ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪೇಟೆಯಲ್ಲಿ ಎಚ್‌.ವಿ.ರಂಗಾಚಾರ್‌ ಅವರ‘ದಿ ಹಿಲ್‌ ಟೆಂಪಲ್‌’

By Super
|
Google Oneindia Kannada News

ಹೊಸ ಪುಸ್ತಕ ಬಂದಿದೆ ! ಮತ್ತೊಮ್ಮೆ ಅನಿವಾಸಿ ಕನ್ನಡಿಗರ ಸಾರಸ್ವತ ಸೃಜನಶೀಲತೆ ಪುಸ್ತಕರೂಪದಲ್ಲಿ ಅಭಿವ್ಯಕ್ತಿಗೊಂಡಿದೆ. ‘ಹೆರೋದೂತನ ಸಮರ ಕತೆಗಳು' ಪುಸ್ತಕದ ಮೂಲಕ ಕನ್ನಡ ಸಾಹಿತ್ಯ ಪ್ರಿಯರ ಗಮನ ಸೆಳೆದ ಎಚ್‌.ವಿ.ರಂಗಾಚಾರ್‌ ಮತ್ತೆ ಓದುಗರ ಮುಂದೆ ನಿಂತಿದ್ದಾರೆ; ಮತ್ತೊಂದು ಮಹತ್ತರ ಅನುವಾದದ ಮೂಲಕ.

ರಂಗಾಚಾರ್‌ ಅವರ ‘The Hill Temple' ಯ ಹೊಸ ಆವೃತ್ತಿ ಇದೀಗ ಬಿಡುಗಡೆಯಾಗಿದ್ದು, ಪುಸ್ತಕ ಪೇಟೆಯಲ್ಲಿ ಓದುಗರಿಗೆ ಲಭ್ಯವಿದೆ. ಸೆಪ್ಟಂಬರ್‌ 25 ರಂದು ಪುಸ್ತಕ ಪೇಟೆ ಪ್ರವೇಶಿಸಿದ ‘The Hill Temple', ರಂಗಾಚಾರ್‌ ಅವರ ಅನುವಾದ ಕುಶಲತೆಗೆ ದೊರೆತ ಸಮರ್ಥನೆ. ರಂಗಾಚಾರ್ಯರ ಈ ಕೃತಿ- ಕನ್ನಡದ ಪ್ರಸಿದ್ಧ ಕವಿ, ಶ್ರೀಹರಿ ಚರಿತೆಯ ಪು.ತಿ.ನರಸಿಂಹಾಚಾರ್ಯರ ‘ಮಲೆದೇಗುಲ' ದ ಇಂಗ್ಲಿಷ್‌ ಅವತರಣಿಕೆ.

ನವೋದಯ ಪಂಕ್ತಿಯಲ್ಲಿ ಕುವೆಂಪು, ಬೇಂದ್ರೆ ಜೊತೆಯಲ್ಲಿ ನಿಲ್ಲುವ ಪು.ತಿ.ನ. ಭಕ್ತ ಕವಿ. ಮೇಲುಕೋಟೆಯ ಚೆಲುವನಾರಾಯಣನ ಪೊಗಳಿದ ಕವಿ ; ಕುಮಾರವ್ಯಾಸನಂತೆ ಕೃಷ್ಣನೆಂದರೆ ಮೈಮರೆಯುವ ಕವಿ. ಆದರೆ, ಅವರ ಕಾವ್ಯದ ಸುಲಭ ಓದಿಗೆ ದಕ್ಕುವಂಥದ್ದಲ್ಲ. ಆಕರ್ಷಕ ಲಯದಿಂದ ಗಮನ ಸೆಳೆದರೂ, ಕವಿತೆಯಾಳಗಿನ ಆತ್ಮ ಸಂಕೀರ್ಣವಾದುದು. ಮೂಲ ಕಾವ್ಯವೇ ಸವಾಲೆಸೆಯುವಂತಿರುವಾಗ, ಅದರ ಅನುವಾದ ಇನ್ನಷ್ಟು ಕಷ್ಟ. ಇಂಥ ಸವಾಲು ಕೈಗೆತ್ತಿಕೊಂಡಿರುವ ರಂಗಾಚಾರ್‌, ಯಶಸ್ಸನ್ನೂ ಗಳಿಸಿದ್ದಾರೆ. ಅವರ ಅನುವಾದದ ಸೊಬಗನ್ನು ಪುಸ್ತಕ ಓದಿಯೇ ಸವಿಯಬೇಕು.

ರಂಗಾಚಾರ್‌ ಅವರ ‘The Hill Temple' ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ, ರಬೀಂದ್ರ ಭವನ್‌, 35, ಫಿರೋಜ್‌ ಶಾ ರಸ್ತೆ, ನವದೆಹಲಿ- 110 001; ISBN: 81260008148 ಪ್ರಕಟಿಸಿದೆ. ಪುಸ್ತಕ ಪ್ರಿಯರು ಪುಸ್ತಕಕ್ಕಾಗಿ ಸ್ವಾತಿ, ಮಂದಿರ್‌ ಮಾರ್ಗ್‌, ನವದೆಹಲಿ, ವಿಳಾಸವನ್ನು ಸಂಪರ್ಕಿಸಬಹುದು. ಬೆಲೆ 50 ರುಪಾಯಿ.

English summary
H. V. Rangachar brings PUTINAs Maledegula to English. New book HILLTEMPLE published by Saahitya Academy, New Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X