ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾದ ಮೂರ್ಖರು ಯಾರು? ಉತ್ತರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಏ. 1: ಏಪ್ರಿಲ್ 1 ನ್ನು ಮೂರ್ಖರ ದಿನಾಚರಣೆ ಎಂದು ಕರೆದುಕೊಂಡಿದ್ದೇವೆ. ಏನಾದರೆ ಆಗಲಿ ಬೇರೆಯವರ ಮೂರ್ಖ ಕೆಲಸವನ್ನು ನೋಡಿ ನಗುವ, ಮಜಾ ತೆಗೆದುಕೊಳ್ಳುವ ನಾವು ಮಾಡುವ ಮೂರ್ಖ ಕೆಲಸಗಳ ಪಟ್ಟಿ ಯನ್ನು ಒಮ್ಮೆ ನೋಡಿದರೆ ದಿನಾಚರಣೆಗೆ ಅರ್ಥ ಹುಡುಕಿಕೊಳ್ಳಬಹುದು.

ರಾಜಕಾರಣಿಗಳು, ನಾಗರಿಕರು, ಸಿನಿಮಾ ನಟರು, ನಟಿಯರು, ಕ್ರೀಡಾಪಟುಗಳು, ಮಾಧ್ಯಮಗಳು ಎಲ್ಲರೂ ಒಂದಿಲ್ಲೊಂದು ಮೂರ್ಖ ಕಲಸ ಮಾಡುತ್ತಲೇ ಇರುತ್ತಾರೆ. ನಾವು ಮಾಡುವ ಮೂರ್ಖ ಕೆಲಸಗಳಿಗೆ ಒಮ್ಮೊಮ್ಮೆ ಬೆಲೆಯನ್ನು ತೆರಬೇಕಾಗಿತ್ತದೆ. ಅಂಥ ಪಟ್ಟಿಯನ್ನು ಮೂರ್ಖರ ದೃಷ್ಟಿಕೋನದಿಂದಲೇ ನೋಡೋಣ.

bengaluru

* ವಾಹನವನ್ನು ಸದಾ ಎಡಭಾಗದಿಂದಲೇ ಓವರ್ ಟೇಕ್ ಮಾಡಿ(ನಾವು ಮಾಡ್ತಾ ಇರೋದು ಇದನ್ನೇ)
* ಮನೆಯಿಂದ ದಿನಾ ಲೇಟಾಗಿ ಹೊರಟು ಸಿಗ್ನಲ್ ಜಂಪ್ ಮಾಡಲು ಮರೆಯಬೇಡಿ(ಇದನ್ನು ನೀವು ಹೇಳಬೇಕಾಗಿಲ್ಲ ಬಿಡಿ)
* ದಿನಾ ಲೇಟಾಗಿ ಮಲಗಿ ಬೆಳಗ್ಗೆ ಎದ್ದು ಬೈದುಕೊಂಡು, ಇಂದು ಬೇಗ ಮಲಗಿ ನಾಳೆ ಬೇಗ ಎಳುತ್ತೇನೆ ಎಂದು ನಿರ್ಧಾರ ತೆಗೆದುಕೊಳ್ತಾನೇ ಇರಿ(ಆ ನಾಳೆ ಬರುವುದೇ ಇಲ್ಲ)
* ತಿಂಗಳಿಡಿ ಮನೆಯ ಎಲ್ಲಾ ದೀಪಗಳನ್ನು ಉರಿಸಿ(ಬಿಲ್ ಬಂದ ಮೇಲೆ ಕೆಇಬಿಗೆ ಬೈಯ್ಯಲು ಮರೆಯಬೇಡಿ)
* ಆಹಾರವನ್ನು ಗಡಿಬಿಡಿಯಲ್ಲಿ ತಿಂದು ಮುಗಿಸಿ(ಆರೋಗ್ಯ ಕೈ ಕೊಟ್ಟಾಗ ಕಲಬೆರಕೆ ವಸ್ತು ಎಂದು ಹಳಿಯಿರಿ)
* ಬ್ಯಾಂಕ್ ಕೆಲಸ, ತೆರಿಗೆ ಪಾವತಿ, ಎಕ್ಸಾಂ ಫೀ ಎಲ್ಲವನ್ನು ಕೊನೆ ದಿನ ತುಂಬಿ (ಬ್ಯಾಂಕ್ ನವರು ಬೇಗ ಕೆಲಸ ಮಾಡಿಕೊಟ್ಟಿಲ್ಲ ಎಂದು ಹೇಳಲು ಮರೆಯಬೇಡಿ)
* ಮನೆಯಲ್ಲಿ ಅಡುಗೆ ಮಾಡೋ ಸಹವಾಸವೇ ಬೇಡ (ಹೊಟೆಲ್ ನಲ್ಲಿ ತಿನ್ನೋದನ್ನ ನಮಗೆ ಹೇಳಿ ಕೊಡ್ಬೇಕಾ)
* ಮನಸೋ ಇಚ್ಛೆ ನೀರು ಬಳಸಿ(ಜೀವ ಜಲ ಸಂರಕ್ಷಣೆ ಆಗಬೇಕು ಎಂದು ಭಾಷಣ ಬಿಗಿಯಿರಿ)
* ಗಂಡ-ಹೆಂಡತಿ ಗಲಾಟೆಯ ಪ್ಯಾನಲ್ ಡಿಸ್ಕಷನ್ ಗಂಟೆಗಟ್ಟಲೇ ನೋಡಿ (ಇತ್ತ ನಮ್ಮ ಮನೆಯಲ್ಲಿ ಏನಾದರೂ ಅಡ್ಡಿ ಇಲ್ಲ)
* ಧೋನಿ ಮಗು ಏನ್ಮಾಡ್ತಿದೆ, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಕತೆ ಗೊತ್ತಿರಲೇಬೇಕು(ನಮ್ಮ ಮನೆಯ ಮಗು ಉಪವಾಸ ಮಲಗಿದ್ರೂ ಪರವಾಗಿಲ್ಲ)
* ಎಲ್ಲಾ ಕೆಲಸ ಬಿಟ್ಟು ಇಡೀ ದಿನ ಕ್ರಿಕೆಟ್ ನೋಡಿ(ತಂಡ ಸೋತ ಮೇಲೆ ಇದೆಲ್ಲಾ ಫಿಕ್ಸಿಂಗ್ ಎಂದು ಜರಿಯಲು ಮರೆಯಬೇಡಿ)
* ಕಂಡ ಕಂಡಲ್ಲಿ ಕಸ ಎಸೆಯಿರಿ(ನಗರಸಭೆ ಸರಿಯಿಲ್ಲ ಎಂದು ಹಳಿಯಲು ಮರೆಯಬೇಡಿ)
* ದಿನದಲ್ಲಿ ನಾಲ್ಕು ತಾಸು ಮೊಬೈಲ್ ನಲ್ಲಿ ಕಳೆಯಿರಿ(ನಿದ್ರೆ ಇಲ್ಲ ಎಂದು ಮನೆಯವರನ್ನು ತೆಗಳಿ)
* ಜೀವ ವಿಮೆ ಮತ್ತು ಇತರ ಇನ್ಶೂರೆನ್ಸ್ ಅವಧಿ ಮುಗಿವರೆಗೂ ಕಟ್ಟಬೇಡಿ(ನಂತರ ದಂಡ ಕಟ್ಟುವಾಗ ಸಂಬಂಧಿಸಿದ ಕಂಪನಿಗೆ ಉಗಿಯಿರಿ)
* ಯಾವ ಕಾರಣಕ್ಕೂ ಪರೀಕ್ಷೆಗೆ ಮುನ್ನ ಓದಲು ಹೋಗಬೇಡಿ(ಪರೀಕ್ಷೆ ಹಿಂದಿನ ದಿನ ನಿದ್ರೆಗೆಟ್ಟು ಓದಿ, ಎಕ್ಸಾಂ ಹಾಲ್ ನಲ್ಲಿ ತೂಕಡಿಸಿ)
* ಸಣ್ಣ ಪುಟ್ಟ ಜ್ವರಕ್ಕೆಲ್ಲ ಆಸ್ಪತ್ರೆಗೆ ಹೋಗೋದು ಬೇಡ(ಎಲ್ಲಾ ಮಿಕ್ಕ ಮೇಲೆ ಆಸ್ಪತ್ರೆ ಬೆಡ್ ಮೇಲೆ ಕುಳಿತು ವೈದ್ಯರಿಗೆ ಬೈಯ್ಯಿರಿ)

ಎಲ್ಲದಕ್ಕಿಂತ ಮುಖ್ಯವಾಗಿ
* ಯಾವ ಕಾರಣಕ್ಕೂ ಸಮಯಕ್ಕೆ ಸರಿಯಾಗಿ ತಿನ್ನಬೇಡಿ(ಗ್ಯಾಸ್ ಟ್ರಿಕ್ ಆದರೆ ಇನೋ ಇದ್ಯೆಲ್ಲಾ!)

English summary
Why should we celebrate April Fools Day on April 1? We have been celebrating it everyday. Just look back and see what you have been doing. Are we fooling the society or fooling ourselves? Is it not time to introspect ourselves? Forget April Fools Day, let's make our life more meaningful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X