ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಗ್ನಿಯ ರೆಕ್ಕೆಗಳು’: ಬರಲಿದೆ ಕನ್ನಡದಲ್ಲಿ ಕಲಮ್‌ ಆತ್ಮಕಥೆ!

By Staff
|
Google Oneindia Kannada News

ಬೆಂಗಳೂರು: ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಡಾ. ಎ.ಪಿ.ಜೆ. ಅಬ್ದುಲ್‌ ಕಲಮ್‌ ಅವರ ಆತ್ಮಚರಿತ್ರೆ ವಿಂಗ್ಸ್‌ ಆಫ್‌ ಫೈರ್‌ ಸದ್ಯದಲ್ಲೇ ಕನ್ನಡಕ್ಕೆ ರೂಪಾಂತರಗೊಳ್ಳಲಿದೆ.

‘ಅಗ್ನಿಯ ರೆಕ್ಕೆಗಳು’ ಎಂಬ ಹೆಸರಿನಲ್ಲಿ ಕಲಮ್‌ ಜೀವನ ಚರಿತ್ರೆ ಅಕ್ಟೋಬರ್‌ ತಿಂಗಳಿನಲ್ಲಿ ಕನ್ನಡದ ಓದುಗರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಪುತ್ತೂರು ಜಯಪ್ರಕಾಶ್‌ ರಾವ್‌ ಪುಸ್ತಕದ ಅನುವಾದ ಕಾರ್ಯಕ್ಕೆ ಈಗಾಗಲೇ ಶುರು ಹಚ್ಚಿಕೊಂಡಿದ್ದಾರೆ. ಜಯಪ್ರಕಾಶ್‌ ರಾವ್‌ ಏರೋನಾಟಿಕಲ್‌ ಅಭಿವೃದ್ಧಿ ಏಜೆನ್ಸಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ.

ಪುಸ್ತಕವನ್ನು ಭಾಷಾಂತರಿಸಲು ಹೈದರಾಬಾದ್‌ನ ಯೂನಿವರ್ಸಿಟೀಸ್‌ ಪ್ರೆಸ್‌ ಇಂಡಿಯಾ ಲಿಮಿಟೆಡ್‌ ಅನುಮತಿ ನೀಡಿದೆ. ಗುತ್ತಿಗೆಗೆ ಸಂಬಂಧಿಸಿದ ಔಪಚಾರಿಕ ದಾಖಲೆ ಪತ್ರಗಳ ಕೆಲಸ ಮುಗಿದಿದೆ. ನನ್ನ ಆತ್ಮಚರಿತ್ರೆಯಲ್ಲಿರುವ ಸಂದೇಶ ದೇಶದ ಯುವಕರಿಗೆ ತಲುಪುವುದಾದರೆ ನನ್ನ ಅಭ್ಯಂತರವಿಲ್ಲ. ಆದರೆ ಆ ಸಂದೇಶ, ನಿಲುವುಗಳು ಭಾಷಾಂತರಿತ ಕೃತಿಯಲ್ಲಿ ಸ್ಪಷ್ಟವಾಗಿರಬೇಕು ಎಂದು ಅಪೇಕ್ಷಿಸಿದ್ದಾರೆ. ಕಲಾಂ ಅವರ ಆಶೀರ್ವಾದದಿಂದ ಈ ಪುಸ್ತಕವನ್ನು ನಾನು ಭಾಷಾಂತರಿಸುತ್ತೇನೆ ಎಂದು ಜೆಪಿ ಹೇಳುತ್ತಾರೆ.

ಎಡಿಎಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದರಿಂದ ಕಲಾಂ ಅವರ ಬೆಂಗಳೂರು ಭೇಟಿಗಳಲ್ಲೆಲ್ಲ ಜೆಪಿಯವರು ಅವರ ಜೊತೆಗಿದ್ದರು. ಸ್ವಭಾವ, ಮಾತು, ಇಷ್ಟ - ಕಷ್ಟಗಳು, ನಡೆ ನುಡಿಗಳ ಬಗ್ಗೆ ಹತ್ತಿರದಿಂದ ಕಂಡು ಬಲ್ಲರು. ಮೊದ ಮೊದಲು ಅವರು ಬೆಂಗಳೂರಿಗೆ ಬಂದಾಗ ಅವರ ಆತಿಥ್ಯ ವಹಿಸುವುದೆಂದರೆ ನಂಗೆ ಸ್ವಲ್ಪ ಹೆದರಿಕೆ. ಆಮೇಲೆ ಅವರು ತಮ್ಮ ಸರಳತೆಯಿಂದ ನನಗೆ ತುಂಬಾ ಇಷ್ಟವಾದರು.

ಜೆಪಿ ಒಬ್ಬ ಫ್ರೀಲಾನ್ಸರ್‌. ಬರವಣಿಗೆಯ ಹದ ತಿಳಿದವರು. ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷ ಬೋಳಂತಕೋಡಿ ಈಶ್ವರ್‌ ಭಟ್‌ ಅಗ್ನಿಯ ರೆಕ್ಕೆಗಳು ಪುಸ್ತಕವನ್ನು ಅನಾವರಣಗೊಳಿಸುತ್ತಾರೆ. ಅಗ್ನಿಯ ರೆಕ್ಕೆಗಳು -ಕರ್ನಾಟಕ ಸಂಘ ಪ್ರಕಟಿಸುತ್ತಿರುವ 101ನೇ ಪುಸ್ತಕ. ಅಕ್ಟೋಬರ್‌ 2ರ ಗಾಂಧಿ ಜಯಂತಿ ದಿವಸ ಪುಸ್ತಕ ಬಿಡುಗಡೆ ಸಮಾರಂಭ ನಡೆಯುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X