ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ರಾಜ್‌ ಹೆಸರಲ್ಲಿ ದತ್ತಿ ನಿಧಿ

By Staff
|
Google Oneindia Kannada News

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್‌ಕುಮಾರ್‌ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷ ರೂಪಾಯಿಯ ದತ್ತಿನಿಧಿ ಸ್ಥಾಪಿಸಿದ್ದಾರೆ. ಆ ಹಣದಲ್ಲಿ ಡಾ.ರಾಜ್‌ ಆಶಯದಂತೆ ಪರಿಷತ್ತು ಕನ್ನಡ ಚಲನಚಿತ್ರ ಸಾಹಿತ್ಯಮತ್ತು ಕಲೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರಕಟಿಸಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ.

ಬಳ್ಳಾರಿಯ ಮಾಜಿ ಸಂಸತ್‌ ಸದಸ್ಯ ಕೆ.ಸಿ. ಕೊಂಡಯ್ಯ ಅವರು ತಮ್ಮ ತಂದೆ ಕೆ.ವಿ. ತಿರುಪಾಲಪ್ಪ ಅವರ ಹೆಸರಿನಲ್ಲಿ ಒಂದು ಲಕ್ಷರೂಪಾಯಿ ದತ್ತಿ ನಿಧಿ ಸ್ಥಾಪಿಸಿದ್ದಾರೆ. ಕೊಂಡಯ.್ಯ ಅವರ ಇಚ್ಛೆಯಂತೆ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲಾಗುವ ಕನ್ನಡ ಪರ ಕೆಲಸಗಳಿಗೆ ಬಳಸಲಾಗುವುದು ಎಂದು ಪುನರೂರು ಹೇಳಿದರು

ಡಾ. ರಾಜ್‌ ದತ್ತಿ ನಿಧಿಯಿಂದ ಈ ಬಾರಿ ಪುಸ್ತಕ ಪ್ರಕಟಣೆ
ನಿಯಮಗಳು :

  • ಕನ್ನಡ ಚಲನಚಿತ್ರ ಸಾಹಿತ್ಯ ಅಥಾವ ಕಲೆಗೆ ಸಂಬಧಿಸಿರಬೇಕು
  • 100 ರಿಂದ 125 ಪುಟಗಳ ಮಿತಿಯಲ್ಲಿರಬೇಕು
  • ಮರುಮುದ್ರಣಕ್ಕೆ ಅವಕಾಶವಿರುವುದಿಲ್ಲ
  • ಆಯ್ಕೆಯಾದ ಕೃತಿಗಳ ಲೇಖಕರಿಗೆ ಮುದ್ರಿತ ಪುಸ್ತಕಗಳು ಅಥವ ಸಂಭಾವನೆಯನ್ನು ಪರಿಷತ್ತು ನೀಡುತ್ತದೆ
  • ಪರಿಷತ್ತು ನಿಯೋಜಿಸುವ ತೀರ್ಪುಗಾರರ ತೀರ್ಮಾನವೇ ಅಂತಿಮ
  • ಮೇ20 ರೊಳಗೆ ತಮ್ಮ ಕೃತಿಗಳನ್ನು ಕಳುಹಿಸಿ ಕೊಡಬೇಕು
ಸಂಪರ್ಕಿಸ ಬೇಕಾದ ವಿಳಾಸ...

ಗೌರವ ಕಾರ್ಯದರ್ಶಿ,
ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ
ಬೆಂಗಳೂರು-18
ದೂರವಾಣಿ : 080-26623584 ಯಾ 26612991

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X