ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ-ರ ನೇಪ-ಥ್ಯ-ದ-ಲ್ಲಿ- ಚರಿ-ತ್ರೆ-ಯ ಆ-ಗು ಹೋಗು-ಗ-ಳು

By Staff
|
Google Oneindia Kannada News

*ಎಸ್‌. ಕೆ. ಹರಿಹರೇಶ್ವರ
(ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ)

ಕಳೆದ ಮೇ 14ರಂದು ಬೆಂಗಳೂರಿನ ನ್ಯಾಷನಲ್‌ ಹೈಸ್ಕೂಲಿನ ನರಸಿಂಹಯ್ಯ ಸಭಾಂಗಣದಲ್ಲಿ ಬಿಡುಗಡೆಯಾದ ಹೆರೋದೂತನ ಸಮರ ಕತೆಗಳು ಎಂಬ ಹೊಸ ಪುಸ್ತಕ ಹಲವು ಕಾರಣಗಳಿಂದ ಮಹತ್ವವಾದುದು ಮತ್ತು ಅಸಾಧಾರಣವಾದುದು. ಈ ಪುಸ್ತಕದ ಲೇಖಕರು ಅಮೆರಿಕಾದಲ್ಲಿ ನೆಲಸಿರುವ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪಿ.ಎಚ್‌.ಡಿ ಪದವೀಧರರಾಗಿ, ವೃತ್ತಿಯಲ್ಲಿ ಕಂಪ್ಯೂಟರ್‌ ತಜ್ಞರಾದ ಡಾ. ಎಚ್‌. ವಿ. ರಂಗಾಚಾರ್‌. ಹಲವು ವರ್ಷಗಳ ಸತತ ಅಧ್ಯಯನದ ಫಲಶೃತಿ ಈ ಪುಸ್ತಕ.

ಹೆರೋದೂತನನ್ನು ಇತಿಹಾಸವು ಪಿತಾಮಹ ಎನ್ನುತ್ತದೆ. ರಂಗಾಚಾರರ ಪುಸ್ತಕ ಓದಿದಾಗ ಈ ಹೆಸರು ಏಕೆ ಚಲಾವಣೆಯಲ್ಲಿ ಬಂತು ಎಂಬುದು ಮನವರಿಕೆಯಾಗುತ್ತದೆ. ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿ ಜಿ. ಎಸ್‌. ಶಿವರುದ್ರಪ್ಪ ಅವರು ಇದರ ಬಗ್ಗೆ ಕ್ಷ-ಕಿರಣ ಚೆಲ್ಲಿ ದ್ದಾರೆ. ಹೆರೋದೂ-ತನ ಪ್ರವಾಸ ಕ-ಥನವು ಒಂದು ಮಾನವಶಾಸ್ತ್ರ ಆಗಿದೆಯಲ್ಲದೆ ಇತಿಹಾಸ ಶಾಸ್ತ್ರವೂ ಆಗಿದೆ ಎಂದಿದ್ದಾರೆ. ವಿಮರ್ಶಕ ಎಲ್‌. ಎಸ್‌. ಶೇಷಗಿರಿರಾಯರು ಮಾತನಾಡಿ ಇಂದಿನ ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವಿನ ಬೌದ್ಧಿಕ ಯುದ್ದ , ಗ್ರೀಕ್‌ ಮತ್ತು ಪರ್ಶಿಯಾ ದೇಶದ ನಡುವಿನ ಯು-ದ್ಧದಂತೆಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುನ್ನುಡಿ ಬರೆದಿರುವ ಪ್ರೊ. ಚಿದಾನಂದಮೂರ್ತಿ ಅವರು ಭಾರತದ ಒಟ್ಟು ವಾಙ್ಮಯವನ್ನು ಅವಲೋಕಿಸಿದಾಗಲೂ ಇತಿಹಾಸವೆಂದರೆ ಹೇಗೆ ಸಮರದ ನೇಪ---ಥ್ಯದಲ್ಲೇ ನಡೆದ ಆಗು-ಹೋಗುಗಳೇ ತುಂಬಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೋಮಾಂ-ಚ-ಕ ಕಥಾ ಮಾಲಿ-ಕೆ : ಹೆರೋ-ದೂ-ತ-ನ ಕನ್ನ-ಡ ಅವ-ತ-ರ-ಣಿ-ಕೆ-ಯ ಪುಸ್ತ-ಕ-ದ ಬೆನ್ನು-ಡಿಯಲ್ಲಿ ಪ್ರೊ. ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಬರೆದಂತೆ, ಈ ಗ್ರಂಥ ಯಾವುದೇ ಕಾದಂಬರಿಗಿಂತ ಹೆಚ್ಚು ವಾಚನೀಯವಾಗಿದೆ. ಕಾರಣ?... ಈ ಗ್ರಂಥದ ತುಂಬಾ ನೂರಾರು ಸ್ವಾರಸ್ಯಕರ ಘಟನೆಗಳು, ರೋಮಾಂಚಕ ಕತೆಗಳು, ಯುದ್ಧಗಳ ಅದ್ಬುತ ವರದಿಗಳು ಇಣುಕಿವೆ.

ಹಾಗೆಯೇ ಮುನ್ನುಡಿಯಲ್ಲಿ ಖ್ಯಾತ ಸಂಶೋಧಕ ಚಿದಾನಂದಮೂರ್ತಿ ಹೇಳಿರುವಂತೆ ಒಂದು ಅಭಿಜಾತ ಎನ್ನಬಹುದಾದ ವಿಶ್ವ ಮಾನನೀಯ ಕೃತಿಯನ್ನು ಕೇವಲ ಭಾಷಾಂತರಿಸದೆ, ಅದರ ಒಳ ಹೃದಯವನ್ನು ಗ್ರಹಿಸಿ, ಭಾವಾನುವಾದ ಮಾಡಿ ಕನ್ನಡಕ್ಕೆ ನೀಡಿರುವ ರಂಗಾಚಾರ್ಯರ ಕೊಡುಗೆ ಅನನ್ಯವಾದುದು.

ರಂಗಾಚಾರ್‌ ಅವರ ಪ್ರಕಾರ ಗ್ರಂಥದ ಮುಖ್ಯ ಕತೆ, ಗ್ರೀಸ್‌ ಮತ್ತು ಪರ್ಶಿಯಾ ದೇಶಗಳ ನಡುವೆ ಸುಮಾರು ಕ್ರಿ. ಶ. 500ರ ಕಾಲದಲ್ಲಿ ನಡೆದ ಮಹಾಯುದ್ದದಲ್ಲಿ ಆದ ಗ್ರೀಕರ ವಿಜಯದ ಕತೆ. ಹೆರೋದನು ಜೀವಿಸಿದ್ದ ಕಾಲದಲ್ಲಿ ಇದು ಆಗಿ ಸುಮಾರು 80 ವರ್ಷಗಳು ಕಳೆದಿದ್ದವು. ವಿಜೇತರಾದ ಗ್ರೀಕರಲ್ಲಿ , ಅವರ ಸ್ವಭಾವ ಹುಟ್ಟುಗುಣವಾದ ಒಳಜಗಳಗಳು ವಿಪುಲವಾಗಿ ಬೆಳೆದುಕೊಂಡಿದ್ದವು. ಎಲ್ಲೆಲ್ಲೂ ಸಾಮ್ರಾಜ್ಯ ಕ-ಟ್ಟುವ ಹಂಬಲ ಮತ್ತು ಪೈಪೋಟಿ. ಇಂತಹ ಸಮಯದಲ್ಲಿ ಎಲ್ಲೆಲ್ಲೂ ಗ್ರೀಕ್‌-ಪರ್ಶಿಯಾದ ಯುದ್ಧದ ಚರಿತ್ರೆಯ ಬಗ್ಗೆ ಹೆರೋದೂತನು ವಾಸವಿದ್ದ ಅಥೆನ್ಸ್‌ನಲ್ಲಿ ಬಹಳ ಆಸಕ್ತಿಯಿತ್ತು. ಆಗ ಆ ಯುದ್ದವನ್ನು ನೋಡಿದವರು ಅಥವಾ ಭಾಗವಹಿಸಿದವರು ಕೆಲವರು ಇನ್ನೂ ಇದ್ದರು. ಅವರಿಂದ ಕೇಳಿ ಮತ್ತು ಆಗ ಇನ್ನೂ ಪರ್ಶಿಯಾ ಸಾಮ್ರಾಜ್ಯದ ವಶದಲ್ಲಿದ್ದ ದೇಶಗಳಲ್ಲೆಲ್ಲಾ ಸ್ವತಃ ಪ್ರಯಾಣ ಮಾಡಿ ಹೆರೋದೂತನು ಈ ಗ್ರಂಥದ ಕತೆಯನ್ನು ಸಂಗ್ರಹಿಸಿ ಬರೆದಿಟ್ಟನು.

ಹೀಗೆ ಇದು ಶೂರರ ಕತೆ. ದೇಶಪ್ರೇಮದ ಕತೆ. ಅವರ ಮೇಲೆ ಯುದ್ಧ ಮಾಡಲು ಬಂದ ಪರ್ಶಿಯನ್ನರ ಯುದ್ಧಕೌಶಲ, ಗ್ರೀಕರ ವಿಜಯ ಇವೆಲ್ಲದರ ವಿವರಗಳನ್ನು ಹೆರೋದೂತನು ತನ್ನ ಕತೆಗಳಲ್ಲಿ ಹೇಳುತ್ತಾನೆ. ಆತ ಹುಟ್ಟು ಪ್ರವಾಸಿಗ. ಈ ಕತೆಯನ್ನು ಸಂಗ್ರಹಿಸುವುದಕ್ಕೆಂದು ಮಾಡಿದ ಪ್ರವಾಸಗಳಲ್ಲದೆ ಆಗಿನ ಗ್ರೀಸ್‌ ದೇಶದ ಸುತ್ತಮುತ್ತಲಿನ ಇನ್ನೂ ಅನೇಕ ದೇಶಗಳಲ್ಲಿ ಪ್ರವಾಸ ಮಾಡಿದನು. ದುಸ್ತರವೆನಿಸುವ ಪ್ರದೇಶಗಳಲ್ಲೆಲ್ಲಾ ತಿರುಗಿದನು. ಇದು ಎಂಥ ಕಷ್ಟ ಎನ್ನುವುದು ಊಹೆಗೆ ನಿಲುಕುವಂಥದು. ಇಂಥಹ ತನ್ನ ಪ್ರಯಾಣಗಳ ಅನುಭವವನ್ನೂ ಈ ಯುದ್ಧದ ಕತೆಯ ಗ್ರಂಥದಲ್ಲಿ ಸೇರಿಸಿ ಅದನ್ನು ವಿಸ್ತರಿಸಿ ಆಶ್ಚರ್ಯ ಮತ್ತು ಸ್ವಾರಸ್ಯಪೂರಕವಾಗಿ ಮಾಡಿದ್ದಾನೆ.

ಇಲ್ಲಿ ಅನೇಕ ಉಪಕತೆಗಳಿವೆ. ಇದು ಪ್ರಾಚೀನ ಕತೆಗಾರರ ಶೈಲಿ ವಿಶೇಷ. ನಮ್ಮ ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರಗಳಲ್ಲಿರುವ ಹಾಗೆ ಈ ಕತೆಗಳು ಅತಿ ಸ್ವಾರಸ್ಯಕರವಾದುವುಗಳು. ಹಾಸ್ಯ, ಕರುಣೆ ಮುಂತಾದ ಅ-ದ್ಭುತ ರಸಗಳಿಂದ ಕೂಡಿದವುಗ-ಳು. ಸಾಮಾನ್ಯವಾಗಿ ಎಲ್ಲದರಲ್ಲಿಯೂ ವಿಧಿಯ ಕೈವಾಡ, ಅದರಲ್ಲಿ ಸಿಕ್ಕಿ ಜೀವಿತದ ಕಷ್ಟ-ಸುಖಗಳನ್ನು ಭರಿಸುವ ನಾಯಕ, ನಾಯಕಿಯರು. ಅವರಿಗೆ ಕಣಿ ಹೇಳುವ ದೇವರುಗಳಲ್ಲಿ ಭಯ, ಭಕ್ತಿ. ಅಂ-ಥಾ ದೇವಸ್ಥಾನಗಳಿಗೆ ಕಾಣಿಕೆಗಳೂ ತುಂಬಾ ಬರುತ್ತಿದ್ದವು. ಇಂತಹ ದೇವಾಲಯಗಳಲ್ಲಿ ಹೆಚ್ಚಾಗಿ ಪಶು ಬಲಿಗಳು, ಸಮಾರಾಧನೆಗಳೂ, ಎಲ್ಲಾ ನಮ್ಮಲ್ಲಿ ನಡೆಯುವಂತೆಯೇ ನಡೆಯುತ್ತಿದ್ದವು. ಆ ದೇವಸ್ಥಾನದ ಸುತ್ತಲೂ ಎತ್ತರವಾದ, ಪವಿತ್ರವಾದ ದೊಡ್ಡ ಮರಗಳ ತೋಪುಗಳಿರುತ್ತಿದ್ದವು. ಸಮಾರಾಧನೆಗಳ ದಿನ ಅಲ್ಲಿ ಜನರ ಸಂದಣಿ, ವಿಹಾರ, ಶಬ್ದದ ಗುಲುಗುಲು ತುಂಬಿರುತ್ತಿದ್ದವು.

ಹೆರೋದೂತನ ಕತೆ ನೇರವಾಗಿ ಮಹಾಯುದ್ಧ ಮತ್ತು ವಿಜಯದ ಚರಿತ್ರೆಯಾಗಿ ಹರಿಯುವುದಿಲ್ಲ. ಅವನ ಗ್ರಂಥದ ಒಂಬತ್ತು ಪುಸ್ತಕಗಳಲ್ಲಿ , 6ನೆಯ ಪುಸ್ತಕದಲ್ಲಿ ಪ್ರಾರಂಭಿಸುತ್ತಾನೆ. ಗ್ರಂಥದ ಮುಂಭಾಗದಲ್ಲಿ ಗ್ರೀಕರು ಮತ್ತು ಪರ್ಶಿಯನ್ನರಿಗಿಬ್ಬರಿಗೂ ಸೇರಿದ ಪ್ರಾಚೀನ ಇತಿಹಾಸ, ಈಜಿಪ್ಟ್‌, ಬ್ಯಾಬಿಲೋನ್‌, ಇಟಲಿ, ಲಿಬಿಯಾ, ಸೂಡಾನ್‌ ಮುಂತಾದ ವಿಷಯಗಳಿಂದ ತುಂಬಿದ್ದಾನೆ. ಪರ್ಷಿಯಾದ ಸೈರಸ್‌, ಕಾಂಬಿಸಿಸ್‌ ಮತ್ತು ಡೇರಿಯಸ್ಗಳ ದಿಗ್ವಿಜಯಗಳು ಮತ್ತು ಆಡಳಿತದ ವರ್ಣನೆಗಳು, ಕಕ್ಸರ್‌ನ ಸೇನೆಯ ವಿವರಗಳೂ, ಪ್ರಯಾಣದ ದಾರಿಯಲ್ಲಿ ನಡೆದ ಘಟನೆಗಳೂ ಇವುಗಳನ್ನೆಲ್ಲಾ ಮುಂದಿನ ಐದು ಪುಸ್ತಕಗಳಲ್ಲಿ ತುಂಬಿದ್ದಾನೆ.

ಪುಸ್ತಕ ವಿವರ

ಹೆರೋದನ ಸಮರ ಕತೆಗಳು.
ಕನ್ನಡ ಭಾವಾನುವಾದ : ಡಾ. ಎಚ್‌. ವಿ. ರಂಗಾಚಾರ್‌
ಪ್ರಕಾ-ಶ-ಕ-ರು : ಅಂಕಿತ ಪುಸ್ತಕ ಪ್ರಕಾ-ಶ-ನ, 35, ಶಾಮ್‌ಸಿಂಗ್‌ ಸಂಕೀರ್ಣ, ಗಾಂಧಿ ಬಜಾರ್‌, ಬಸವನಗುಡಿ, ಬೆಂಗಳೂರು-560004.
ಮೊದಲ ಮುದ್ರಣ, ಮೇ-2000. ಪುಟಗಳು 33+383, ಬೆಲೆ 25ಡಾಲರ್‌(ಅಂಚೆ ವೆಚ್ಚ ಸೇರಿ).
ಪ್ರತಿಗಳು ಲೇಖಕರ ಬಳಿಯೂ ಸಿಗುತ್ತವೆ.

ಲೇಖಕರ ವಿಳಾಸ : DR. H. V. Rangachar, 6 somer court, Englishtown, NJ 07726, phone (732-446-8517) Email. [email protected]

Arrowಅಮೆ-ರಿ-ಕೆ-ಯ ಅಂಗ-ಳ-ದ-ಲ್ಲಿ ಘಮ-ಘ-ಮಿ-ಸಿ-ದ ಹೆ-ಮ್ಮಿ-ಗೆ ಅಗ್ರ-ಹಾ-ರ-ದ ಮಲ್ಲಿ-ಗೆ
Arrow ಕನ್ನ-ಡ-ದ-ಲ್ಲಿ , ಬಹ-ಳ ಕಾಲ ಉಳಿ-ಯ- ಬ-ಹು-ದಾ-ದ ಒಂದು ಉತ್ತ-ಮ
ಕೃತಿ-ಯ-ನ್ನು ರಚಿ-ಸ-ಬೇ-ಕೆಂ-ಬ ಹಂಬ-ಲ-ವಿ-ತ್ತು(ಸಂದರ್ಶನ)

ಮುಖಪುಟ / ಸಾಹಿತ್ಯ ಸೊಗಡು / ಮನೆ ಆಚೆಯ ಮನೋನಂದನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X