• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಸ್ತಕಪ್ರಿಯ ಕನ್ನಡಿಗರಲ್ಲೊಂದು ಮನವಿ ...

By Staff
|

ಆತ್ಮೀಯರೆ,

ಕನ್ನಡದಲ್ಲಿ ಪುಸ್ತಕ ಬರೆಯುವವರ ಮತ್ತು ಪ್ರಕಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದು ಸಂತೋಷದ ಸಂಗತಿ. ಆದರೆ ಬೇಸರದ ವಿಷಯವೆಂದರೆ ಹೀಗೆ ಪ್ರಕಟವಾದ ಪುಸ್ತಕಗಳು ಸರಿಯಾಗಿ ಓದುಗರ ಕೈ ಸೇರುತ್ತಿಲ್ಲ. ಓದುಗರೂ ಸಿಗುತ್ತಿಲ್ಲ. ಕಾರಣಗಳು ಹಲವಾರು. ಪ್ರಕಟವಾದ ಪುಸ್ತಕಗಳನ್ನು ಜನರಿಗೆ ತಲುಪಿಸಲು ಮುಖ್ಯ ವಾಹಿನಿಯಾಗಿದ್ದ ಗ್ರಂಥಾಲಯಗಳೂ ಪುಸ್ತಕಗಳನ್ನು ಕೊಳ್ಳುತ್ತಿಲ್ಲ. ಕೊಂಡರೂ, ಆ ಪುಸ್ತಕಗಳು ಜನರ ಕೈ ಸೇರದೆ ಯಾವುದೋ ಕತ್ತಲಕೋಣೆಯಲ್ಲಿ ಧೂಳುತಿನ್ನುವ ವಿಕೃತ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲಾಗಿ, ಪುಸ್ತಕದ ಬೆಲೆಯೂ ಎಟುಕದ ರೀತಿಯಲ್ಲಿ ಮೇಲೆ ಮೇಲೆ ಹೋಗಿ ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ.

ಟಿವಿಯಂತಹ ದೃಶ್ಯಮಾಧ್ಯಮ ಜನರ ಓದುವ ಹವ್ಯಾಸ ಮತ್ತು ಸಮಯವನ್ನು ಸಂಪೂರ್ಣವಾಗಿ ಕಬಳಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿರುವ ‘ಜನಪರ ಪುಸ್ತಕ ಮಾಲೆ’ ಈ ಕೆಳಕಂಡ ಧ್ಯೇಯಗಳನ್ನು ಹೊಂದಿದೆ:

1) ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬೆಲೆಯಲ್ಲಿ ಪುಸ್ತಕಗಳು ಓದುಗರನ್ನು ತಲುಪುವಂತೆ ಮಾಡುವುದು.

2) ಯಾವ ಸರ್ಕಾರಿ ಸವಲತ್ತುಗಳನ್ನು ಅಪೇಕ್ಷಿಸದೆ ಪುಸ್ತಕಗಳು ನೇರವಾಗಿ ಸಾಹಿತ್ಯಾಭಿಲಾಷಿಗಳನ್ನು ಸೇರುವಂತೆ ಮಾಡುವುದು.

3) ಅನುಭವಸ್ಥ ಮತ್ತು ಹೊಸ ಲೇಖಕರ ಕೃತಿಗಳನ್ನು ಪ್ರಕಟಿಸಿ ಬರಹಗಾರರನ್ನು ಪ್ರೋತ್ಸಾಹಿಸುವುದು.

4) ಎಲ್ಲದಕ್ಕಿಂತಾ ಮುಖ್ಯವಾಗಿ, ಯುವ ಕನ್ನಡಿಗರಲ್ಲಿ ಓದುವ ಪ್ರವೃತ್ತಿ ಬೆಳಸುವುದು.

ಕೇವಲ ನೂರು ರುಪಾಯಿ ವಾರ್ಷಿಕ ಶುಲ್ಕಕ್ಕೆ ವರ್ಷಕ್ಕೆ ನಾಲ್ಕು ಸದಭಿರುಚಿಯ ಪುಸ್ತಕಗಳನ್ನು ಜನರ ಕೈಗೆ ತಲುಪಿಸುವ ಮಹತ್ವಾಕಾಂಕ್ಷೆಯನ್ನು ಜನಪರ ಪುಸ್ತಕಮಾಲೆಯು ಹೊಂದಿದ್ದು ಈಗಾಗಲೇ ಯಶಸ್ವಿಯಾಗಿ ಮೊದಲ ಕಂತಿನ ಎರಡು ಪುಸ್ತಕಗಳನ್ನು ಪ್ರಕಟಿಸಿ ಸದಸ್ಯರ ಕೈಗೆ ಸೇರಿಸಿದೆ (ಪುಸ್ತಕಗಳು - ‘ಪ್ರಶ್ನೆ-ಪ್ರಜ್ಞೆ - ಅಂಕಣಬರಹಗಳ ಸಂಗ್ರಹ’ ಮತ್ತು ‘ತಿಂಗಳಬೆಳಕು ಸಣ್ಣಕತೆಗಳು’ ಇವೆರಡರ ಲೇಖಕರು ಡಾ. ಶಾಂತಾರಾಮ ಸೋಮಯಾಜಿ).

ಸದಸ್ಯರ ಸಂಖ್ಯಾಬಲ ಬೆಳೆದಂತೆ ಜನಪರ ಪುಸ್ತಕಮಾಲೆಗೆ ತನ್ನ ಧ್ಯೇಯಗಳನ್ನು ನಿಚ್ಚಳವಾಗಿ ಸಾಧಿಸುವ ಶಕ್ತಿ ಬರುತ್ತದೆ. ನಾಲ್ಕಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿ ಓದುಗರೇ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುವ ಬಲಬರುತ್ತದೆ. ಹಾಗಾಗಿ, ಈ ಸಂದರ್ಭದಲ್ಲಿ ನಾವು ನಿಮ್ಮನ್ನು ಈ ಪುಸ್ತಕಮಾಲೆಗೆ ಸದಸ್ಯರಾಗಿ ಸಾಹಿತ್ಯವನ್ನು ಜನರೆಡೆಗೆ ತೆಗೆದುಕೊಂಡು ಹೋಗುವ ಉದ್ಧೇಶದ ಸಫಲತೆಗೆ ಸಹಕರಿಸಿ ಎಂದು ಕೇಳಿಕೊಳ್ಳುತ್ತೇವೆ.

ವಿವರಗಳು :

ಒಂದು ವರ್ಷದಲ್ಲಿ ನಿಮ್ಮ ವಿಳಾಸಕ್ಕೆ ತಲುಪುವ ಪುಸ್ತಕಗಳು : 4 (ವರ್ಷದ ಮೊದಲಾರ್ಧದಲ್ಲಿ ಎರಡು ಮತ್ತು ವರ್ಷಾಂತ್ಯದಲ್ಲಿ ಎರಡು).

ವಾರ್ಷಿಕ ಶುಲ್ಕ-

ಭಾರತದ ವಿಳಾಸಕ್ಕೆ ಪುಸ್ತಕವನ್ನು ಕಳುಹಿಸಲು - 100 ರುಪಾಯಿಗಳು.
ಅಮೆರಿಕಾದ ವಿಳಾಸಕ್ಕೆ ತಲುಪಿಸಲು - 15 ಡಾಲರುಗಳು

ಅಮೆರಿಕಾದಲ್ಲಿ ನೆಲಸಿರುವವರು ಭಾರತದ ವಿಳಾಸಕ್ಕೆ ಪುಸ್ತಕಗಳನ್ನು ತಲುಪಿಸಲು ಬಯಸುವಿರಾದರೆ (ಉದಾಹರಣೆಗೆ, ನೀವು ಓದಿದ ಶಾಲೆಗೆ ಅಥವಾ ನಿಮ್ಮೂರಿನ ಲೈಬ್ರರಿಗೆ) - 5 ಡಾಲರುಗಳು

ಸದಸ್ಯರಾಗಲು ಬಯಸುವವರು ತಮ್ಮ ಅಂಚೆಯ ವಿಳಾಸ, ದೂರವಾಣಿ ಸಂಖ್ಯೆ, ತಮ್ಮಿಷ್ಟದ ಸಾಹಿತ್ಯದ ಪ್ರಕಾರ (ಕಾದಂಬರಿ, ಸಣ್ಣಕತೆ, ಪ್ರವಾಸ, ಪ್ರಬಂಧ) ಈ ವಿವರಗಳನ್ನು ಎಂ.ಆರ್‌. ದತ್ತಾತ್ರಿ ಅಥವಾ ಶಾಂತಾರಾಮ ಸೋಮಯಾಜಿಯವರ ಈ ಕೆಳಗಿನ ಈ-ಮೈಲ್‌ ವಿಳಾಸಕ್ಕೆ ಕಳುಹಿಸಿಕೊಡಿ. ನಿಮಗೆ ಈ ವರ್ಷದ ಮೊದಲ ಕಂತಿನ ಎರಡು ಪುಸ್ತಕಗಳನ್ನು ಕಳುಹಿಸಿದ ನಂತರ ‘ಜನಪರ ಪುಸ್ತಕ ಮಾಲೆ’ ನಿಮ್ಮಿಂದ ಹಣವನ್ನು ಪಡೆಯುತ್ತದೆ.

ಸದಸ್ಯರಾಗಲು ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :

ಎಂ.ಆರ್‌. ದತ್ತಾತ್ರಿ (Dattathri_M_R@yahoo.com)
ಶಾಂತಾರಾಮ ಸೋಮಯಾಜಿ (ShanthSomayaji@yahoo.com)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more