• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಅಮೆರಿಕಾ ಸಂಕೇತಿ ಸಂಘದ ಹೆಮ್ಮೆಯ ಮುಖವಾಣಿ ‘ವಿಂಶತಿ’

By Staff
|

ಪತ್ರಿಕೆಯ ಮೇಲೆ ಕಣ್ಣಾಡಿಸಿದಾಗ ನನ್ನ ಮನಸ್ಸಿಗೆ ಬಂದ ಮೊದಲ ಅನಿಸಿಕೆ -ಹೊರ ನೋಟಕ್ಕೆ ಕನ್ನಡ ಸಾಹಿತ್ಯಕ ಪತ್ರಿಕೆ ಎಂಬಂತೆ ಕಂಡರೂ ಇದನ್ನು ಸಂಕೇತಿ ಜನಾಂಗದ ಹೆಮ್ಮೆಯ ಮುಖವಾಣಿ ಎಂದರೆ ಹೆಚ್ಚು ಸೂಕ್ತವಾಗಬಹುದು ಅಂತ. ಯಾಕೆಂದರೆ ಬಂದ 41 ಲೇಖನಗಳಲ್ಲಿ 26 ಇಂಗ್ಲಿಷ್‌ ಲೇಖನಗಳು! ಸಂಪಾದಕೀಯ ಕೂಡಾ ಎರಡೂ ಭಾಷೆಯಲ್ಲಿದೆ. ಹಲವು ದಶಕಗಳ ಹಿಂದೆ ವಲಸೆ ಬಂದ ಮೊದಲ ಪೀಳಿಗೆಯವರ ಮಕ್ಕಳು ಇಲ್ಲಿ ಅಮೆರಿಕಾದಲ್ಲಿ ಬೆಳೆದು ದೊಡ್ಡವರಾಗಿ ಈಗ ಇಂತಹ ಸಂಸ್ಥೆಗಳ ಸೂತ್ರವನ್ನು ಕೈಯಲ್ಲಿ ಹಿಡಿಯಲು ಸಿದ್ಧರಾಗಿ ನಿಂತಿರುವ ಸಮಯದಲ್ಲಿ ಇದು ಅಗತ್ಯವಾದ ಒಂದು ಬದಲಾವಣೆ ಎನ್ನಿಸಿತು. ಅಲ್ಲದೆ ಯುವ ಜನಾಂಗದವರು ಇಂಗ್ಲಿಷ್‌ನಲ್ಲಿ ಬರೆದ ಲೇಖನಗಳು ಕೂಡಾ ಬಹಳ ಒಳ್ಳೆಯ ಗುಣಮಟ್ಟದವಾಗಿದ್ದು ನಮ್ಮಂಥವರಿಗೆ ಹೆಮ್ಮೆ ಉಂಟು ಮಾಡುವಂತಿದೆ! ಉದಾಹರಣೆಗೆ ಲಕ್ಷ್ಮಿ ಜಯರಾಮ್‌ ಮತ್ತು ಶುಭಾ ದತ್ತಾತ್ರಿ ಅವರ what comes first: love or commitment ಮತ್ತು ಲತಾ ರಾಮಕೃಷ್ಣ ಅವರು ಬರೆದ Future direction of North American Sanketi Association. ಈ ಎರಡು ಲೇಖನಗಳೂ ಇಂತಹ ಎಳೆಯ ವಯಸ್ಸಿನಲ್ಲೇ ಈ ಹುಡುಗಿಯರು ಎಷ್ಟು ಪ್ರಬುದ್ಧ ಚಿಂತನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ! ಎಂದು ಆಶ್ಚರ್ಯ ಮೂಡಿಸುತ್ತವೆ.

ಅದಲ್ಲದೆ ಕನ್ನಡ ನಾಡಿನಲ್ಲೇ ಬೆಳೆದ ಹಿರಿಯ ತಲೆಮಾರಿನವರೂ ಈ ದಿನ ಇಂಗ್ಲಿಷ್‌ನಲ್ಲೇ ಹೆಚ್ಚು ಸಲೀಸಾಗಿ ಲೇಖನಿ ಓಡುತ್ತದೆ ಎಂದು ಭಾವಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಹಲವು ಇಂಗ್ಲಿಷ್‌ ಲೇಖನಗಳಿವೆ(ಇವುಗಳಲ್ಲಿ ಅನೇಕ ಲೇಖನಗಳು ಉತ್ತಮ ದರ್ಜೆಯವು ಎಂಬುದರಲ್ಲಿ ಸಂಶಯವೇ ಇಲ್ಲ). ಈ ಲೇಖನಗಳು ಕನ್ನಡದಲ್ಲಿ ಬರೆದ ಲೇಖನಗಳಿಗಿಂತ ಹೆಚ್ಚು ಓದಿಸಿಕೊಳ್ಳುತ್ತವೆ! ಇದು ಕೇವಲ ಸಂಕೇತಿ ಜನಾಂಗವಷ್ಟೇ ಅಲ್ಲದೆ ಎಲ್ಲ ಕನ್ನಡಿಗರ ಪರಿಸ್ಥಿತಿಯೂ ಆಗಿದೆ ಎಂದು ಯೋಚಿಸುವಾಗ ಕನ್ನಡದ ಇಂದಿನ ಸ್ಥಿತಿಗತಿಯ ಕಟು ಸತ್ಯ ಕಣ್ಣಿಗೆ ಕಟ್ಟುತ್ತದೆ!

ಪ್ರಕಟವಾದ ಲೇಖನಗಳಲ್ಲಿ ಮುಕ್ಕಾಲು ಪಾಲು ಸಂಕೇತಿಗಳಿಗೆ ಸಂಬಂಧ ಪಟ್ಟ ಪ್ರಬಂಧಗಳಾಗಿವೆ. ಇರುವ ಕೆಲವು ‘ಸಾಹಿತ್ಯಕ’ ಎನ್ನಬಹುದಾದ ಲೇಖನಗಳು ಸದಸ್ಯರಲ್ಲದೆ ಹೊರಗಿನವರಿಂದ ಬಂದ ಆಹ್ವಾನಿತ ಲೇಖನಗಳು. ರಾಜಗೋಪಾಲ್‌ ಅವರು ಬರೆದ ‘ದಾರಿ ಬೆಳಗಿಸಿದ ಗುರು ಶ್ರೀಮತಿ ಎ.ರುಕ್ಮಿಣಮ್ಮ’, ವಿಶ್ವನಾಥ್‌ ಹುಲಿಕಲ್‌ ಬರೆದ ‘ಐಹಿಕಾಭ್ಯುದಯ’, ಹಂ.ಕ. ಕೃಷ್ಣಪ್ರಿಯ ಬರೆದ ‘ನಾ ಕಂಡ ಹಾಗೆ ಕೆಲವರು ಸಂಕೇತಿಗಳು’ ಈ ಪಂಗಡಕ್ಕೆ ಸೇರಿದಂತವು. ಆಹ್ವಾನಿತ ಲೇಖನ ಅಂದ ಮೇಲೆ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ ಅಲ್ಲವೆ? ಸಂಪಾದಕರು ಅಂತಹ ಲೇಖಕರನ್ನೇ ಕೇಳಿಕೊಳ್ಳುತ್ತಾರೆ.

ಸಂಕೇತಿ ಜನಾಂಗಕ್ಕೆ ಸಂಬಂಧ ಪಟ್ಟ ಲೇಖನಗಳನ್ನು ಓದುತ್ತಿದ್ದ ಹಾಗೆ ಕ್ರಿ.ಶ. 11ನೆಯ ಶತಮಾನದಲ್ಲಿ ವಲಸೆ ಬಂದಿರಬಹುದಾದ ಈ ತಮಿಳು ಜನಾಂಗ (ಇದೇ ಪತ್ರಿಕೆಯಲ್ಲಿ ಡಾ.ಬಿ.ವಿ.ಸುಧಾಮಣಿಯವರ ‘ಸಂಕೇತಿ ಬ್ರಾಹ್ಮಣರ ವಲಸೆಯ ಕಾಲ - ಒಂದು ಸಮೀಕ್ಷೆ’ ಎಂಬ ಲೇಖನದಲ್ಲಿ ಲಭಿಸಿದ ಅಂಕಿ ಅಂಶ) ಕರ್ನಾಟಕಕ್ಕೆ ಒಂದು ವರದಾನವಾಗಿ ಪರಿಣಮಿಸಿದರಲ್ಲವೆ? ಎನ್ನಿಸಿಬಿಡುತ್ತದೆ! ಆರ್‌.ಕೆ.ಶ್ರೀಕಂಠನ್‌, ಆರ್‌.ಕೆ.ಸೂರ್ಯನಾರಾಯಣ, ರತ್ನಮಾಲಾ ಪ್ರಕಾಶ್‌, ಕೊಳಲು ಪುಟ್ಟಣ್ಣನವರು....ಇತ್ಯಾದಿ, ಇತ್ಯಾದಿ ಒಬ್ಬರೆ, ಇಬ್ಬರೆ ? ಅದ್ಭುತ ಸಾಧನೆಗಳನ್ನು ಮಾಡಿದ ಈ ಎಲ್ಲರನ್ನೂ ಇಂದು ನಾವು ‘ನಮ್ಮ ಕನ್ನಡಿಗರು’ ಎಂದು ಕರೆದು ಹೆಮ್ಮೆ ಪಟ್ಟುಕೊಳ್ಳುತ್ತೀವಲ್ಲವೆ? ಎಂದೆನಿಸಿತು.

ಇನ್ನು ಜನರಲ್‌ ಎಂದು ಹೇಳಬಹುದಾದ ಲೇಖನಗಳು - ಬಿ. ನಾಗೇಂದ್ರ ಅವರ The significance of upanayana and Gayatri Mantra. ‘ಹೊಸಹಳ್ಳಿಯ ಶ್ರೀ ಗಾಯತ್ರಿ ವೇದ ಪಾಠ ಶಾಲೆ ’ಬಾಲಾಜಿ ಹೆಬ್ಬಾರ್‌ ಅವರ Hinduisam: Retrospect and prospect ಮುಂತಾದವು ಇವೆ. ಚೆನ್ನಾಗಿವೆ!

ಸಂಕೇತಿ ಬ್ರಾಹ್ಮಣರೊಬ್ಬರು ಅಮೆರಿಕಾದ ಸೇನೆಯಲ್ಲಿ ‘ಕರ್ನಲ್‌ ಜಯರಾಮ್‌’ ಆಗಿದ್ದು ಕಮ್ಯಾಂಡ್‌ ಸರ್ಜನ್‌ ಆಗಿದ್ದರು! ಅವರು ಅಮೆರಿಕಾದ ಸೇನೆಗೆ ಸಲ್ಲಿಸಿದ ಸೇವೆಗಾಗಿ ಅಮೆರಿಕಾ ಸರ್ಕಾರ ಅವರನ್ನು ಗೌರವಿಸಿತು! ಎಂದರೆ ಆಶ್ಚರ್ಯ, ಹೆಮ್ಮೆ ಎರಡೂ ಒಟ್ಟಿಗೆ ಉಂಟಾಗುತ್ತದೆ ಅಲ್ಲವೆ? ಇವರೇ ಈ ಸಂಘದ ಮೊದಲ ಅಧ್ಯಕ್ಷರೂ ಆಗಿದ್ದರು. ಅವರ ಬಗ್ಗೆ ಅಮೆರಿಕಾದಲ್ಲಿ ಪ್ರಕಟವಾಗುವ ‘ಇಂಡಿಯಾ ಅಬ್ರಾಡ್‌’ ಎಂಬ ಪತ್ರಿಕೆಯಲ್ಲಿ ಬಂದ ಲೇಖನವೂ ಇದೆ.

ಕೊನೆಯಲ್ಲಿ ನನ್ನ ಮನಸ್ಸನ್ನು ತಟ್ಟಿದ ಲೇಖನ ಅಂದರೆ ಪ್ರಕಾಶ್‌ ಮತ್ತು ವಿಜಯ ಕೇಶವಯ್ಯ ಅವರ The Homecoming. ಲೇಖನ ನಮ್ಮಂತೆ ಮೂವತ್ತು ವರ್ಷಗಳ ಹಿಂದೆ ಅಮೆರಿಕಾಗೆ ವಲಸೆ ಬಂದ ಈ ದಂಪತಿಗಳು ಸ್ವಾಮಿ ರಾಮ ಅವರ ಸಲಹೆಯ ಮೇರೆಗೆ ಐಹಿಕ ಸುಖಗಳನ್ನೆಲ್ಲ ತ್ಯಜಿಸಿ, ತಮ್ಮ ಉನ್ನತ ಹುದ್ದೆಗೆ ಗುಡ್‌ ಬೈ ಹೇಳಿ, ಮಕ್ಕಳನ್ನು ಇಲ್ಲಿಯೇ ಬಿಟ್ಟು ಹೃಷಿಕೇಶಕ್ಕೆ ಹೋಗಿ ಅಲ್ಲಿ ಆಸ್ಪತ್ರೆ, ಗೆಸ್ಟ್‌ ಹೌಸ್‌ ಮುಂತಾದವನ್ನು ನಡೆಸುವುದರಲ್ಲಿ ಸ್ವಾಮಿ ರಾಮ ಅವರಿಗೆ ಸಹಾಯ ಮಾಡುತ್ತಾ ಆಧ್ಯಾತ್ಮಿಕ ಸಾಧನೆಯಲ್ಲೂ ತೊಡಗಿದ ಈ ಲೇಖನ ರೋಮಾಂಚನವನ್ನುಂಟುಮಾಡಿತು. ನಮ್ಮಲ್ಲಿ ಹಲವರ ಕನಸು ಇದು. ಉಂಡದ್ದಾಯಿತು, ಉಟ್ಟದ್ದಾಯಿತು, ಕಾರು, ಬಂಗಲೆ ಎಲ್ಲ ವೈಭೋಗವೂ ಆಯಿತು. ಇನ್ನಾದರೂ ಇದೆಲ್ಲವನ್ನೂ ಮೀರಿದ ಒಂದು ಚಿರಂತನ ಸತ್ಯವನ್ನು ಅರಿಯಲು, ಅನುಭವಿಸಲು ಹಾತೊರೆಯುತ್ತಿರುವ ಹೃದಯ, ಕಾತರಿಸುತ್ತಿರುವ ಮನಸ್ಸು.....ಆದರೆ ಮಕ್ಕಳಿಗೆ ನಮ್ಮ ಅಗತ್ಯವಿದೆ ಎಂಬ ಹಿಂಜರಿಕೆ. ಮಕ್ಕಳಿಗೆ ನಮ್ಮ ಅಗತ್ಯವಿದೆಯೋ, ನಮಗೆ ಮಕ್ಕಳ ಅಗತ್ಯವಿದೆಯೋ! ನಮ್ಮಂತಹವರ ಕನಸನ್ನು ತಮ್ಮ ಬಾಳಿನಲ್ಲಿ ನನಸಾಗಿಸಿಕೊಂಡ ಪ್ರಕಾಶ್‌ ಮತ್ತು ವಿಜಯ ಅವರಿಗೆ ಅಭಿನಂದನೆಗಳು.

ಒಟ್ಟಿನಲ್ಲಿ ಹೇಳಬಹುದಾದರೆ ಉತ್ತರ ಅಮೆರಿಕಾದ ಎಲ್ಲ ಸಂಕೇತಿಗಳೂ ಹೆಮ್ಮೆ ಪಟ್ಟುಕೊಳ್ಳಬೇಕಾದ ಪತ್ರಿಕೆ ‘ವಿಂಶತಿ’. ಸಂಪಾದಕರಾದ ಮೈ.ಶ್ರೀ.ನಟರಾಜ್‌ ಅವರಿಗೆ ಅಭಿನಂದನೆಗಳು!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more