾಗಿಲ್ಲ ಅನ್ನುವುದು ಕುವೆಂಪು ಸಾಹಿತ್ಯ ಸಮೀಕ್ಷೆ ಎಂಬ ಅಮೆರಿಕನ್ನಡಿಗರ ಸಂಕಲನದ ಹೆಗ್ಗಳಿಕೆ. ಅಹಿತಾನಲ ಸಂಪಾದಿಸಿದ ಈ ಪುಸ್ತಕಕ್ಕೆ ಜಿಎಸ್‌ ಶಿವರುದ್ರಪ್ಪ ಮುನ್ನುಡಿ ಬರೆದಿದ್ದಾರೆ. ಪುಸ್ತಕಕ್ಕೆ ‘ತೂಕ’ವಿರಲಿ ಎಂಬ ಕಾರಣಕ್ಕೆ ಲಕ್ಷ್ಮೀನಾರಾಯಣ ಭಟ್ಟರ ಲೇಖನವನ್ನೂ ಸೇರಿಸಿಕೊಳ್ಳಲಾಗಿದೆ. ಉಳಿದಂತೆ ಎಲ್ಲ ಲೇಖನಗಳೂ ಅಮೆರಿಕನ್ನಡಿಗರದ್ದೇ.

ನಾಗಐತಾಳ, ರಾಜಗೋಪಾಲ್‌, ಲಕ್ಷ್ಮೀಪತಿ, ವೈಆರ್‌ಮೋಹನ್‌, ತ್ರಿವೇಣಿ, ಸಂಧ್ಯಾ ರವೀಂದ್ರನಾಥ್‌, ಶಶಿಕಲಾ, ಶ್ರೀವತ್ಸ ಜೋಷಿ, ದತ್ತಾತ್ರಿ-ಹೀಗೆ ಹಲವರು ಕುವೆಂಪು ಜೀವನ, ವಿಚಾರಸಾಹಿತ್ಯ, ಕವನ, ಕಾದಂಬರಿ, ನಾಟಕ ಮತ್ತು ಮಹಾಕಾವ್ಯಗಳನ್ನು ತಮ್ಮ ತಮ್ಮ ಕನ್ನಡಿಯಲ್ಲಿ ಹಿಡಿಯಲು ಯತ್ನಿಸಿದ್ದಾರೆ. ಕುವೆಂಪು ಮಹಾಕವಿ, ದಿವ್ಯಚೇತನ, ಅವರಿಗಿದೋ ನಮ್ಮ ನಮನ, ಅವರ ಮುಂದೆ ನಾವು ಚಿಕ್ಕವರೆಂಬ ವಿನಯ ರಾರಾಜಿಸಿರುವ ಕೃತಿಯನ್ನು ವಿಮರ್ಶೆಯೆಂದಾಗಲೀ ಸಮೀಕ್ಷೆಯೆಂದಾಗಲೀ ಓದುವುದು ಕಷ್ಟ . ಕುವೆಂಪು ಕೃತಿಗಳನ್ನು ಓದಿದವರು ಓದದವರಿಗೆ ವಿವರಿಸಿ ಹೇಳಿದಂತೆ ಕಾಣುವ ಲೇಖನಗಳು ಇಲ್ಲಿವೆ. ಸದ್ಯಕ್ಕೆ ಬೇಕಾಗಿರುವುದೂ ಇಂಥ ಲೇಖನಗಳೇ ಅನ್ನುವುದನ್ನು ತಳ್ಳಿಹಾಕುವಂತಿಲ್ಲ. ವಿಮರ್ಶೆ ಪ್ರಕಾಂಡ ಪಂಡಿತರಿಗೆ ಬೇಕಿಲ್ಲ . ಆಸಕ್ತ ಓದುಗನಿಗೂ ಬೇಕಿಲ್ಲ . ಇದನ್ನು ಓದಿ, ಚೆನ್ನಾಗಿದೆ ಅಂತ ಹೇಳಿದರಷ್ಟೇ ಸಾಕು.

ಅಂಥ ಕೆಲಸವನ್ನು ಇವು ಮಾಡುತ್ತವೆ.

ಬೆಂಗಳೂರಿನ ವಸಂತ ಪ್ರಕಾಶನ ಪ್ರಕಟಿಸಿರುವ 353 ಪುಟಗಳ ಈ ಕೃತಿಯ ಬೆಲೆ 220 ರುಪಾಯಿ.

ಇದನ್ನೂ ಓದಿ

ಕನ್ನಡ ಸಾಹಿತ್ಯ ರಂಗ- ಕುವೆಂಪು ಸಾಹಿತ್ಯ ಸಮೀಕ್ಷೆ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more