• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಾಸರಾಯ ಬಲ್ಲಾಳರಿಗೆ-80, ಅಂಕಿತಪುಸ್ತಕಕ್ಕೆ-100

By Staff
|

*ದಟ್ಸ್‌ಕನ್ನಡ ಬ್ಯೂರೊ

Vyasaraya Ballala with wife and grand daughter‘ಹೆಜ್ಜೆ’ ಯ ನಂತರ ವ್ಯಾಸರಾಯ ಬಲ್ಲಾಳರು ಏನು ಬರೆದಿದ್ದಾರೆ ?

ಹೆಜ್ಜೆಯ ಮುಂದುವರಿದ ಭಾಗ ಬರೆಯಲು ಯೋಚಿಸುತ್ತಿದ್ದೇನೆ ಎಂದು ಬಲ್ಲಾಳರು ಆಗಾಗ ತಮ್ಮ ಕನಸು ಹಂಚಿಕೊಂಡಿದ್ದುಂಟು. ಈ ನಡುವೆ ‘ಹೆಜ್ಜೆ’ ಕಾದಂಬರಿ ಸಿನಿಮಾ ಆಗುತ್ತದೆಂದು ಅದರ ಚಿತ್ರಕಥೆಯ ಬಗ್ಗೆ ಯೋಚಿಸಿದ್ದೂ ಉಂಟು.

ಆಮೇಲೆ..

ಆಗಾಗ ಒಂದೊಂದು ಕಥೆ.

ಕನ್ನಡ ಕಾದಂಬರಿ ಲೋಕದಲ್ಲಿ ವ್ಯಾಸರಾಯ ಬಲ್ಲಾಳರದು ಮಹತ್ವದ ಹೆಸರು. ‘ಬಂಡಾಯ’ದ ಬಲ್ಲಾಳರು ಎಂದೇ ಅವರನ್ನು ಅನೇಕರು ಗುರ್ತಿಸುವುದುಂಟು. ‘ಹೇಮಂತಗಾನ’, ‘ವಾತ್ಸಲ್ಯಪಥ’, ‘ಅನುರಕ್ತೆ’, ‘ಆಕಾಶಕ್ಕೊಂದು ಕಂದೀಲು’- ಹೀಗೆ ಬಲ್ಲಾಳರ ಕಾದಂಬರಿಗಳು ಓದುಗರನ್ನು ಆವರಿಸಿಕೊಂಡಿವೆ.

ಬದುಕಿನ ಬಹುತೇಕ ವರ್ಷಗಳನ್ನು ಮುಂಬಯಿಯಲ್ಲಿ ಕಳೆದು, ವಿಶ್ರಾಂತ ಜೀವನವನ್ನು ಬೆಂಗಳೂರಿನಲ್ಲಿ ಕಳೆಯುತ್ತಿರುವ ಬಲ್ಲಾಳರು ಪ್ರಚಾರದ ಬೆಳಕಿನಿಂದ ಬಹಳ ದೂರ. ವಯಸ್ಸೂ ಆಗಿದೆ. ಬೇಕೆಂದ ಕಡೆಗೆ ಸಲೀಸಾಗಿ ಹೋಗಿ ಬರುವುದು ಕಷ್ಟ. ತಾವುಂಟು ಮನೆಯುಂಟು ಎಂದು ಮೌನದಲ್ಲಿ ಮುಳುಗಿರುವ ಬಲ್ಲಾಳರು ಸದ್ದಿಲ್ಲದೇ 80 ವರ್ಷ ಪೂರೈಸಿದ್ದಾರೆ.

ಈ ಬಾರಿ ಬಲ್ಲಾಳರ ಹುಟ್ಟು ಹಬ್ಬದ ಆಚರಣೆ ಪುಸ್ತಕ ಬಿಡುಗಡೆಯ ಮೂಲಕ ನಡೆಯುತ್ತಿರುವುದು ವಿಶೇಷ. ಬಲ್ಲಾಳರ ಸಮಗ್ರ ಕಥೆಗಳನ್ನು ‘ಅಂಕಿತ ಪುಸ್ತಕ’ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿದೆ. ಡಿಸೆಂಬರ್‌ 1 ರ ಭಾನುವಾರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ (ಬಸವನಗುಡಿ, ಬೆಂಗಳೂರು)ನಲ್ಲಿ ಬಲ್ಲಾಳರ ಕಥೆಗಳ ಪುಸ್ತಕ ಬಿಡುಗಡೆಯಾಗಲಿದೆ. ಅಂದಹಾಗೆ- ಬಲ್ಲಾಳರಿಗೆ 80 ರ ಸಂಭ್ರಮವಾದರೆ, ಅಂಕಿತ ಪುಸ್ತಕಕ್ಕೆ 100 ರ ಸಂಭ್ರಮ. ಬಲ್ಲಾಳರ ಸಮಗ್ರ ಕಥೆಗಳ ಕೃತಿ ಅಂಕಿತ ಪುಸ್ತಕದ ನೂರನೇ ಪ್ರಕಟಣೆ.

ಜನಪ್ರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಹಿರಿಯ ವಿಮರ್ಶಕ ಎಲ್‌.ಎಸ್‌.ಶೇಷಗಿರಿರಾವ್‌, ಹಣತೆಯ ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜೊತೆಗೆ ಬಲ್ಲಾಳರ ಅಭಿಮಾನಿಗಳು. ಬಲ್ಲಾಳರಿಗೆ ಹುಟ್ಟು ಹಬ್ಬದ ಶುಭಾಷಯಗಳು.

ಸಂದರ್ಶನ-

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more