• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕಾಡೆಮಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

By Staff
|

ಬೆಂಗಳೂರು : ಪುಸ್ತಕ ಪ್ರಶಸ್ತಿಗಳಿಗಾಗಿ 2000 ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಆಹ್ವಾನಿಸಿದೆ. 2000 ಇಸವಿಯ ಜನವರಿ 1 ರಿಂದ ಡಿಸೆಂಬರ್‌ 31 ರವರೆಗೆ ಪ್ರಕಟವಾದ ಪುಸ್ತಕಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದವಾದ ನೂರು ಪುಟಗಳಿಗೆ ಕಡಿಮೆಯಿಲ್ಲದ ಕೃತಿಗೆ 5 ಸಾವಿರ ರುಪಾಯಿಗಳ ‘ಅಮೆರಿಕ ಕನ್ನಡಿಗ ಸಂಘಗಳ ವಿಶೇಷ ಬಹುಮಾನ’ ನೀಡಲಾಗುವುದು.

ಕಾವ್ಯ, ಕಾದಂಬರಿ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಸಂಪಾದನೆ, ಸಾಹಿತ್ಯ ವಿಮರ್ಶೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ಅನುವಾದ-1 (ಕಾದಂಬರಿ, ಸಣ್ಣಕತೆ, ಕಾವ್ಯ, ನಾಟಕ, ಲಲಿತ ಪ್ರಬಂಧ, ಪ್ರವಾಸ, ಜೀವನ ಚರಿತ್ರೆ), ಅನುವಾದ-2 (ಶಾಸ್ತ್ರ ಸಾಹಿತ್ಯ, ಸಾಹಿತ್ಯ ವಿಮರ್ಶೆ) ಹಾಗೂ ಸಂಕೀರ್ಣ (ಯಾವುದೇ ಪ್ರಕಾರಕ್ಕೆ ಸೇರದ) ವಿಭಾಗಗಳಲ್ಲಿ ಸ್ಪರ್ಧೆಗೆ ಪುಸ್ತಕಗಳನ್ನು ಪ್ರಕಟಿಸಲಾಗುವುದು. ಆಯಾ ವಿಭಾಗದಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಕ್ಕೆ 5 ಸಾವಿರ ರುಪಾಯಿ ನಗದು ಪುರಸ್ಕಾರ ನೀಡಲಾಗುವುದು.

ಮರು ಮುದ್ರಿತ, ಜಾನಪದ, ಪಿಎಚ್‌ಡಿ ಕೃತಿ, ಹಾಗೂ ಪಠ್ಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ . ಲೇಖಕರ ಅತ್ಯುತ್ತಮ ಮೊದಲ ಕೃತಿಗೆ ಬಹುಮಾನ ನೀಡಲಾಗುತ್ತಿದ್ದು , ಲೇಖಕರು ಮೊದಲು ಕೃತಿಯೆಂದು ಖಾತರಿ ಪಡಿಸುವ ಸ್ವ ದೃಢೀಕರಣ ಪತ್ರವನ್ನು ಲಗತ್ತಿಸಬೇಕು.

ಪುಸ್ತಕದ 1 ಸಾದಾ ಪ್ರತಿಯನ್ನು ನೋಂದಾಯಿತ ಅಂಚೆ ಮೂಲಕ ಅಥವಾ ಖುದ್ದಾಗಿ-
ರಿಜಿಸ್ಟ್ರಾರ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ , ಬೆಂಗಳೂರು- 560 002 ಈ ವಿಳಾಸಕ್ಕೆ ಕಳುಹಿಸಬಹುದು. ಪುಸ್ತಕ ಕಳುಹಿಸಲು ಕೊನೆಯ ದಿನಾಂಕ ಜುಲೈ 31.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more