ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆಯವರ ಈ 5 ವಸ್ತುಗಳನ್ನು ಯಾವ ಕಾರಣಕ್ಕೂ ಬಳಸಬೇಡಿ!

By ರಮಾಕಾಂತ್
|
Google Oneindia Kannada News

Recommended Video

ಬೇರೆಯವರಿಗೆ ಸೇರಿದ ಈ ೫ ವಸ್ತುಗಳನ್ನ ನಾವೆಂದಿಗೂ ಉಪಯೋಗಿಸ ಬಾರದಂತೆ | Oneindia Kannada

ನಂಬಿಕೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಕೆಲವರು ಸಂಜೆ ನಂತರ ಯಾರೇ ಬಂದು ಕೇಳಿದರೂ ಮೊಸರು, ಹಾಲು, ತುಪ್ಪ ಇಂಥವನ್ನು ಕೊಡುವುದಿಲ್ಲ. ಹಲವರು ಶುಕ್ರವಾರ ಹಾಗೂ ಮಂಗಳವಾರ ಹಣವನ್ನು ಸಾಲ ಪಡೆದದ್ದೇ ಆಗಿದ್ದರೂ ವಾಪಸ್ ಮಾಡಲ್ಲ, ತಾವೂ ಹಣವನ್ನು ಕೊಡಲ್ಲ.

ಅಷ್ಟೇ ಯಾಕೆ ಶುಕ್ರವಾರ ಸಂಜೆ ಮನೆಯಲ್ಲಿ ಗುಡಿಸಿದ ಕಸವನ್ನೇ ಹೊರಗೆ ಹಾಕುವುದಿಲ್ಲ. ಇನ್ನೊಂದು ತಮಾಷೆ ಕೇಳಿ, ಸಾಲ ಕೊಡುವುದನ್ನೇ ದಂಧೆ ಮಾಡಿಕೊಂಡ ಕೆಲವರು ಉಪ್ಪಿನ ಮೇಲೆ ಹಣವಿಟ್ಟು ಕೊಡುತ್ತಾರೆ. ಹಾಗೆ ಮಾಡುವುದರಿಂದ ಸಾಲ ಪಡೆದವರಿಗೆ ಅದನ್ನು ಹಿಂತಿರುಗಿಸುವುದು ವಿಪರೀತ ಕಷ್ಟವಾಗುತ್ತದಂತೆ ಹಾಗೂ ಬಡ್ಡಿಯಂತೂ ಬರುತ್ತಲೇ ಇರುತ್ತದೆ ಎಂಬುದು ಅವರ 'ದುರಾಲೋಚನೆ'.

ಯಾವುದೇ ತಿಂಗಳ ಅಮಾವಾಸ್ಯೆಯಲ್ಲಿ ಅಂಗಡಿಯನ್ನು ತೆರೆಯದ, ವ್ಯಾಪಾರ ಮಾಡದ ಸಮುದಾಯದವರೂ ಇದ್ದಾರೆ. ಇವೆಲ್ಲವನ್ನು ಏಕೆ ಹೇಳಬೇಕಾಯಿತು ಅಂದರೆ, ಬೇರೆಯವರ ಈ ಐದು ವಸ್ತುಗಳನ್ನು ಬಳಸಿದರೆ ಬಳಕೆ ಮಾಡಿದವರಿಗೆ ನಕಾರಾತ್ಮಕ ಪರಿಣಾಮ ಆಗುತ್ತದೆ. ತೊಂದರೆ- ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ. ಅದನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ.

ಹ್ಞಾಂ, ಇದು ನಂಬಿಕೆ ಅಷ್ಟೇ. ಯಾವುದೇ ಪೂರ್ವಗ್ರಹ ಇಲ್ಲದೆ ಅದರ ಹಿಂದಿನ ಉದ್ದೇಶವನ್ನು ತಿಳಿಯಲು ಯತ್ನಿಸಿದರೆ ಸಾಕು.

 ಇತರರ ಮಂಚದ ಮೇಲೆ ಮಲಗುವುದು ಶುಭವಲ್ಲ

ಇತರರ ಮಂಚದ ಮೇಲೆ ಮಲಗುವುದು ಶುಭವಲ್ಲ

ಅನಾರೋಗ್ಯದ ಕಾರಣಕ್ಕೋ ಅಥವಾ ನೆಲದ ಮೇಲೆ ಮಲಗಿ ಅಭ್ಯಾಸ ಇಲ್ಲ ಅಂತಲೋ ಬೇರೆಯವರ ಮನೆಗೆ ಹೋದಾಗ ಅವರು ಉಪಯೋಗಿಸುವ ಮಂಚವನ್ನು ಬಳಸಿದರೆ ಒಳ್ಳೆಯದಲ್ಲ. ಇದರಿಂದ ನೆಗಟಿವ್ ಎನರ್ಜಿ (ನಕಾರಾತ್ಮಕ ಶಕ್ತಿ) ಹೆಚ್ಚಾಗುತ್ತದೆ. ಸೌಜನ್ಯಕ್ಕಾಗಿ ಅತಿಥಿಗಳನ್ನು ಮಂಚದ ಮೇಲೆ ಮಲಗಿ ಎಂದು ಹೇಳಿದರೂ ಹಾಗೆ ಮತ್ತೊಬ್ಬರು ಬಳಸಿದ ಮಂಚದ ಮೇಲೆ ಮಲಗುವುದು ಒಳ್ಳೆಯದಲ್ಲ.

ಇತರರ ಬಟ್ಟೆ ಎಷ್ಟೇ ಇಷ್ಟವಾದರೂ ಧರಿಸಕೂಡದು

ಇತರರ ಬಟ್ಟೆ ಎಷ್ಟೇ ಇಷ್ಟವಾದರೂ ಧರಿಸಕೂಡದು

ಒಂದೇ ಅಳತೆಯ ಬಟ್ಟೆ ಇಬ್ಬರಿಗೂ ಆಗುತ್ತದೆ, ನಾನು ತಂದಿದ್ದು ಅವರು, ಕೆಲವೊಮ್ಮೆ ಅವರು ತಂದ ಬಟ್ಟೆಯನ್ನು ನಾನು ಬಳಸುವುದುಂಟು ಅನ್ನೋರು ಹೆಚ್ಚು. ಈ ರೀತಿ ಬೇರೆಯವರ ಬಟ್ಟೆ ಧರಿಸಬಾರದು. ಹೀಗೆ ಮಾಡುವುದು ಬೇಡ ಎಂದು ವಿಜ್ಞಾನದಲ್ಲೂ ಇದೆ. ನಂಬಿಕೆಗಳ ಪ್ರಕಾರವೂ ಇದರಿಂದ ಒಳಿತಾಗಲ್ಲ.

ಬೇರೆಯವರ ಹಣವನ್ನು ಅನ್ಯಾಯದ ದಾರಿಯಲ್ಲಿ ಪಡೆಯಬಾರದು

ಬೇರೆಯವರ ಹಣವನ್ನು ಅನ್ಯಾಯದ ದಾರಿಯಲ್ಲಿ ಪಡೆಯಬಾರದು

ಬೇರೆಯವರ ಹಣಕ್ಕೆ ಆಸೆ ಪಡುವುದು, ಅದನ್ನು ಬಲವಂತವಾಗಿಯೋ ಅಥವಾ ವಂಚನೆ ಮೂಲಕ ಹೊಡೆದುಕೊಳ್ಳುವುದು ತಪ್ಪು. ಈ ಬಗ್ಗೆ ಮಹಾಭಾರತದ ವಿದುರ ನೀತಿಯಲ್ಲೂ ಪ್ರಸ್ತಾವ ಇದೆ. ಬೇರೆಯವರ ಹಣಕ್ಕೆ ಆಸೆ ಪಡುವ ವ್ಯಕ್ತಿಗೆ ನೆಮ್ಮದಿಯಾಗಿ ನಿದ್ದೆ ಬರಲು ಸಾಧ್ಯವಿಲ್ಲ ಎಂದು ವಿದುರನು ಧೃತರಾಷ್ಟ್ರನಿಗೆ ಹೇಳುತ್ತಾನೆ.

ಬ್ಯಾಂಕ್ ಇತರೆಡೆ ಹೋಗುವಾಗಲೂ ನಿಮ್ಮದೇ ಪೆನ್ ಇಟ್ಟುಕೊಳ್ಳಿ

ಬ್ಯಾಂಕ್ ಇತರೆಡೆ ಹೋಗುವಾಗಲೂ ನಿಮ್ಮದೇ ಪೆನ್ ಇಟ್ಟುಕೊಳ್ಳಿ

ಸಂಸ್ಕೃತದಲ್ಲಿ ಈ ಬಗ್ಗೆ ಸುಭಾಷಿತವೇ ಇದೆ. ಬೇರೆಯವರ ಹಸ್ತ ಸೇರಿದ ಲೇಖನಿ, ಹಣ ಹಾಗೂ ಹೆಣ್ಣು ಮರಳಿ ಅದೇ ಸ್ಥಿತಿಯಲ್ಲಿ ಸಿಗುವುದಿಲ್ಲ ಅಂತ. ಆದರೆ ಬೇರೆಯವರ ಲೇಖನಿ ಅಥವಾ ಪೆನ್ ಬಳಸುವುದು ಅದೃಷ್ಟ ಕಸಿಯುವಂಥದ್ದಂತೆ. ಅದು ಬ್ಯಾಂಕ್ ಇರಲಿ, ಮತ್ತೊಂದು ಸ್ಥಳ ಇರಲಿ, ಜತೆಗೆ ನಿಮ್ಮದೇ ಪೆನ್ ಇರಿಸಿಕೊಳ್ಳುವುದು ಒಳಿತು.

ನಿಮ್ಮ ಬ್ಯಾಡ್ ಟೈಮಿಗೆ ಬೇರೆಯವರ ವಾಚ್ ಕಾರಣವಾಗದಿರಲಿ

ನಿಮ್ಮ ಬ್ಯಾಡ್ ಟೈಮಿಗೆ ಬೇರೆಯವರ ವಾಚ್ ಕಾರಣವಾಗದಿರಲಿ

ಮತ್ತೊಬ್ಬರ ಕೈ ಗಡಿಯಾರ ಅದೆಷ್ಟೇ ಚೆನ್ನಾಗಿದ್ದರೂ ಅದು ನಿಮಗೆ ಬಹಳ ಇಷ್ಟವಾದರೂ ಒಂದು ದಿನಕ್ಕಾದರೂ ಅದನ್ನು ಬಳಸಬಾರದು. ಇದರಿಂದಲೂ ಅವರ ಪಾಲಿನ ಕೆಟ್ಟ ಸಮಯ ಧರಿಸಿದವರಿಗೆ ವರ್ಗಾವಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹ್ಞಾಂ, ಇನ್ನೊಂದು ಮಾತು. ಕೆಟ್ಟು ನಿಂತಿರುವ ಗಡಿಯಾರ ಮನೆಯಲ್ಲಿರುವುದು ಕೂಡ ಶುಭ ಸೂಚಕವಲ್ಲ, ಇದರಿಂದ ಕೆಲಸ-ಕಾರ್ಯಗಳಿಗೆ ಅಡೆ, ತಡೆಯಾಗುತ್ತದೆ ಎಂಬ ನಂಬಿಕೆ ಇದೆ.

English summary
Bed, dress, money, pen and watch these 5 things of others should not use. This is the belief. Whereas should it be follow or not is upto personal belief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X