• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಶ್ವಮೇಧಕ್ಕೆ ಹೊರಟ ಕಾಯ್ಕಿಣಿ ಕಥೆಗಳು!

By Staff
|
  • ಶಾಮ್‌

Cover page of Jayanth Kaikini’s ‘Dots and Lines’ಕನ್ನಡ ಸಾಹಿತ್ಯಿಕ ಕೃತಿಗಳನ್ನು ಇತರ ದೇಶ-ಭಾಷೆಗಳಿಗೆ ಕೊಂಡೊಯ್ಯಬೇಕು , ತನ್ಮೂಲಕ ಕರ್ನಾಟಕ ಹಾಗೂ ಭಾರತದ ಸಮಾಜ ಚಿಂತನೆಗಳನ್ನು ಜಾಗತಿಕ ಜನಮಾನಸದ ಭಿತ್ತಿಯಲ್ಲಿ ಹರಡಬೇಕು ಎನ್ನುವುದು ಇಲ್ಲಿ ಯಾವತ್ತೂ ಕೇಳಿಬರುವ ಕೂಗು. ದಗಡೂ ಪರಬನ ಅಶ್ವಮೇಧದಂತೆ ಈ ಪರಿಯ ಕೂಗುಗಳು ಕೂಗಾಗಿಯೇ ಉಳಿಯುತ್ತಿರುವ ಪರಿಸ್ಥಿತಿಯ ನಡುವೆಯೂ ಮಿಂಚು ಹೊಳೆದಂತೆ ಕೆಲವು ಕನ್ನಡ ಕೃತಿಗಳು ಪರಭಾಷೆಯಲ್ಲಿ ಜನ್ಮತಾಳುವುದುಂಟು. ಇಂಥದೊಂದು ಮಿಂಚು ನಮ್ಮ ನಡುವೆಯೇ ಬೆಳೆದ ಕಥೆಗಾರ ಜಯಂತ ಕಾಯ್ಕಿಣಿ ಅವರ ಸಂದರ್ಭದಲ್ಲಿ ಇವತ್ತು ನಿಜವಾಗುತ್ತಿರುವ ಸುದ್ದಿಯನ್ನು ನಿಮ್ಮ ಗಮನಕ್ಕೆ ತರಲು ದಟ್ಸ್‌ ಕನ್ನಡ ಡಾಟ್‌ ಕಾಂ ಸಂತೋಷ ಪಡುತ್ತದೆ.

ಕಾಯ್ಕಿಣಿ ಅವರ ‘ ಅಮೃತಬಳ್ಳಿ ಕಷಾಯ ಮತ್ತು ಇತರ ಕಥೆಗಳು’ ಬಹು ಚರ್ಚಿತ ಕಥಾ ಸಂಕಲನ. ಇಲ್ಲಿರುವ ಕಥೆಗಳು, ಎಲ್ಲೊ ಒಂದು ಕಡೆ, ಭಾರತೀಯ ಬದುಕಿಗೆ ಕೈ-ಕನ್ನಡಿಯಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಕೃತಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದರೆ ಲೇಸಲ್ಲವೆ ಎಂದು ಯೋಚಿಸಿದವರು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯ ಪ್ರೇಮಿ ಕನ್ನಡಿಗರು. ಕ್ಯಾಲಿಫ್‌ ಕನ್ನಡಿಗರು ಕಲೆತು ಕಟ್ಟಿಕೊಂಡಿರುವ ವೇದಿಕೆ ‘ಕನ್ನಡ ಸಾಹಿತ್ಯಗೋಷ್ಠಿ’ . ತಿಂಗಳಿಗೊಮ್ಮೆ ಗೋಷ್ಠಿಯ ಸದಸ್ಯರು ಕನ್ನಡ ಸಾಹಿತ್ಯಕ್ಕೇ ಮೀಸಲಾದ ಚರ್ಚೆ, ಭಾಷಣ, ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವುದು ವಾಡಿಕೆ.

ಗೋಷ್ಠಿಯ ಮುಂದಾಳು ವಿಶ್ವನಾಥ ಹುಲಿಕಲ್‌. ಇವರು ಸ್ವತಃ ಕಥೆಗಾರರಾಗಿದ್ದು ಕಳೆದ ವರ್ಷ ಅವರ ‘ಹೃದಯ’ ಕಥಾಸಂಕಲನ ಬೆಳಕು ಕಂಡಿದೆ. ಕನ್ನಡದ ಕೃತಿಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಬೆಳಕು ಕಾಣಿಸಬೇಕೆನ್ನುವುದು ಹುಲಿಕಲ್‌ ಅವರ ಒಂದು ವರ್ಷದ ಒಂದು ಕನಸು ಇವತ್ತು ಬೆಂಗಳೂರಿನಲ್ಲಿ ಸಾಕಾರಗೊಳ್ಳುತ್ತಿದೆ.

Jayanth Kaikiniನವದೆಹಲಿಯ ಇಂಡಿಯ ಲಾಗ್‌ ಸಂಸ್ಥೆ ಪ್ರಕಾಶಿಸಿರುವ ಅಮೃತಬಳ್ಳಿಯ...ಇಂಗ್ಲಿಷ್‌ ಅವತರಣಿಕೆಯ ಶೀರ್ಷಿಕೆ ‘ಡಾಟ್ಸ್‌ ಅಂಡ್‌ ಲೈನ್ಸ್‌ ’ ಅಕ್ಟೋಬರ್‌ 26ರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆ ಆಗುತ್ತಿದೆ. ಪುಸ್ತಕದ ಬೆಲೆ : 295 ರು. , ಪುಟ: 264.

ಪುಸ್ತಕವನ್ನು ಬಿಡುಗಡೆಗೊಳಿಸುತ್ತಿರುವವರು ಸಾಮಾನ್ಯವಾಗಿ ಸಾರ್ವಜನಿಕರ ಕಣ್ಣಿಗೆ ಬೀಳದ ಹಯವದನ ಗಿರೀಶ್‌ ಕಾರ್ನಾಡರು. ಕನ್ನಡ ಸಾಹಿತ್ಯವನ್ನು ಅನುವಾದಿಸುವ ನೋವು ನಲಿವುಗಳನ್ನು ವಿಶ್ವನಾಥ್‌ ಹುಲಿಕಲ್‌ ಸಾದರಪಡಿಸುವುದರ ಜತೆಗೆ, ಕೃತಿಯ ಆಯ್ದ ಭಾಗಗಳನ್ನು ಕಾಯ್ಕಿಣಿಯವರೇ ಪಠಿಸುವ ಡಾಟ್ಸ್‌ ಅಂಡ್‌ ಲೈನ್ಸ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಾದರೆ ವಿಳಾಸ ಗುರುತು ಹಾಕಿಕೊಳ್ಳಿ.

Crossword, ACR Towers, 32, Residency Road, Bangalore-560001. ಕಾರ್ಯಕ್ರಮ 26ರ ಸಂಜೆ 6 ಗಂಟೆಗೆ ಶುರು ಆಗುತ್ತದೆ.

ಸಾಹಿತ್ಯಗೋಷ್ಠಿಯ ವೆಬ್‌ ವಿಳಾಸ : http://www.sahityagoshti.org

ವಿಶ್ವನಾಥ್‌ ಅವರ ಇ-ವಿಳಾಸ : vhulikal@yahoo.com

ಜಯಂತ್‌ ಕಾಯ್ಕಿಣಿಯವರ ಇ-ವಿಳಾಸ : Jayantkaikini@vsnl.net

ಪ್ರಕಾಶಕರ ವಿಳಾಸ :

IINDIALOG Publications Pvt. Ltd.

O-22, Lajpat Nagar 11

New Delhi-110024

Ph : 91-11-29830504/29839936

Fax: 91-11-29835221

www.indialog.co.in

*Book release function is organized in association with Alphaland Books, Chennai and Crossword, Bangalore.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X