ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆರಗು ಮೂಡಿಸುವ ಕಂಬಳಿಹುಳುಗಳ ಮೋಹಕ ಲೋಕ

By ಡಿ.ಜಿ.ಮಲ್ಲಿಕಾರ್ಜುನ
|
Google Oneindia Kannada News

ಚಿಟ್ಟೆ, ಪತಂಗಗಳ ಜೀವನಚಕ್ರ ಅಂದರೆ ಸಂಪೂರ್ಣ ರೂಪ ಪರಿವರ್ತನೆ. ಇದರಲ್ಲಿ ಮೊಟ್ಟೆ, ಕಂಬಳಿಹುಳು, ಕೋಶಾವಸ್ಥೆ ಮತ್ತು ಪ್ರೌಢಾವಸ್ಥೆ ಎಂಬ ನಾಲ್ಕು ಹಂತಗಳಿರುತ್ತವೆ.

ಮೊಟ್ಟೆಯಿಂದ ಹೊರಬರುವ ಕಂಬಳಿಹುಳು ಆತಿಥೇಯ ಸಸ್ಯದ ಎಲೆಗಳನ್ನು ತಿನ್ನುತ್ತಾ ಸೂಕ್ತ ಗಾತ್ರಕ್ಕೆ ಬೆಳೆದಾಗ ತನ್ನ ಸುತ್ತ ಕೋಶವನ್ನು ರಚಿಸುತ್ತದೆ. ಕೋಶದಲ್ಲಿ ಕಂಬಳಿಹುಳುವು ಕ್ರಮೇಣ ಚಿಟ್ಟೆಯಾಗಿ ಮಾರ್ಪಾಟಾಗಿ, ನಿರ್ದಿಷ್ಟ ಸಮಯದ ನಂತರ ಪ್ರೌಢಚಿಟ್ಟೆಯಾಗಿ ಹೊರಬರುತ್ತದೆ.[ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ]

ತಿನ್ನುತ್ತಾ ಕೊಬ್ಬುವ ಕಂಬಳಿಹುಳುಗಳಲ್ಲಿ ಕೆಲವು ಹಾಗೆಯೇ ಬೆಳವಣಿಗೆಯಾದರೆ, ಕೆಲವು ಮಾತ್ರ ಪೊರೆಯನ್ನು ಕಳಚುತ್ತಾ ದೇಹವನ್ನು ಬೆಳೆಸಿಕೊಳ್ಳುತ್ತವೆ. ಕಂಬಳಿಹುಳುವು ಪ್ರೌಢಚಿಟ್ಟೆಯಾಗಲು ಬೇಕಾಗುವಷ್ಟು ಆಹಾರವನ್ನು ತನ್ನ ದೇಹದಲ್ಲಿ ಶೇಖರಿಸಿದ ನಂತರ ಆಹಾರ ಸೇವನೆಯನ್ನು ಸಂಪೂರ್ಣ ನಿಲ್ಲಿಸಿಬಿಡುತ್ತದೆ.

ಪೂರ್ತಿ ಬೆಳೆದ ಹುಳು ಒಂದು ವಿಶಿಷ್ಟ ದ್ರವವನ್ನು ಸ್ರವಿಸಿ, ರೇಷ್ಮೆದಾರದ ಒಂದು ಮೆತ್ತೆಯನ್ನು ತಯಾರಿಸಿ ಅದನ್ನು ರೆಂಬೆ ಅಥವಾ ಎಲೆಗಳ ಕೆಳಗೆ ಆಧಾರಕ್ಕೆ ಅಂಟಿಸುತ್ತದೆ. ಅದಕ್ಕೆ ತನ್ನ ದೇಹದ ಒಂದು ತುದಿಯನ್ನು ಮೆತ್ತೆಗೆ ಸಿಕ್ಕಿಸಿ, ತಲೆ ಕೆಳಗಾಗಿ ಜೋತಾಡುತ್ತದೆ. ನಂತರ ಚರ್ಮವನ್ನು ಕಳಚಿ ತನ್ನ ಸುತ್ತ ಕೋಶ ನಿರ್ಮಿಸಿಕೊಳ್ಳುತ್ತದೆ. ಒಂದೊಂದು ಹುಳುವೂ ಒಂದೊಂದು ರೀತಿ ಕೋಶಗಳನ್ನು ಹೊಂದುತ್ತವೆ.[ವಿಶ್ವೇಶ್ವರಯ್ಯ ಜನ್ಮದಿನ: ಉಸಿರಾಡುವ ಅಂಚೆಚೀಟಿ ಕಂಡ ಕನ್ನಡಿಗ]

ಕೋಶದೊಳಗೆ ರೂಪ ಪರಿವರ್ತನೆ ಹೊಂದಿ, ಹೊರಬರುವಾಗ ಪೂರ್ಣ ಪ್ರಮಾಣದ ಚಿಟ್ಟೆಯಾಗಿರುತ್ತದೆ. ಮೊಟ್ಟೆ, ಮರಿಹುಳು, ಪ್ರೌಢಹುಳು, ಕೋಶ ಹಾಗೂ ಹೊರಬರುವ ಚಿಟ್ಟೆಗೂ ರೂಪಗಳಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ವಿಭಿನ್ನವಾಗಿರುತ್ತದೆ.

ಎಳೆ ಬಿಸಿಲು

ಎಳೆ ಬಿಸಿಲು

ಎಳೆ ಬಿಸಿಲಿನಲ್ಲಿ ಬಾಗಿದ ಎಳೆ ಬಳ್ಳಿಯ ಮೇಲೆ ತನ್ನ ಕೋಶದ ನಿರ್ಮಾಣದ ಸಿದ್ಧತೆಯಲ್ಲಿ ತೊಡಗಿರುವ ಕಂಬಳಿಹುಳು

ಅಚ್ಚರಿ ಕಂಬಳಿ

ಅಚ್ಚರಿ ಕಂಬಳಿ

ಶತ್ರುಗಳನ್ನು ಭಯಪಡಿಸಲೆಂದೇ ರೋಮಗಳನ್ನು ಹೊಂದಿರುವ ಕಂಬಳಿಹುಳುವನ್ನು ಪುಟ್ಟ ಕೀಟವೂ ನಮ್ಮಂತೆ ಅಚ್ಚರಿಯಿಂದ ನೋಡುತ್ತಿದೆ

 ಕೇಸರಿ ಮುಳ್ಳು

ಕೇಸರಿ ಮುಳ್ಳು

ಚಾಕೋಲೇಟ್ ರೀತಿ ಕಾಣುವ ಕೇಸರಿ ಮುಳ್ಳುಗಳನ್ನು ಹೊಂದಿರುವ ಈ ಕಂಬಳಿಹುಳು ಮುಂದೆ ಸುಂದರವಾದ ಕ್ರಿಂಸನ್ರೋಸ್ ಚಿಟ್ಟೆಯಾಗುತ್ತದೆ

 ಹಾವಿನ ಹೆಡೆಯೇ..!

ಹಾವಿನ ಹೆಡೆಯೇ..!

ಹಾವಿನ ಹೆಡೆಯಂತೆ ತಲೆಯೆತ್ತಿರುವ ಹಸಿರುಬಣ್ಣದ ಕಂಬಳಿಹುಳು ಮುಂದೆ ಸುಂದರ ಪತಂಗವಾಗುತ್ತದೆ

ಚುಕ್ಕೆ ಚಿತ್ರ

ಚುಕ್ಕೆ ಚಿತ್ರ

ಚುಕ್ಕೆಚಿತ್ರದಂತೆ ಕಾಣುವ ಈ ಸುಂದರ ಕಂಬಳಿಹುಳು ಹಳದಿಯ ಹಲವು ಛಾಯೆಯನ್ನು ಹೊಂದಿದ ಕಾಮನ್ ಎಮಿಗ್ರೆಂಟ್ ಚಿಟ್ಟೆಯಾಗುತ್ತದೆ

ಇದು ಕಂಬಳಿಹುಳು ಕಣ್ರೀ

ಇದು ಕಂಬಳಿಹುಳು ಕಣ್ರೀ

ಎಲೆಗೆ ತಗುಲಿಕೊಂಡ ಒಣ ಕಡ್ಡಿಯಂತಿರುವ ಕಂಬಳಿಹುಳು ನಿಧಾನವಾಗಿ ಎಲೆಯನ್ನು ಕಬಳಿಸುತ್ತಿದೆ

English summary
It is a photo feature about butterfle, moth life cycle. Photos are taken by Shidlaghatta D.G.Mallikarjuna. Those are beautiful pictures, which are help to enjoy science.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X