ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಸಣ್ಣಕಥಾ ಪ್ರಪಂಚ ಹೇಗಿದೆ...

By Staff
|
Google Oneindia Kannada News

* ಸತ್ಯವ್ರತ ಹೊಸಬೆಟ್ಟು

mp;#3205;ನ್ನುವುದನ್ನು ವಿವರಿಸುವುದು ಸದ್ಯಕ್ಕೆ ಕಷ್ಟದ ಕೆಲಸ. ನಮ್ಮ ಅಕಾಡೆಮಿಯಾಗಲೀ, ಪರಿಷತ್ತೇ ಆಗಲಿ, ಪುಸ್ತಕ ಪ್ರಾಧಿಕಾರವೇ ಆಗಲಿ ಅಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದಂತಿಲ್ಲ . ಇದನ್ನು ಇನ್ನಷ್ಟು ವಿವರವಾಗಿ ಹೇಳುವುದಾದರೆ, 1999 ರಲ್ಲಿ ಅಕಾಡೆಮಿ ಆಹ್ವಾನಿಸಿದ ಯುವಕತೆಗಳನ್ನು ಅದು ಎರಡು ವರ್ಷದ ನಂತರ ಪ್ರಕಟಿಸುವ ಉತ್ಸಾಹ ತೋರಿಸುತ್ತದೆ. ಹೀಗಾಗಿ ಎರಡು ವರ್ಷಗಳ ಅವಧಿಯಲ್ಲಿ ದಾಖಲಾದ ಯಾವುದೇ ಬೆಳವಣಿಗೆಗಳನ್ನು ಅಕಾಡೆಮಿ ಸಾರಾಸಗಟು ಮರೆತೇಬಿಡುತ್ತದೆ.

ಇದು ಒಂದು ಉದಾಹರಣೆ ಮಾತ್ರ. ಈ ಯುವಕತೆಯ ಸಂಕಲನಕ್ಕೆ ಪ್ರಸ್ತಾವನೆ ಬರೆಯುವ ಹೊಣೆಯನ್ನು ಅಕಾಡೆಮಿ ಕುಂ. ವೀರಭದ್ರಪ್ಪ ಅವರಿಗೆ ಹೊರಿಸಿದೆ. ‘ಕನ್ನಡದ ಶ್ರೇಷ್ಠ ಕತೆಗಾರರಲ್ಲೊಬ್ಬರಾದ ಜಿ.ಎಸ್‌. ಸದಾಶಿವ ಆಯ್ಕೆ ಮಾಡಿರುವ ಈ ಹದಿನೈದು ಕತೆಗಳಲ್ಲಿ ಬಹುಪಾಲು ನಿರಾಶೆ ಹುಟ್ಟಿಸುತ್ತವೆ’ ಎನ್ನುವ ನಿರುತ್ಸಾಹದ ಮಾತುಗಳನ್ನು ವೀರಭದ್ರಪ್ಪ ಆಡಿದ್ದಾರೆ. ಯುವಕಥೆಗಳನ್ನು ವಿಮರ್ಶಿಸುವುದಕ್ಕಿಂತ ಮುಖ್ಯವಾಗಿ ಕಥಾ ಸಾಹಿತ್ಯ ಯಾವ ದಿಕ್ಕನ್ನು ಹಿಡಿದಿದೆ ಅನ್ನುವುದನ್ನು ಕುಂವೀ ಸೂಚಿಸಬಹುದಿತ್ತು .

ಈಗಂತೂ ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮತ್ತು ಸಾಹಿತ್ಯ ಪರಿಷತ್ತು ಹೊಸ ಅಧ್ಯಕ್ಷರನ್ನು ಪಡೆದುಕೊಂಡಿದೆ. ಪುನರೂರು, ಕಾಪಸೆ ಮತ್ತು ಮಲ್ಲೇಪುರಂ ಜಿ. ವೆಂಕಟೇಶರ ಪೈಕಿ ಕಿಂಚಿತ್ತಾದರೂ ಭರವಸೆ ಹುಟ್ಟಿಸಬಲ್ಲವರೆಂದರೆ ಮಲ್ಲೇಪುರಂ ಮಾತ್ರ. ಆದರೆ ನಮ್ಮ ಅಕಾಡೆಮಿಗಳೂ, ಪರಿಷತ್ತುಗಳೂ ಸಾಹಿತ್ಯದ ದಿಕ್ಕನ್ನು ನಿರ್ಧರಿಸುವ ಯಾವ ಪ್ರಯತ್ನದಲ್ಲೂ ತೊಡಗಿಕೊಳ್ಳುತ್ತಿಲ್ಲ .

ನವ್ಯ, ಬಂಡಾಯ, ದಲಿತ ಚಳವಳಿಗಳು ಕೊನೆಯಾಗಿವೆ. ಅದರ ನಂತರದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳಿಗೆ ಸಾಹಿತ್ಯ ಸ್ಪಂದಿಸುತ್ತಿಲ್ಲ . ಜಾಗತೀಕರಣ ಮತ್ತು ಉದಾರೀಕರಣದ ಪ್ರಭಾವ ಇನ್ನೂ ಸಾಹಿತ್ಯದ ಮೇಲೆ ಆದಂತಿಲ್ಲ . ಇಂಥ ಸಂದರ್ಭದಲ್ಲಿ ಪ್ರಾಧಿಕಾರ ಮತ್ತು ಅಕಾಡೆಮಿ ಮಾಡಬಹುದಾದ ಏಕೈಕ ಕೆಲಸವೆಂದರೆ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಕತೆಗಳನ್ನು ಆಯ್ದು ಅವುಗಳನ್ನು ಪ್ರಕಟಿಸುವುದು. ಆ ಕತೆಗಳ ಬಗ್ಗೆ ವಿಮರ್ಶೆ ನಡೆಯುವಂತೆ ನೋಡಿಕೊಳ್ಳುವುದು. ಒಂದು ಸೆಮಿನಾರು ಏರ್ಪಡಿಸಿ, ವಿಮರ್ಶಕರು ಹೊಸ ಕತೆಗಾರರ ಬಗ್ಗೆ ಮಾತನಾಡುವ ಅವಕಾಶ ಕಲ್ಪಿಸಿಕೊಡುವುದು. ಇಂಥದ್ದನ್ನು ಇನ್ನಾದರೂ ಈ ಸಾಹಿತ್ಯ ಸೇವೆಗೆ ಮೀಸಲಾದ ಸಂಸ್ಥೆಗಳು ಮಾಡುತ್ತವೆ ಎಂದು ಭಾವಿಸೋಣವೇ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X