• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಸ್ತಕ ಪ್ರಾಧಿಕಾರದಿಂದ ತೀರುವಳಿ ಮಾರಾಟ

By Staff
|

ಬೆಂಗಳೂರು : ಈಗಿನ ಕಾಲದಲ್ಲಿ ವಸ್ತುಗಳ ಬೆಲೆ ಆಕಾಶದಲ್ಲಿ ಎನ್ನುವ ಮಾತು ಕನ್ನಡ ಪುಸ್ತಕಗಳಿಗೆ ಅನ್ವಯಿಸುವುದಿಲ್ಲ. ಪುಸ್ತಕ ಪ್ರಾಧಿಕಾರ ಈ ವರ್ಷದ ಆಗಸ್ಟ್‌ನಿಂದ ಎಲ್ಲಾ ರೀತಿಯ ಪುಸ್ತಕಗಳ ದರದ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಲಿದೆ.

1998ನೇ ಇಸವಿಯಾಳಗೆ ಪ್ರಕಟವಾದ ಎಲ್ಲ ಕನ್ನಡ ಪುಸ್ತಕಗಳಿಗೆ ಬರುವ 2002ರ ಮಾರ್ಚ್‌ವರೆಗೆ ಈ ರಿಯಾಯಿತಿ ಇರುತ್ತದೆ ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್‌ ಭಾನುವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಎಲ್ಲ ಪುಸ್ತಕಗಳು ಜಿಲ್ಲಾ ಮಟ್ಟದಲ್ಲಿಯೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಪುಸ್ತಕ ಮಾರಾಟವನ್ನು ಹೆಚ್ಚಿಸಲು ಪ್ರಾಧಿಕಾರ ವಿಶೇಷ ಕಾರ್ಯಕ್ರಮಗಳ್ಯಾವುದನ್ನೂ ಆಯೋಜಿಸಿರದ ಕಾರಣ ದಾಸ್ತಾನು ಮಳಿಗೆಯಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಪುಸ್ತಕಗಳು ಮಾರಾಟವಾಗದೇ ಹಾಗೇ ಉಳಿದಿವೆ. ಡಿಸ್ಕೌಂಟ್‌ ಸೇಲ್‌ನಲ್ಲಿ ಅವೆಲ್ಲ ಮೋಕ್ಷ ಕಾಣಬಹುದು ಎಂಬಾಸೆ ಪ್ರಾಧಿಕಾರದ್ದು.

ಬಸ್‌ಸ್ಟಾಂಡಿನಲ್ಲಿ ಪುಸ್ತಕದಂಗಡಿ

ರಾಜ್ಯ ರಸ್ತೆಯ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಪ್ರಾಧಿಕಾರ ಉದ್ದೇಶಿಸಿದೆ. ದಾವಣಗೆರೆ ಮತ್ತು ಹಾಸನ ಬಸ್‌ ನಿಲ್ದಾಣಗಳಲ್ಲಿ ಎರಡು ಪುಸ್ತಕ ಮಳಿಗೆಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಅಕಾಡೆಮಿಗಳು, ವಿಶ್ವ ವಿದ್ಯಾಲಯ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರಾಧಿಕಾರದಿಂದ ಪ್ರಕಟವಾದ ಪುಸ್ತಕಗಳು ಈ ಮಳಿಗೆಯಲ್ಲಿ ದೊರೆಯುವಂತೆ ನೋಡಿಕೊಳ್ಳಲಾಗುವುದು.

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪ್ರಾಧಿಕಾರವು ಯುವ ದಲಿತ ಸಾಹಿತ್ಯ ಮಾಲೆ, ಅವೈದಿಕ ಚಿಂತನ ಮಾಲೆ, ಪುಸ್ತಕೋದ್ಯಮದಂತಹ ಮುಖ್ಯ ವಿಷಯಗಳಿಗೆ ಸಂಬಂಧಿಸಿ, ಪುಸ್ತಕ ಸರಣಿಗಳನ್ನು ಪ್ರಕಟಿಸುವುದು ಎಂದು ವೆಂಕಟೇಶ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more