• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಶ್ರೀತ್ಯಾಗರಾಜ ಯೋಗ ವೈಭವಂ’ ಇದು ತ್ಯಾಗರಾಜರ ವಿಶ್ವಕೋಶ

By Staff
|

ಬೆಂಗಳೂರು : ಶ್ರೀತ್ಯಾಗರಾಜರು ಕರ್ನಾಟಕ ಸಂಗೀತವನ್ನು ಶ್ರೀಮಂತಗೊಳಿಸಿದ ಸಂತ- ವಾಗ್ಗೇಯಕಾರ. ಇವರು ಸಂಗೀತ ಹಾಗೂ ಸಾಹಿತ್ಯ ಪರಂಪರೆಯಿಂದ ಕರ್ನಾಟಕ ಸಂಗೀತಕ್ಕೆ ಹೊಸ ಆಯಾಮವನ್ನೇ ನೀಡಿದ ಅಧ್ವರ್ಯು.

ಇವರು ರಚಿಸಿರುವ ಸಾವಿರಾರು ಕೃತಿಗಳನ್ನು ಒಂದೆಡೆ ಕಲೆಹಾಕುವ ಕೆಲಸ ಈಹೊತ್ತು ನಡೆದಿದೆ. ಎರಡು ಸಂಪುಟಗಳೂ ಹೊರಬಂದಿವೆ. ಇದು ಭಾರತ-ಭಾರತೀ ಸಂಗೀತ ಸೇವಾ ಪ್ರತಿಷ್ಠಾನದ ಪರಿಕಲ್ಪನೆ. ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ಬೆಂಗಳೂರಿನ ಪ್ರಿಸಮ್‌ ಬುಕ್‌ಹೌಸ್‌. ಈ ಸಮಗ್ರ ಕೃತಿ ಸಂಗ್ರಹ ಈಗ ಪುಸ್ತಕ ರೂಪದಲ್ಲಿ ಪ್ರಕಾಶಿಸಿದೆ. ಈ ಸುಂದರ ಕೃತಿಯ ಹೆಸರೇನು ಗೊತ್ತೆ? ‘ಶ್ರೀತ್ಯಾಗರಾಜ ಯೋಗ ವೈಭವಂ’ ಇದು ಶ್ರೀ ತ್ಯಾಗರಾಜರ ವಿಶ್ವಕೋಶ.

ಶ್ರೀತ್ಯಾಗರಾಜರ ಸುಮಾರು ಒಂದು ಸಾವಿರ ಕೃತಿಗಳ ಸಾಹಿತ್ಯ ಮತ್ತು ಸಂಗೀತದ ಸಮಗ್ರ ಅಧ್ಯಯನವನ್ನು ಅನೇಕ ವಿದ್ವಾಂಸರು ಒದಗಿಸುವ ಬೃಹತ್‌ ಪ್ರಯತ್ನ. ಇದು 25 ಸಂಪುಟಗಳ ಹತ್ತು ಸಾವಿರ ಪುಟಗಳ ಹರವುಳ್ಳ ಬೃಹತ್‌ ಗ್ರಂಥಮಾಲೆ.

ತ್ಯಾಗರಾಜರ ಕೃತಿಗಳ ಶುದ್ಧಪಾಠ, ಪ್ರತಿಪದಾರ್ಥ, ಭಾವಾರ್ಥ, ರಾಗಲಕ್ಷಣಗಳು, ಸ್ವರಬಂಧ ಇತರ ಅವಶ್ಯ ಟಿಪ್ಪಣಿಗಳು - ಕೃತಿ ಸಂದರ್ಭ, ಪರಂಪರೆಯ ಶಾಸ್ತ್ರೀಯ ವಿಚಾರಗಳು, ಚಾರಿತ್ರಿಕ ಅಂಶಗಳು, ಸಾಹಿತ್ಯದಲ್ಲಿ ಕಾಣಬರುವ ಭಾಗವತ, ರಾಮಾಯಣ, ವೇದ ಉಪನಿಷದ್‌ ಗೀತೆಗಳ ಉಲ್ಲೇಖಗಳ ಬಗೆಯ ಕಿರು ಬರಹಗಳ ಸಾಗರವಿದು.

ಈ ಗ್ರಂಥದ ಬಗ್ಗೆ ಹಿರಿಯ ವಿದ್ವಾಂಸರ ಅಭಿಪ್ರಾಯ..

  • ಶ್ರೀತ್ಯಾಗರಾಜ ಯೋಗ ವೈಭವಂ ಗ್ರಂಥಮಾಲೆ ಸ್ತುತ್ಯವಾದ ಮಹತ್ಕಾರ್ಯ. ಈವರೆಗೆ ನಾನು ಇಂಥ ಪ್ರಯತ್ನವನ್ನೇ ಕಂಡಿಲ್ಲ. ಇದನ್ನು ಬಹು ಧೈರ್ಯೋತ್ಸಾಹಗಳಿಂದ ಕೈಗೆತ್ತಿಕೊಂಡಿರುವವರ ಎಲ್ಲ ಪ್ರಯತ್ನಗಳಿಗೂ ಶುಭವಾಗಲಿ: ವಿದ್ವಾನ್‌ ತಿಟ್ಟೆ ಕೃಷ್ಣ ಅಯ್ಯಂಗಾರ್‌.
  • ಈ ಗ್ರಂಥಮಾಲೆ ಶ್ರೀತ್ಯಾಗರಾಜರು ಕರ್ನಾಟಕ ಸಂಗೀತಕ್ಕೆ ನೀಡಿರುವ ಅಮೋೕಘ ಕೊಡುಗೆ ಮತ್ತು ಸಾಹಿತ್ಯದ ಮೂಲಕ ಜಗತ್ತಿಗೆ ನೀಡಿರುವ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಜೀವನೋತ್ಕರ್ಷಕ್ಕೆ ಮಾರ್ಗದರ್ಶನ, ಸಂದೇಶಗಳ ಪೂರ್ಣ ಪರಿಚಯ ಮಾಡಿಕೊಡುತ್ತಿದೆ: ವಿದ್ವಾನ್‌ ಆರ್‌.ಕೆ. ಶ್ರೀಕಂಠನ್‌
  • ..ನನ್ನ ಅಭಿಪ್ರಾಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮತ್ತು ನಮ್ಮ ಕನ್ನಡ ಭಾಷೆಗೆ ಈ ಗ್ರಂಥಮಾಲೆಯು ಒಂದು ಅಪೂರ್ವ ಕೊಡುಗೆಯಾಗುವ ಲಕ್ಷಣ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಅವುಗಳಿಂದ ಸ್ಥಾಪಿತವಾದ ಸಂಸ್ಥೆಗಳೂ, ಕಲಾವಿದರು, ಕಲಾಭಿಮಾನಿಗಳು ಈ ಬೃಹತ್‌ ಯೋಜನೆಗೆ ಪ್ರೋತ್ಸಾಹ ನೀಡಬೇಕು : ವಿದ್ವಾನ್‌ ಆರ್‌.ಆರ್‌. ಕೇಶವಮೂರ್ತಿ.
  • ಗ್ರಂಥಮಾಲೆಯ ಪರಿಕಲ್ಪನೆಯೂ, ಯೋಜನೆಯ ಬೃಹತ್ತು ಮತ್ತು ಮಹತ್ತುಗಳೂ ಕರ್ನಾಟಕ ಸಂಗೀತ ವಿದ್ವಾಂಸರು, ವಿದ್ಯಾರ್ಥಿಗಳು, ರಸಿಕರು ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಶ್ರದ್ಧಾಭಕ್ತಿ ಗೌರವಗಳಿರುವ ಎಲ್ಲ ಕನ್ನಡಿಗರಿಗೂ ವರದಾನವಾಗಿ ಪ್ರತಿ ಕನ್ನಡಿಗ ಸಂಗೀತ ಪ್ರೇಮಿಯೂ ಜ್ಞಾನಾಭಿರುಚಿಗಳನ್ನು ವಿಸ್ತರಿಸಿಕೊಳ್ಳಲು ಗರ್ವಾಸ್ಪದವಾದ ಗ್ರಂಥಮಾಲೆಯು ಇದಾಗಿದೆ..: ವಿದ್ವಾನ್‌ ರಾ. ವಿಶ್ವೇಶ್ವರನ್‌
  • ಸಂಪುಟ 1ರ ಮುಖಬೆಲೆ -295. ಪುಸ್ತಕ ದೊರೆಯುವ ಸ್ಥಳ: ಪ್ರಿಸಮ್‌ ದಿ ಬುಕ್‌ ಶಾಪ್‌, 16, 11ನೇ ಮುಖ್ಯರಸ್ತೆ, 4ನೇ ಬ್ಲಾಕ್‌, ಜಯನಗರ ಬೆಂಗಳೂರು - 560011. ದೂರವಾಣಿ -080 : 6637527, 6635548. ಇ -ಮೇಲ್‌ : mktg@prismbooks.com

(ಇನ್‌ಫೋವಾರ್ತೆ)

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more