• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭರತ ಮತ್ತು ಪುರಾಣ ನಾಮ ಚೂಡಾಮಣಿ

By Staff
|
  • ಜಾನಕಿ

ಶ್ರೀರಾಮನ ತಮ್ಮನಾದ ಭರತನ ಹಿರಿಯ ಮಗನ ಹೆಸರೇನು?

ಬಹುಶಃ ತಕ್ಷಣ ಉತ್ತರಿಸುವುದು ರಾಮಾಯಣವನ್ನು ಅರೆದು ಕುಡಿದವರಿಗೂ ಕಷ್ಟ. ಇಂಥ ವಿವರಗಳೆಲ್ಲ ಎಲ್ಲಿ ಸಿಗುತ್ತವೆ ಅಂತ ಹುಡುಕುವುದೂ ಕಷ್ಟವೇ. ಒಂದು ಸಣ್ಣ ವಿವರಕ್ಕಾಗಿ ಇಡೀ ಮಹಾಭಾರತವನ್ನೋ ರಾಮಾಯಣವನ್ನೋ ವಿಷ್ಣು ಪುರಾಣವನ್ನೋ ಜಾಲಾಡುತ್ತಾ ಕೂರುವುದು ಕೂಡ ಮೂರ್ಖತನವೇ.

ಅಂಥ ಹೊತ್ತಲ್ಲಿ ನೆರವಿಗೆ ಬರುವುದು ಎರಡು ಪುಸ್ತಕಗಳು. ಬೆನಗಲ್‌ ರಾಮರಾವ್‌ ಮತ್ತು ಪಾನ್ಯಂ ಸುಂದರಶಾಸ್ತ್ರಿ ಸಂಪಾದಿಸಿದ ಪುರಾಣನಾಮ ಚೂಡಾಮಣಿ ಮತ್ತು ಯಜ್ಞನಾರಾಯಣ ಉಡುಪರ ಪುರಾಣ ಭಾರತ ಕೋಶ.

ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಪುರಾಣ ಭಾರತ ಕೋಶವನ್ನೇ ನೋಡೋಣ. ಅಕ್ಷರಾನುಕ್ರಮವಾಗಿರುವ ಹೆಸರುಗಳ ಪೈಕಿ ಭರತನ ವಿವರಗಳನ್ನು ನೋಡಿ. ಇಬ್ಬರು ಭರತರಿದ್ದಾರೆ. ಅವರಲ್ಲೊಬ್ಬ ದುಷ್ಯಂತನ ಮಗ. ಈತನಿಂದ ನಮ್ಮ ಪ್ರಾಂತ್ಯಕ್ಕೆ ಭರತಖಂಡವೆಂಬ ಹೆಸರು ಬಂತು ಎನ್ನುವವರು ಈ ವಿವರಗಳನ್ನು ಓದಬೇಕು;

‘ಭರತನಿಗೆ ವಿದರ್ಭ ರಾಜಪುತ್ರಿಯರಾದ ತಾಸು, ಸುಂದೆ ಮತ್ತು ಮುಖ್ಯೆ ಎಂಬ ಮೂವರು ಹೆಂಡಿರು. ಈ ಮೂವರು ಹೆಂಡಿರಲ್ಲಿ ಆತನಿಗೆ ಒಂಬತ್ತು ಮಕ್ಕಳು ಜನಿಸಿದರು. ಆದರೆ ಒಬ್ಬರೂ ಭರತನನ್ನು ಹೋಲುತ್ತಿರಲಿಲ್ಲ. ಆದ್ದರಿಂದ ತಮಗೆ ವ್ಯಭಿಚಾರದೋಷದ ಅಪವಾದ ಬಂದೀತೆಂದು ಆ ಸ್ತ್ರೀಯರು ತಮ್ಮ ಮಕ್ಕಳನ್ನು ಕೊಂದುಬಿಟ್ಟರು. ರಾಜ ವಂಶವೇ ಅಂತ್ಯವಾಗುವ ಪ್ರಸಂಗ ಎದುರಾದಾಗ ದೇವತೆಗಳು ರಾಜನಿಗೆ ಭರದ್ವಾಜನೆಂಬ ಬಾಲಕನನ್ನು ಸಾಕಲು ಕೊಟ್ಟರು. ಈತನನ್ನೇ ರಾಜ ವಿತಥ ಎಂಬ ಹೆಸರಿನಿಂದ ಪುತ್ರನನ್ನಾಗಿ ಸ್ವೀಕರಿಸಿದ.’

ಇನ್ನೊಬ್ಬ ಭರತನ ಬಗ್ಗೆ ಈ ವಿವರಗಳಿವೆ; ದಶರಥ ಮತ್ತು ಕೈಕೆಯ ಮಗ. ಪತ್ನಿ ಕುಶಧ್ವಜನ ಮಗಳಾದ ಮಾಂಡವಿ. ರಾಮನ ಅಪ್ಪಣೆಯಂತೆ ಈತ ಗಂಧರ್ವದೇಶವನ್ನು ಜಯಿಸಿ ಅಲ್ಲಿ ತನ್ನ ಮಕ್ಕಳಾದ ತಕ್ಷ ಮತ್ತು ಪುಷ್ಕಲರಿಗೆ ತಕ್ಷಶಿಲಾ ಮತ್ತು ಪುಷ್ಕಲಾವತ ಎಂಬ ಪಟ್ಟಣವನ್ನು ನಿರ್ಮಿಸಿಕೊಟ್ಟ.

ಇನ್ನೊಬ್ಬ ಭರತ, ಋಷಭದೇವ-ಜಯಂತಿಯರ ಮಗ. ಇವನು ಪಾಲಿಸಿದ ದೇಶವೇ ಭರತಖಂಡ. ಇನ್ನೊಬ್ಬ ಭರತ ನಾಟ್ಯಶಾಸ್ತ್ರವನ್ನು ಬರೆದ ಭರತ ಮುನಿ. ಕೊನೆಯವನು ಶಂಯು ಎಂಬ ಅಗ್ನಿಯ ಎರಡನೆಯ ಮಗ.

ಹೀಗೆ ಭರತನ ಇತಿಹಾಸವೂ ಪುರಾಣವೂ ಇಲ್ಲಿ ಸಿಗುತ್ತದೆ. ಪುರಾಣದ ಅಷ್ಟೂ ಹೆಸರುಗಳೂ ಸ್ಥಳನಾಮಗಳೂ ಇರುವ ಈ ಪುಸ್ತಕ ನಿಮ್ಮ ಸಂಗ್ರಹದಲ್ಲಿ ಇರಲೇಬೇಕಾದದ್ದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more