ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಮದುವೆಯ ಕರೆಯೋಲೆ

|
Google Oneindia Kannada News

ಮದುವೆಗೆ ಮಮತೆಯ ಕರೆಯೋಲೆ ಎಂಬ ಮಾತು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮದುವೆಯ ಕರೆಯೋಲೆ ಅಥವಾ ಲಗ್ನಪತ್ರಿಕೆ ಹೇಗಿರಬೇಕು? ಎಂದು ಪ್ರಶ್ನೆ ಮಾಡಿದರೆ, ಮಹೂರ್ತ, ಸ್ಥಳ, ದಿನಾಂಕ, ಜಾಗ, ಹೆಸರು ಹೀಗೆ ಎಲ್ಲವನ್ನು ಒಳಗೊಂಡಿರಬೇಕು ಎಂಬ ಉತ್ತರ ನೀಡಬಹುದು.

ಆದರೆ ಇಲ್ಲೊಬ್ಬರು ಮದುವೆಯ ಕರೆಯೋಲೆಯಲ್ಲಿ ನಾಡು-ನುಡಿಯ ಪ್ರೇಮ ಮೆರೆದಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಜಗದೀಶ ರೆಡ್ಡಿ ತಮ್ಮ ಪುತ್ರ ಜೆ . ರಾಘವೇಂದ್ರ ಅವರ ಮದುವೆಯ ಕರೆಯೋಲೆಯಲ್ಲಿ ಕನ್ನಡದ ಕಂಪು ಪಸರಿಸಿದ್ದಾರೆ.

ಎಲ್ಲ ಲಗ್ನಪತ್ರಿಕೆಗಳಂತೆ ಇಲ್ಲ ರಾಘವೇಂದ್ರ ಅವರ ಮದುವೆಯ ಕರೆಯೋಲೆ. ಸರ್ವಜ್ಞ, ಡಿ ವಿ ಗುಂಡಪ್ಪ, ಕುವೆಂಪು, ದರಾ ಬೇಂದ್ರೆ, ಸಿದ್ದಯ್ಯ ಪುರಾಣಿಕ್ ಅವರ ಕವನದ ಸಾಲುಗಳು ಕನ್ನಡದ ನಾಡು ನುಡಿಯ ಪ್ರೀತಿಯನ್ನು ಜಾಗೃತ ಮಾಡುತ್ತವೆ.[ಡಿವಿಜಿ ಮಂಕುತಿಮ್ಮನ ಕಗ್ಗಕ್ಕೆ ಸರಳ ಕನ್ನಡದ ಸ್ಪರ್ಶ]

card

ಮದುವೆಯ ಕರೆಯೋಲೆ ಮೇಲಿನ ಆಯ್ದ ಸಾಲುಗಳನ್ನು ನಾವು ನೋಡಿಕೊಂಡು ಬರೋಣ
ಬೆಚ್ಚನಾ ಮನೆಯಿರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿತು ನಡೆವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ
-------------------
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ-ಡಿವಿಜಿ[ಮದುವೆ ಕರೆಯೋಲೆಯಲ್ಲಿ ನೀರಾವರಿ ಜಾಗೃತಿ]
------------------------

kannada

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು-ಕುವೆಂಪು
--------------------------
ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು-ದರಾ ಬೇಂದ್ರೆ
--------------
ಏನಾದರು ಆಗು, ಮೊದಲು ಮಾನವನಾಗು-ಸಿದ್ದಯ್ಯ ಪುರಾಣಿಕ್
-------------
ಮೇಲಿನ ಸಾಲುಗಳು ಇಡೀ ಜೀವನದ ಸಾರವನ್ನು, ಮಧುವೆಯ ಬಾಂಧವ್ಯವನ್ನು, ಕಷ್ಟ ಸುಖಗಳ ಅರಿವನ್ನು, ಮಾನವತೆ ತತ್ವವನ್ನು ಸಾರುತ್ತವೆ. ಕುವೆಂಪುರವರ ವಿಶ್ವಮಾನವ ತತ್ವಕ್ಕೆ ತಕ್ಕುದಾದ ಸಾಲುಗಳ ಮೂಲಕ ಮದುವೆಯ ಕರೆಯೋಲೆ ನೀಡಿದ್ದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

English summary
Bengaluru: This wedding invitation card reflects real heartiness of Kannada language. The card shows popular poets poem lines. Here id the invitation card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X