• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪ ಸಾಲಿನ ನಡುವೆ : ಒಲವ ಕವಿಯ ಹೊಸಗಾನ !

By Staff
|
  • ದಟ್ಸ್‌ಕನ್ನಡ ಬ್ಯೂರೊ

‘ಮೈಸೂರು ಮಲ್ಲಿಗೆ’ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಇಳಿವಯಸ್ಸಿನ ಕಾವ್ಯದ ಫಸಲು ಸಮೃದ್ಧವಾದಂತಿದೆ. ಕಾವ್ಯಕೃಷಿಯ ಅವರ ಈ ಹೊತ್ತಿನ ಪೈರು- ‘ದೀಪ ಸಾಲಿನ ನಡುವೆ’ !

ನಲವತ್ತೆೈದು ಕವಿತೆಗಳ ಸಂಕಲನ ‘ದೀಪ ಸಾಲಿನ ನಡುವೆ’ ಕೃತಿಯನ್ನು ಅಂಕಿತ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ನರಸಿಂಹಸ್ವಾಮಿಯವರ ಕವಿತೆಗಳ ಚೆಲುವು ಹಾಗೂ ಜೀವನಪ್ರೀತಿಯನ್ನು ಈ ಸಂಕಲನದಲ್ಲೂ ಕಾಣಬಹುದು. ಮುನ್ನುಡಿ ಬರೆದಿರುವ ಕವಿ ಸುಮತೀಂದ್ರ ನಾಡಿಗ- ಬದುಕಿನಲ್ಲಿರುವ ಜೀವನ ಪ್ರೀತಿ ಮಾಸದೇ ಇರಲಿ ಎನ್ನುವುದು ನರಸಿಂಹಸ್ವಾಮಿಯವರ ಜೀವನ ಪ್ರೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನರಸಿಂಹಸ್ವಾಮಿಯವರ ಅವರಿಗಷ್ಟೇ ಸಾಧ್ಯವಾದ ವಿಶಿಷ್ಟ ಶೈಲಿಗೆ, ‘ದೀಪ ಸಾಲಿನ ನಡುವೆ’ ಸಂಕಲನದಲ್ಲಿನ ಕೆಳಗಿನ ಸಾಲುಗಳನ್ನು ನೋಡಿ :

K.S. Narasimha Swamyಕನ್ನಂಬಾಡಿಯು ಸುಬ್ಬಾಭಟ್ಟರು

ಹಾಸಿಗೆ ಹಿಡಿದಿಹರಂತೆ

ಊರಿಗೆ ಊರೇ ನೋಡಲು ಬಂತು

ಮನೆಯ ಸುತ್ತಲು ಸಂತೆ...

ಕನ್ನಂಬಾಡಿಯ ಸುಬ್ಬಾಭಟ್ಟರು

ಚಿನ್ನದಂಥ ವ್ಯಕ್ತಿ

ಊರಿಗೆ ಊರೇ ಪೊರೆಯುವುದವರನು

ಮರಳಲಿ ಅವರಿಗೆ ಶಕ್ತಿ

*

ಹೂವು ಅರಳುವುದಿಲ್ಲ , ಹಕ್ಕಿ ಹಾಡುವುದಿಲ್ಲ

ವಿಷಯ ತಿಳಿದವರು ಮಾತಾಡಲಿಲ್ಲ .

ಬಹುಮಂದಿ ತಿಳಿಯದವರೇ ಬಿಗಿದು ಭಾಷಣವ

ಸಂಜೆಯಾಗಿತ್ತು ನಮ್ಮೂರಿನಲ್ಲಿ .

*

ತುಂಬಿದಿರುಳಿನ ನಡುವೆ ನಾನು ಕಿರುದೋಣಿಯಲಿ

ಈಗಲೇ ಹೊರಟಿರುವ ಆಚೆ ದಡಕೆ

ಬದುಕಿ ಬಾಳುವ ಮಂದಿಗರ್ಥವಾಯಿತು ಕವಿತೆ

ಅನುಭವದ ಆಚೆಗಿದೆ ನನ್ನ ಬದುಕೆ

*

ನೆನೆಯುತ್ತ ನಿನಗಲ್ಲಿ ತುಂಬು ನಿದ್ದೆಯು ಬರಲಿ

ಹೊಂಗನಸು ನಿದ್ದೆಯಲಿ ಕಂಡುಬರಲಿ

ನೀ ಮುಡಿದ ಹೂವು ಬಾಡದೆ ಇರಲಿ, ಸುಖವಿರಲಿ

ನಿನ್ನೊಲವೆ ನಿನ್ನನ್ನು ಕಾಪಾಡಲಿ.

*

‘ದೀಪ ಸಾಲಿನ ನಡುವೆ’ ಸಂಕಲನದ ಕವಿತೆಗಳನ್ನು ಗೆಳೆಯ ಎಂ.ವಿ.ವೆಂಕಟೇಶಮೂರ್ತಿಯವರ ಒತ್ತಾಯದಿಂದ ಬರೆದೆ ಎಂದು ನರಸಿಂಹಸ್ವಾಮಿ ತಮ್ಮ ಕವಿತೆಗಳು ಹುಟ್ಟಿಬಂದ ಬಗೆಯನ್ನು ಪುಸ್ತಕದಲ್ಲಿ ನೆನೆದಿದ್ದಾರೆ.

ಸೆ.14ರ ಭಾನುವಾರ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಪುಸ್ತಕದ ಬಿಡುಗಡೆ. ಹಣತೆಯ ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಪುಸ್ತಕ ಬಿಡುಗಡೆ ಮಾಡುವರು. ‘ಇಗೋ ಕನ್ನಡ’ದ ಜಿ.ವೆಂಕಟಸುಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮುಖ್ಯ ಅತಿಥಿ.

ಪುಸ್ತಕ ಬಿಡುಗಡೆಯ ಸಂಭ್ರಮ ಒಂದೆಡೆಯಿದ್ದರೆ, ಈ ಸಂಭ್ರಮದ ಬೆನ್ನಲ್ಲೇ ವಿಷಾದದ ಸಂಗತಿಯೂ ಒಂದಿದೆ. ನರಸಿಂಹಸ್ವಾಮಿಯವರ ಆರೋಗ್ಯ ಈಗ ಚೆನ್ನಾಗಿಲ್ಲ . ಮಂಚದಿಂದ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿರುವ ನರಸಿಂಹ ಸ್ವಾಮಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಾರಂಭಕ್ಕೆ ಬರುವಷ್ಟು ಚೈತನ್ಯವೂ ಅವರಲ್ಲಿಲ್ಲ . ನರಸಿಂಹಸ್ವಾಮಿ ಬೇಗ ಚೇತರಿಸಿಕೊಳ್ಳಲಿ; ಕಾವ್ಯಕೃಷಿ ನಿರಂತರವಾಗಿರಲಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more