ಮಾ. 24 - ಮಹಾ ಪತ್ರಕರ್ತ ಮಹಾತ್ಮ ಗಾಂಧೀಜಿಗೆ ಬಿಡುಗಡೆ
ಬೆಂಗಳೂರು : ಈವರೆಗೆ ಭಾರತೀಯರು ಅಷ್ಟಾಗಿ ಗುರ್ತಿಸದ ಗಾಂಧೀಜಿ ಅವರ ಮತ್ತೊಂದು ಮುಖ ಮಾ.24 ರ ಶನಿವಾರ ನಗರದಲ್ಲಿ ಅನಾವರಣಗೊಳ್ಳಲಿದೆ. ಅಂದು ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ರಚಿಸಿದ ಮಹಾ ಪತ್ರಕರ್ತ ಮಹಾತ್ಮ ಗಾಂಧೀಜಿ ಕೃತಿ ಬಿಡುಗಡೆಯಾಗುವುದು.
ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್ ಪುಸ್ತಕವನ್ನು ಬಿಡುಗಡೆ ಮಾಡುವರು. ಗುಲ್ವಾಡಿ ಅವರ ಪುಸ್ತಕವನ್ನು ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಿದೆ. ಬಹುಮುಖ ಪ್ರತಿಭೆಯ ಗಾಂಧೀಜಿ ಅವರ ಪತ್ರಕರ್ತ ಮುಖವನ್ನು ಪರಿಚಯಿಸುವುದು ಪುಸ್ತಕದ ಉದ್ದೇಶ. ಗಾಂಧಿ ಅವರ ಪತ್ರಿಕೋದ್ಯಮದ ಬಗೆಗೆ ಗುಲ್ವಾಡಿ ಅಪಾರ ಸಂಶೋಧನೆ ನಡೆಸಿ ಕೃತಿ ರಚಿಸಿದ್ದಾರೆ.
ಗುಜರಾತಿ, ಹಿಂದೂಸ್ತಾನಿ, ಇಂಗ್ಲೀಷ್ ಹಾಗೂ ಉರ್ದು ಭಾಷೆಗಳಲ್ಲಿ ಅಪಾರ ಪ್ರೌಢಿಮೆ ಗಳಿಸಿದ್ದ ಗಾಂಧೀಜಿ, ಆ ಭಾಷಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ದುಡಿದಿದ್ದಾರೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗಾಂಧಿ ಪ್ರಕಟಿಸುತ್ತಿದ್ದ ಹರಿಜನ ಹಾಗೂ ಯಂಗ್ ಇಂಡಿಯಾ ಪತ್ರಿಕೆಗಳು ಅವರ ಪತ್ರಕರ್ತನ ಮನೋಧರ್ಮವನ್ನು ಸಮರ್ಥವಾಗಿ ಬಿಂಬಿಸುತ್ತವೆ. ಈ ಎಲ್ಲಾ ವಿವರಗಳನ್ನು ಗುಲ್ವಾಡಿಯವರ ಮಹಾಪತ್ರಕರ್ತ ಮಹಾತ್ಮ ಗಾಂಧೀಜಿ ಪುಸ್ತಕ ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications