• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...

|

ಇತ್ತೀಚೆಗೆ ಬ್ರಾಹ್ಮಣರ ಮನೆಗಳಲ್ಲಿ ಮದುವೆ ವಯಸ್ಸಿಗೆ ಬಂದ ಹಾಗೂ ಮೀರುತ್ತಿರುವ ಹುಡುಗರ ಸಂಖ್ಯೆ ತುಂಬ ಹೆಚ್ಚಾಗಿ ಕಣ್ಣಿಗೆ ಕಾಣುತ್ತದೆ. ಇದು ಬೇರೆ ಸಮುದಾಯದಲ್ಲೂ ಇರಬಹುದು. ಆದರೆ ತುಂಬ ಮುಖ್ಯ ಹಾಗೂ ಪ್ರಮುಖವಾಗಿ ಬ್ರಾಹ್ಮಣ ಸಮುದಾಯದಲ್ಲೇ ಈ ರೀತಿ ಏಕೆ ಎಂಬುದರ ಚರ್ಚೆಯಂಥ ಲೇಖನವಿದು.

ಗಂಡು ಹೆತ್ತವರಲ್ಲವಾ ಅದಕ್ಕೆ ಇಷ್ಟು ಸೊಕ್ಕು ಅನ್ನೋ ರೀತಿ ಡೈಲಾಗ್ ನ ಇತ್ತೀಚೆಗೆ ಸಿನಿಮಾಗಳಲ್ಲೂ ಕೇಳುವುದಿಲ್ಲ. ಯಾವುದಾದರೂ ಕಾರ್ಯಕ್ರಮವಿದ್ದು, ಬಹಳ ಜನ ಸೇರುವ ಜಾಗದಲ್ಲಿ ತಮ್ಮ ಮಗನ ಬಗ್ಗೆ ಒಳ್ಳೆಯದೇ ಮಾತನಾಡಬೇಕು ಎಂದು ಆಣೆ ಮಾಡಿ ಬಂದವರಂತೆ ಸಂಬಳ, ಕಾರು, ಬಂಗಲೆ ಅದೂ ಇದೂ ಎಂದು ಮಾತನಾಡುವ ತಂದೆ-ತಾಯಿಯೇ ಹೆಚ್ಚಿರುತ್ತಾರೆ.

ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?

ಅವರಿಗೆ ಅದು ಜಂಬ ಅಥವಾ ಹೆಮ್ಮೆ ವಿಷಯ ಏನಲ್ಲ. ತಮ್ಮ ಮಗನಿಗೆ ಮದುವೆಗೆ ಹೆಣ್ಣು ಹುಡುಕುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳಿಕೊಳ್ಳಲು ತಾವೇ ಸೃಷ್ಟಿಸುವ ಅವಕಾಶ. ನಮ್ಮಲ್ಲಿ ಹೆಣ್ಣುಮಕ್ಕಳೇ ಕಡಿಮೆ ಆಗಿಬಿಟ್ಟಿದ್ದಾರೆ ಎಂದು ನಿಡುಸುಯ್ಯುವ ಮಾತೇ ಪದೇಪದೇ ಕೇಳುತ್ತಿದೆ.

ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!

ನಿಜವಾಗಲೂ ಹೆಣ್ಣುಮಕ್ಕಳ ಸಂಖ್ಯೆಯೇ ಕಡಿಮೆ ಇದೆಯೇ ಅಂದರೆ, ಅದನ್ನು ನಿರ್ಧರಿಸುವುದಕ್ಕೆ ಕೂಡ ಆಗ್ತಿಲ್ಲ. ಅದರಲ್ಲೂ ಬ್ರಾಹ್ಮಣರ ಮನೆಯ ಹೆಣ್ಣುಮಗಳು ಅಂತರ್ಜಾತಿ ಅಥವಾ ಅಂತರ್ಧರ್ಮೀಯ ಮದುವೆ ಆಗಿಬಿಟ್ಟು, ಅದು ಸುದ್ದಿ ಆದರೆ ಅದೆಷ್ಟು ಮಂದಿ ಗಂಡುಮಕ್ಕಳ ಪೋಷಕರು ಆ ಹೆಣ್ಣುಮಗಳನ್ನು ಬಯ್ದುಕೊಳ್ತಾರೋ?

ಮಂಗಳಸೂತ್ರದ ಮಹತ್ವ, ಹವಳ ದೋಷಕ್ಕೆ ಪರಿಹಾರ

ಅಡುಗೆ, ಪೌರೋಹಿತ್ಯ, ಕೃಷಿಯಲ್ಲಿರುವವರಿಗೆ ಸಮಸ್ಯೆ

ಅಡುಗೆ, ಪೌರೋಹಿತ್ಯ, ಕೃಷಿಯಲ್ಲಿರುವವರಿಗೆ ಸಮಸ್ಯೆ

ಕೆಲವು ಉದ್ಯೋಗ ಅಥವಾ ವೃತ್ತಿಯಲ್ಲಿರುವ ಹುಡುಗರನ್ನು ಹೆಣ್ಣುಮಕ್ಕಳೇ ತಿರಸ್ಕರಿಸುತ್ತಿದ್ದಾರೆ. ಅದರಲ್ಲೂ ಅಡುಗೆ, ಪೌರೋಹಿತ್ಯ, ಕೃಷಿ ಮಾಡುವವರು ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ಹೆಣ್ಣುಮಕ್ಕಳು ಕೊಡುವ ಕಾರಣಗಳು ಕೂಡ ನಾನಾ ಬಗೆಯಲ್ಲಿರುತ್ತವೆ. ಕೃಷಿ ಅಂತ ಹಳ್ಳಿಗಾಡಿನ ಮನೆಯಲ್ಲಿ ಕೆಲಸ ಮಾಡಿಕೊಂಡಿರೋದಿಕ್ಕೆ ನಮಗೆ ಆಗಲ್ಲ.

ಪೌರೋಹಿತ್ಯ ಮಾಡೋರು ವಿಪರೀತ ನಿಯಮಗಳು ಹಾಕ್ತಾರೆ. ಸದಾ ಸೀರೆಯೇ ಉಡಬೇಕು, ಹೋಟೆಲ್ ನಲ್ಲಿ ತಿನ್ನೋ ಹಾಗಿಲ್ಲ. ಇದಕ್ಕೆಲ್ಲ ನಾವು ಒಪ್ಪಲ್ಲ ಎನ್ನುತ್ತಾರೆ. ಇನ್ನು ಅಡುಗೆ ಅವರೆಂದರೆ ಆದಾಯ ಕಡಿಮೆ ಎಂಬ ಭ್ರಮೆ ಇನ್ನೂ ಹೋಗಿಲ್ಲ. ಹಾಗೆ ನೋಡಿದರೆ ವರ್ಷಕ್ಕೆ ಹತ್ತು ಲಕ್ಷದ ಮೇಲೆ ದುಡಿಯುವ ಬಹಳ ಮಂದಿ ಅಡುಗೆಯವರು ಕಾಣಸಿಗುತ್ತಾರೆ.

ಮಡಿ 'ಬ್ರ್ಯಾಂಡ್' ನ ಹೊಡೆತ

ಮಡಿ 'ಬ್ರ್ಯಾಂಡ್' ನ ಹೊಡೆತ

ಇನ್ನು ಬ್ರಾಹ್ಮಣರ ಒಳಪಂಗಡಗಳಲ್ಲಿ ಉದಾಹರಣಗೆ ಸ್ಮಾರ್ತ ಹಾಗೂ ಮಾಧ್ವ, ಶ್ರೀ ವೈಷ್ಣವ-ಸ್ಮಾರ್ತ, ಮಾಧ್ವ-ಶ್ರೀ ವೈಷ್ಣವ ಹೀಗೆ ಮದುವೆ ಆಗುತ್ತಿರುವುದು ಹೌದಾದರೂ ಮಾಧ್ವರು ವಿಪರೀತ ಮಡಿ ಅವರ ಮನೆಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲ ಅನ್ನೋರು ಹೆಚ್ಚು.

ಈ ವಿಚಾರಕ್ಕೆ ಬಂದರೆ ಪೋಷಕರೇನೋ, ಮಡಿ ನಾವು ಮಾಡಿಕೊಳ್ತೀವಿ. ಅವರು ಬೇಕಾದರೆ ಬೇರೆ ಮನೆಯಲ್ಲೇ ಇರಲಿ. ಅವರ ತಂಟೆಗೆ ಹೋಗಲ್ಲ. ನಮ್ಮ ಮಗನಿಗೆ ಮದುವೆ ಆದರೆ ಸಾಕು ಎನ್ನುವವರಿದ್ದಾರೆ. ಆದರೆ 'ಮಡಿ' ಬ್ರ್ಯಾಂಡ್ ಅನ್ನಿಸಿದ ಮೇಲೆ ಹುಡುಗಿ ಕಡೆಯವರು ಇವರ ಮಾತು ಕೇಳುವುದಕ್ಕೂ ಸಿದ್ಧರಿರೋದಿಲ್ಲ.

ಹೆಚ್ಚು ಓದಿದ, ಸಂಬಳ ಪಡೆವ ಹುಡುಗ ಬೇಕು

ಹೆಚ್ಚು ಓದಿದ, ಸಂಬಳ ಪಡೆವ ಹುಡುಗ ಬೇಕು

ಉದ್ಯೋಗಕ್ಕೆ ಹೋಗುವ ಹೆಣ್ಣುಮಕ್ಕಳಾದರೆ ತಾವು ಮದುವೆ ಆಗುವ ಹುಡುಗ ತಮಗಿಂತ ಸ್ವಲ್ಪವಾದರೂ ಹೆಚ್ಚಿಗೆ ಸಂಬಳ ಪಡೆಯಬೇಕು, ಹೆಚ್ಚು ಓದಿರಬೇಕು ಎಂಬ ನಿರೀಕ್ಷೆ ಇರುತ್ತದೆ. ಇದೇ ಕಾರಣಕ್ಕೆ ಬಹಳ ಹೆಣ್ಣುಮಕ್ಕಳು ಹುಡುಗರನ್ನು ಬೇಡ ಅನ್ನುವ ಸಾಧ್ಯತೆ ಹೆಚ್ಚು.

ದೊಡ್ಡ ಕುಟುಂಬದ ಹಿರಿಯ ಮಗ ಬೇಡ

ದೊಡ್ಡ ಕುಟುಂಬದ ಹಿರಿಯ ಮಗ ಬೇಡ

ಇನ್ನು ಕೂಡು ಕುಟುಂಬವಾಗಿದ್ದು ತಂದೆ-ತಾಯಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಎಂಬ ಜವಾಬ್ದಾರಿ ಇರುವ ಹುಡುಗರಿಗೆ, ಅಂಥ ಕುಟುಂಬದ ದೊಡ್ಡ ಮಗನಿಗೆ ಮದುವೆ ಮಾಡಿಕೊಡುವುದಕ್ಕೆ ಹೆಣ್ಣು ಹೆತ್ತವರು ಯೋಚಿಸುತ್ತಾರೆ. ಖಾಸಗಿ ಬದುಕು ಇರುವುದಿಲ್ಲ, ಜವಾಬ್ದಾರಿ ತುಂಬಾ ಜಾಸ್ತಿ ಎಂಬುದು ಅದಕ್ಕೆ ಮುಖ್ಯ ಕಾರಣ.

ಆರ್ಥಿಕ ಸ್ಥಿತಿವಂತರಾ?

ಆರ್ಥಿಕ ಸ್ಥಿತಿವಂತರಾ?

ನಮ್ಮ ಕಷ್ಠ ಮಕ್ಕಳು ಪಡಬಾರದು ಎಂಬುದು ಎಲ್ಲ ಪೋಷಕರ ಆಶಯ-ಅಭಿಲಾಷೆ. ಆದರೆ ಎಷ್ಟು ಹಣವಿದ್ದರೆ ಶ್ರೀಮಂತ ಅನ್ನೋದಕ್ಕೆ ಮಾನದಂಡ ಏನಿದೆ? ಸ್ವಂತಮನೆಯಿಲ್ಲ, ಇನ್ನೂ ಕಾರು ತಗೊಂಡಿಲ್ಲವಂತೆ, ಅವರ ತಂದೆ-ತಾಯಿ ಯಾವ ಒಡವೆಯನ್ನೂ ಹಾಕಿಲ್ಲ್, ಅವರಿರುವ ಏರಿಯಾ ಅಂಥ ಚೆನ್ನಾಗಿಲ್ಲ, ವಾರದಲ್ಲಿ ಆರು ದಿನ ಕೆಲಸ, ಇನ್ನೂ ಮನೆ ಕಟ್ಟಿದ ಸಾಲ ತೀರಿಸಿಲ್ಲವಂತೆ...ಹೀಗೆ ಹುಡುಗರನ್ನು ತಿರಸ್ಕರಿಸುವ ಕಾರಣದ ಪಟ್ಟಿ ಬೆಳೆಯುತ್ತದೆ.

ಜಾತಕ ಆಗಿಬರಬೇಕು

ಜಾತಕ ಆಗಿಬರಬೇಕು

ಬಹುತೇಕ ಮದುವೆಗಳು ಈ ಹಂತದಲ್ಲೇ ನಿಂತುಹೋಗುತ್ತವೆ. ಮೊದಲಿಗೆ ಜಾತಕ ಆಗಿಬರುತ್ತಾ ನೋಡಿ ಅನ್ನೋ ಹಂತದಲ್ಲೇ ತುಂಡಾಗುತ್ತಿದೆ. ಈ ವಿಚಾರದಲ್ಲಿ ಈಚೆಗೆ ಸ್ವಲ್ಪ ಮಟ್ಟಿಗೆ ರಾಜೀ ಆಗುತ್ತಿದ್ದಾರೆ ಅನ್ನೋದು ಹೌದಾದರೂ ಪೂರ್ತಿ ಪ್ರಮಾಣದಲ್ಲಿ ನಿಂತಿಲ್ಲ.

ಆಲೋಚನೆ ಬದಲಾಗಬೇಕು

ಆಲೋಚನೆ ಬದಲಾಗಬೇಕು

ಈ ಹಿಂದೆ ಬ್ರಾಹ್ಮಣರ ಒಳಪಂಗಡಗಳಲ್ಲಿ ಆಗುವ ಮದುವೆ ಅಪರೂಪ ಎಂಬತೆ ಇರುತ್ತಿತ್ತು. ಈಚೆಗೆ ಅದು ಹೆಚ್ಚಾಗಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಸ್ಯಾಹಾರಿಗಳಾಗಿದ್ದರೆ ಸಾಕು ಎಂಬ ಸ್ಥಿತಿ ಬಂದಿದೆ. ಈ ವಿಚಾರದಲ್ಲಿ ಮಾತ್ರ. ಅವರವರ ಯೋಚನೆಗೆ ಬಿಟ್ಟಿದ್ದು. ಅದರೆ ಇಂಥ ಆಲೋಚನೆಗಳು ಈಗಿನ ಸ್ಥಿತಿಯನ್ನು ಬದಲಿಸುತ್ತದೆ.

ಕೆಲವು ಪೋಷಕರು ತಮ್ಮ ಮಗನಿಗೆ ಮದುವೆ ಆದರೆ ಸಾಕು ಎಂದು ಸ್ವಲ್ಪ ವಿಶಾಲವಾಗಿ ಯೋಚಿಸಲು ಸಿದ್ಧರಿದ್ದರೂ ತಮ್ಮ ಸಮುದಾಯದಲ್ಲಿ ಏನೆಂದುಕೊಂಡಾರೋ ಎಂಬ ಅಳುಕು ಇರುತ್ತದೆ. ಈ ಬಗ್ಗೆ ಮುಕ್ತವಾದ ವೇದಿಕೆಯೊಂದು ಸಿದ್ಧವಾಗಬೇಕು.

ಇನ್ನೊಂದು ವಿಚಾರ ಮದುವೆ ಅನ್ನೋದು ಖಂಡಿತಾವಾಗಿಯೂ ಹುಡುಗಿಯೂ ಒಪ್ಪಿ ಆಗಬೇಕಾದಂಥದ್ದು. ಮೇಲ್ಕಂಡ ಕಾರಣಗಳೆಲ್ಲ ವೈಯಕ್ತಿಕವಾದದ್ದು. ಅದು ಸರಿ ಅಥವಾ ತಪ್ಪು ಎಂಬ ವಿಶ್ಲೇಷಣೆ- ತೀರ್ಪು ಕೊಡುವ ಉದ್ದೇಶ ನಮ್ಮದಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Now a days bachelor youths common in Brahmin community. Why it is so? What are the common reasons behind this? Here is an analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more