ನನ್ನ ಬದುಕಿನ ಹಾಡು

*ವಿಶ್ವಪ್ರಿಯ

ಹುಬ್ಬಳ್ಳಿ : ಕಲಾವಿದೆ ಡಾ. ಗಂಗೂಬಾಯಿ ಹಾನಗಲ್‌ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಹಿಂದೂಸ್ತಾನಿ ಸಂಗೀತವನ್ನು ಕರಗತ ಮಾಡಿಕೊಂಡು ಎತ್ತರಕ್ಕೆ ಬೆಳೆದವರು. ದೇಶ- ವಿದೇಶಗಳಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದವರು. ಅವರ ಜೀವನ ಚರಿತ್ರೆ ‘ನನ್ನ ಬದುಕಿನ ಹಾಡು ’ ಎಂಬ ಪುಸ್ತಕದ ರೂಪದಲ್ಲಿ ಹೊರ ಬಂದಿದೆ. ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಸೆಪ್ಟೆಂಬರ್‌ 19ರಂದು ನಗರದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕದಲ್ಲಿ ಹಾನಗಲ್‌ರ ಫೋಟೋ ಆಲ್ಬಂ ಸಹ ಇದೆ. ಹಿರಿಯ ಸಾಹಿತಿ ಎನ್ಕೆ ಅವರ ನಿರೂಪಣೆ ಗಂಗೂಬಾಯಿ ಜೀವನ ಪುಟಗಳಿಗೆ ಜೀವತುಂಬಿದೆ.

ಧಾರವಾಡದ ಶುಕ್ರವಾರ ಪೇಟೆ. ಅಲ್ಲಿ ನನ್ನ ಮನೆ. ತೊಟ್ಟಿಲು ತೂಗುತ್ತಾ ಅಮ್ಮ ಅಂಬಾಬಾಯಿ ಹಾಡ್ತುತಿದ್ದ ಜೋಗುಳ ... ಹೀಗೆ ಹಾನಗಲ್‌ ಅವರ ಜೀವನ ತೆರೆದಿಡಲು ಶುರುವಿಡುವ ಪುಸ್ತಕ 75 ಪುಟಗಳಲ್ಲಿ ಅವರ ಜೀವನದ ಚಿತ್ರಣ ನೀಡುತ್ತದೆ. ಅವರ ದಾಂಪತ್ಯ ವಿಚಿತ್ರ, ಅನನ್ಯ. ಸಾಧನೆಗೆ ಅದೂ ಒಂದು ಕಾರಣ. ಈ ಕುರಿತು ಪುಸ್ತಕದಲ್ಲಿ ಗಂಗೂಬಾಯಿ ಹೇಳಿರುವುದು ಹೀಗೆ...

ನಾನು ಅದೇ ಆಗ ಶಾಲೆಗೆ ಹೆಸರು ಹಚ್ಚಿಸಿದ್ದೆ. ಆಗ ನನಗೆ 7 ವರ್ಷ. ನನ್ನ ತಂದೆ ಹೆಸರು ಚಿಕ್ಕೂರಾವ್‌ ನಾಡಗೀರ. ಅವರ ಊರು ರಾಣಿ ಬೆನ್ನೂರು. ಅಲ್ಲಿಯ ವತನದಾರರು. ಅವರಿಗೆ ಪತ್ನಿಯೂ ಇದ್ದರು, ನನಗೆ ದೊಡ್ಡವ್ವನಂತೆ.... .

1 ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+