ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ.ಟಿ.ಗಟ್ಟಿ ,ಅಗ್ರಹಾರ ಕೃಷ್ಣಮೂರ್ತಿಗೆ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

K.T. Gattiಹಿರಿಯ ಜಾನಪದ ವಿದ್ವಾಂಸ ಮುದೇನೂರು ಸಂಗಣ್ಣ ಸೇರಿದಂತೆ ಐವರಿಗೆ 2001 ನೇ ಸಾಲಿನ ಪ್ರತಿಷ್ಠಿತ ಗೌರವ ಪ್ರಶಸ್ತಿಗಳನ್ನು ನೀಡಲು ಕರ್ನಾಟಕ ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ.

ಅಕಾಡೆಮಿ ಅಧ್ಯಕ್ಷ ಗುರುಲಿಂಗ ಕಾಪಸೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ಗೌರವ ಪ್ರಶಸ್ತಿಗಳನ್ನು ಹಾಗೂ 18 ಮಂದಿ ಲೇಖಕರಿಗೆ ಪುಸ್ತಕ ಪ್ರಶಸ್ತಿಗಳನ್ನು ಅಂತಿಮಗೊಳಿಸಿತು.

ಮುದೇನೂರು ಸಂಗಣ್ಣ ಅವರೊಂದಿಗೆ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾದ ಇತರರು : ಅರವಿಂದ ಮಾಲಗತ್ತಿ, ಸುನಂದಾ ಬೆಳಗಾಂವಕರ್‌, ಕೆ.ಟಿ.ಗಟ್ಟಿ ಹಾಗೂ ರಾ.ಕು.

ಪುಸ್ತಕ ಪ್ರಶಸ್ತಿಗಳು :

Ananthnagಶಂಕರ ಕಟಗಿ ಅವರ ಗಣೆಯ ನಾದ (ಕಾವ್ಯ),
ಅಗ್ರಹಾರ ಕೃಷ್ಣಮೂರ್ತಿ ಅವರ ನೀರು ಮತ್ತು ಪ್ರೀತಿ (ಕಾದಂಬರಿ),
ಫಕೀರ್‌ ಮೊಹಮ್ಮದ್‌ ಕಟ್ಪಾಡಿ ಅವರ ದಜ್ಜಾಲ (ಸಣ್ಣ ಕಥೆ),
ಮುದೇನೂರು ಸಂಗಣ್ಣ ಅವರ ಸೂಳೆ ಸಂಕವ್ವ(ನಾಟಕ),
ವಿಜಯೇಂದ್ರ ಪಾಟೀಲರ ಆತ್ಮ ಸಾಕ್ಷಿಯ ಹಾವಳಿಗಳು (ಲಲಿತ ಪ್ರಬಂಧ),
ರಹಮತ್‌ ತರೀಕೆರೆ ಅವರ ಅಂಡಮಾನ್‌ ಕನಸು (ಪ್ರವಾಸ),
ಅನಂತನಾಗ್‌ರ ನನ್ನ ತಮ್ಮ ಶಂಕರ (ಜೀವನ ಚರಿತ್ರೆ),
ಲಕ್ಷ್ಮೀಪತಿ ಕೋಲಾರರ ಕಾಲುದಾರಿ (ಸಾಹಿತ್ಯ ವಿಮರ್ಶೆ),
ಮಂಜಪ್ಪ ಶೆಟ್ಟಿ ಅವರು ಸಂಪಾದಿಸಿದ ಕವಿರಂಗ ವಿರಚಿತ ಕಾವೇರಿ ಮಹಾತ್ಮೆ (ಸಂಪಾದನೆ),
ಶರಣಗೌಡರ ಮುತ್ತಿನ ಬೆಟ್ಟ (ಮಕ್ಕಳ ಸಾಹಿತ್ಯ),
ನಾ.ಸೋಮೇಶ್ವರರ ಬದುಕು ನೀಡುವ ಬದಲಿ ಜೋಡಣೆ (ವಿಜ್ಞಾನ),
ರಾಜಾರಾಂ ಹೆಗಡೆ ಅವರ ಲೌಕಿಕ ಅಲೌಕಿಕ (ಮಾನವಿಕ),
ರಾಜಶೇಖರಪ್ಪ ಅವರ ಇತಿಹಾಸ ಕಥನ (ಸಂಶೋಧನೆ),
ನಾ.ಉಜಿರೆ ಅವರ ಕೆಂಪು ತಗಡಿನ ಛಾವಣಿ (ಅನುವಾದದ ಸೃಜನಶೀಲ ವಿಭಾಗ),
ಎಂ.ಪಿ.ಶಂಕರ ನಾರಾಯಣರಾವ್‌ ಅವರ ಮಾಹಾತ್ಮ ಗಾಂಧಿ ಕೃತಿ ಸಂಚಯ (ಅನುವಾದ ಸೃಜನೇತರ ವಿಭಾಗ),
ಮರಿಶಾಮಾಚಾರ್‌ರ ಭಾರತೀಯ ಕಲೆ (ಸಂಕೀರ್ಣ ವಿಭಾಗ),
ಎನ್‌.ಬಾಲಸುಬ್ರಹ್ಮಣ್ಯ ಅವರ ಪೊಯೆಟಿಕ್ಸ್‌ (ತೀನಂಶ್ರೀ ಅವರ ಭಾರತೀಯ ಕಾವ್ಯಮೀಮಾಂಸೆಯ ಇಂಗ್ಲಿಷ್‌ ಅನುವಾದ),
ಪ್ರಕಾಶ್‌ರಾಜ್‌ ಮೇಹು ಅವರ ತಿಮ್ಮಜ್ಜಿಯ ಮ್ಯಾಗ್ಲುಂಡಿ (ಲೇಖಕರ ಮೊದಲ ಕೃತಿ ).

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X