ಅಮೆರಿಕದ ಕನ್ನಡ ಲೇಖಕರಲ್ಲಿ ವಿನಂತಿ
ಮಾನ್ಯ ಬರಹಗಾರ ಸ್ನೇಹಿತರಿಗೆ ನಮಸ್ಕಾರಗಳು.
ನಾನು, ಜ್ಯೋತಿ ಮಹಾದೇವ್ (‘ ಸುಪ್ತ ದೀಪ್ತಿ ’) ಅಮೆರಿಕನ್ನಡ ಸಾಹಿತ್ಯವನ್ನು ಕುರಿತಾಗಿ ಸಂಶೋಧನಾ ಅಧ್ಯಯನ ಕೈಗೊಂಡಿರುವ ವಿಷಯ ತಮ್ಮಲ್ಲಿ ಕೆಲವರಿಗೆ ತಿಳಿದಿರಬಹುದು. ಅದಕ್ಕಾಗಿ ಹಂಪಿಯ ‘ಕನ್ನಡ ವಿ.ವಿ.’ಯಲ್ಲಿ ನೋಂದಣಿ ಇದೇ ಜನವರಿಯಲ್ಲಿ ಆಗಿದೆಯಷ್ಟೆ.
ನನ್ನೀ ಅಧ್ಯಯನಕ್ಕಾಗಿ ಅಮೆರಿಕನ್ನಡಿಗರಾದ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ತಮ್ಮೆಲ್ಲಾ ಬರಹಗಳು- ಪ್ರಕಟಿತ, ಅಪ್ರಕಟಿತ, ಪುಸ್ತಕ ರೂಪ, ಜಾಲ-ತಾಣ-ಪುಟ ರೂಪ, ಇತ್ಯಾದಿ ಯಾವುದೇ ಸ್ವರೂಪದಲ್ಲಿರಲಿ- ನನಗೆ ಬೇಕಾಗಿವೆ. ಅವುಗಳಲ್ಲಿ ಅನೇಕವು ಈಗಾಗಲೇ ನನ್ನಲ್ಲಿವೆ, ಇನ್ನೂ ಕೆಲವಾರು ಪುಸ್ತಕಗಳು ದೊರಕಬೇಕಾಗಿವೆ. ಈ ಪ್ರಯುಕ್ತ ತಾವೆಲ್ಲರೂ ತುಸು ಬಿಡುವು ಮಾಡಿಕೊಂಡು ತಂತಮ್ಮ ಪುಸ್ತಕಗಳ ವಿವರಗಳನ್ನು (ಜಾಲತಾಣಗಳಲ್ಲಿದ್ದರೆ ಅವುಗಳ ವಿಳಾಸಗಳನ್ನು), ತಮ್ಮ ದೂರವಾಣಿ ಸಂಖ್ಯೆಯ ಸಹಿತ, ದಯವಿಟ್ಟು ನನಗೆ ವಿ-ಅಂಚೆ ಮೂಲಕ ಕಳುಹಿಸಿ. ನನ್ನ ಪತಿ ಮಹಾದೇವ ಮರಡಿತ್ತಾಯ ಇದೇ ಬರುವ ಮಾರ್ಚ್ ತಿಂಗಳಲ್ಲಿ ಅಮೆರಿಕಾದಿಂದ ಬರುವವರಿದ್ದಾರೆ. ಆದ್ದರಿಂದ ಕೃತಿಗಳ ಸಂಗ್ರಹ ಕಾರ್ಯ ತುರ್ತಾಗಿ ಸಾಗಬೇಕಾಗಿದೆ. ದಯವಿಟ್ಟು ಸಹಕರಿಸಿ.
ಪುಸ್ತಕ-ಪ್ರತಿಗಳು ಈಗ ತಮ್ಮ ಬಳಿ ಅಲಭ್ಯವಾದಲ್ಲಿ, ಬೆಂಗಳೂರಲ್ಲಿ ಅವು ದೊರೆಯುವ ಸ್ಥಳ ತಿಳಿಸಿ; ಪಡೆಯುವ ಪ್ರಯತ್ನ ಮಾಡುವೆ. ಪ್ರತಿಗಳೇ ಅಲಭ್ಯವಾದಲ್ಲಿ ಅವುಗಳ ನಕಲು ಪ್ರತಿ (ಫೋಟೋ ಕಾಪಿ) ಮಾಡಿ ಕಳಿಸಿ, ಖರ್ಚು ಭರಿಸುತ್ತೇವೆ.
ಇಂತಿ ವಿಶ್ವಾಸಪೂರ್ವಕ ವಂದನೆಗಳು-
ಜ್ಯೋತಿ ಮಹಾದೇವ್,
ಮಣಿಪಾಲ, ಕರ್ನಾಟಕ.
(+0820) 257 0811
jyothimahadev@yahoo.com