ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಲೇಖನ: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

By Mahesh
|
Google Oneindia Kannada News

ಭಾರತೀಯ ಅರಣ್ಯ ಸೇವೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದಿವಂಗತ ಪಿ. ಶ್ರೀನಿವಾಸ್ ರವರು ಕಾಡುಗಳ್ಳ ವೀರಪ್ಪನ್ನಿಂದ ವಿಧಿವಶರಾದ ದಿನ ನವೆಂಬರ್ 10 ರಂದು ಕರ್ನಾಟಕ ಅರಣ್ಯ ಇಲಾಖೆ ಹುತಾತ್ಮರ ದಿನವೆಂದು 1992 ರಿಂದ 2012 ರವರೆಗೂ ಆಚರಿಸಲಾಗುತ್ತಿತ್ತು. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಯದ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

ಇತಿಹಾಸ: 1730ರ ಸೆಪ್ಟೆಂಬರ್ 11 ರಂದು ಜೋಧಪುರದ ಮಹಾರಾಜ ಅಭಯಸಿಂಗ್ ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇಜರ್ಲಿ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿರುತ್ತದೆ.

ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದಂಥ ಸರ್ವೋಚ್ಛ ತ್ಯಾಗವನ್ನು ಮಾಡಿ, ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿಗಳ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಮತ್ತು ಸರ್ವೋಚ್ಚ ತ್ಯಾಗಗಳು, ಅಪಾಯಕ್ಕೆ ಒಳಗಾದ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ.

National Forest Martyr's day

ಇಂತಹ ಆದರ್ಶ ವ್ಯಕ್ತಿಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ದಿವಂಗತ ಪಿ. ಶ್ರೀನಿವಾಸ್, ಭಾ.ಅ.ಸೇ., ರವರು ವೀರಪ್ಪನ್ನ ನಯವಂಚನೆ ಚಕ್ರವ್ಯೂಹದಲ್ಲಿ ಸಿಲುಕಿ 1991ರ ನವೆಂಬರ್ 10 ರಂದು ವಿಧಿವಶರಾದರು. ದಿವಂಗತ ಪಿ. ಶ್ರೀನಿವಾಸ್ ಅವರ ಕಾರ್ಯದಕ್ಷತೆ ಹಾಗು ತ್ಯಾಗಕ್ಕಾಗಿ ಭಾರತ ಸರ್ಕಾರವು ಇವರಿಗೆ "ಕೀರ್ತಿಚಕ್ರ" ವೆಂಬ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ.

ವೀರಪ್ಪನ್ ನ ವಂಚನೆಯಿಂದ ಹುತಾತ್ಮರಾದ ಕೊಳ್ಳೇಗಾಲದ ಅರಣ್ಯ ರಕ್ಷಕ ಬಿ.ಸಿ. ಮೋಹನಯ್ಯ, ಶಿರಸಿಯ ಮರಗಳ್ಳರ ಕ್ರೌರ್ಯಕ್ಕೆ ಬಲಿಯಾದ ವಲಯ ಅರಣ್ಯಾಧಿಕಾರಿ, ಅರವಿಂದ್ ಹೆಗಡೆ ಹಾಗು ಇವರಂತೆ ಅನೇಕ ಅಧಿಕಾರಿ/ನೌಕರರು ನಾಡಿನ ಅರಣ್ಯ ರಕ್ಷಣೆಗಾಗಿ ಮಾಡಿದ ತ್ಯಾಗ ಹಾಗು ಬಲಿದಾನ ಮತ್ತು ಅವರು ತೋರಿದ ಶೌರ್ಯ ಸ್ಮರಣೀಯ.

ದುರದೃಷ್ಟಕರವಾಗಿ ಎರಡು ದಿನಗಳ ಹಿಂದೆ ಅಂದರೆ ದಿನಾಂಕ: 09.09.2016 ರಂದು ರಾಮನಗರ ಪ್ರಾದೇಶಿಕ ವಿಭಾಗದ ಮಾಗಡಿ ಅರಣ್ಯ ಪ್ರದೇಶದಲ್ಲಿ ಅರಣ್ಯ ವೀಕ್ಷಕರಾದ ಪಂಚಲಿಂಗಯ್ಯ ಇವರು ಕರ್ತವ್ಯ ನಿರತರಾಗಿದ್ದಾಗ ಇಲಾಖೆಗಾಗಿ ಹುತಾತ್ಮರಾಗಿರುತ್ತಾರೆ.

ಕಳೆದ 50 ವರ್ಷಗಳಿಂದಲೂ ಅಮೂಲ್ಯ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಿಣಿಯಲ್ಲಿ ತಮ್ಮಗಳ ಬದುಕನ್ನೇ ಮುಡಿಪಾಗಿಟ್ಟು, ಕಳ್ಳಸಾಗಾಣಿಕೆದಾರರ, ಮರಗಳ್ಳರ, ದಂತಚೋರರ, ವನ್ಯಜೀವಿ ಹಂತಕರ ಜೊತೆ ಕೆಚ್ಚೆದೆಯಿಂದ ಹೋರಾಡಿ ನೈಸರ್ಗಿಕ ಸಂಪತ್ತನ್ನು ಉಳಿಸಲು ತಮ್ಮ ಜೀವನವನ್ನೇ ನಾಡಿಗಾಗಿ ತ್ಯಾಗ ಮಾಡಿದ ಇಲಾಖೆಯ ಅಧಿಕಾರಿ/ನೌಕರರ ಬಲಿದಾನವನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಹುತಾತ್ಮರ ದಿನಾಚರಣೆಯನ್ನು ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅರಣ್ಯ ಇಲಾಖೆಯಿಂದ ಆಚರಿಸಲಾಗುತ್ತಿದ್ದು, ಇಲಾಖೆಯ ಅಧಿಕಾರಿ ನೌಕರರುಗಳಲ್ಲಿ ಕರ್ತವ್ಯನಿಷ್ಠೆ ಪ್ರಮಾಣಿಕತೆ ಹಾಗೂ ಆತ್ಮಸ್ಥೈರ್ಯವನ್ನು ತುಂಬಿದೆ.

English summary
Forest Martyr's day in India is now observed on 11 of September instead of 11th November of every year. Many Forest Officers and Field Staffs have lost their lives during service, while protecting the forest from smuggler, anti-poachers and sometimes due to wildlife attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X