• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By ಶುಭಾಶಯ ಜೈನ್
|

ನಿಮ್ಮ ಜೀವನಾವಧಿಯಲ್ಲಿ ನೀವು ಒಳ್ಳೆಯ ಕೆಲಸ ಮಾಡಿದ್ದೀರೋ ಇಲ್ವೋ, ಆದ್ರೆ ಕೊನೇ ಪಕ್ಷ ಸತ್ತ ಮೇಲಾದ್ರೂ ಒಂದು ಒಳ್ಳೆಯ ಕೆಲಸ ನಿಮ್ಮಿಂದಾದ್ರೆ ಅದು ಜೀವನದ ಮತ್ತು ಜೀವನದ ನಂತರದ ಸಾರ್ಥಕತೆ.

ನಿಮಗ್ಗೊತ್ತೇ, ನಿಮ್ಮ ಒಂದು ಒಳ್ಳೆಯ ನಿರ್ಧಾರ 8 ಜೀವಗಳನ್ನು ಉಳಿಸಬಹುದು.. ಅಂದ್ರೆ 8 ಜೀವದಾನ ಮಾಡಿದ ಪುಣ್ಯ ನಿಮ್ಮದಾಗುತ್ತೆ. ಹೇಗಂತೀರಾ? ಸತ್ತ ನಂತರ ಮಣ್ಣಾಗುವ ದೇಹ ಮತ್ತೊಬ್ಬರ ಜೀವನದ ಬೆಳಕಾಗಬಾರದೇಕೆ? ಯೆಸ್, ಮರಣಾನಂತರ ದೇಹದಾನ ಮಾಡೋದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಯಾವುದೇ ಧರ್ಮ ಈ ಮಾನವೀಯ ಕಾರ್ಯವನ್ನು ನಿರಾಕರಿಸಿಲ್ಲ. ಹಾಗಾಗಿ ಜಾತಿ ಧರ್ಮ ಏನು ಹೇಳುತ್ತೋ ಅನ್ನೋ ಆತಂಕ ಬಿಟ್ಟು ನಿರ್ಭಯವಾಗಿ ನೀವೂ ದೇಹದಾನ ಅಥವಾ ಅಂಗಾಂಗ ದಾನ ಮಾಡಬಹುದು.

ಒಂದು ಸಮೀಕ್ಷೆ ಪ್ರಕಾರ, ಪ್ರಪಂಚದಲ್ಲಿ 1.5 ಲಕ್ಷ ಜನರಿಗೆ ಕಿಡ್ನಿಯ ಅವಶ್ಯಕತೆ ಇದೆ. ಆದ್ರೆ ಪೂರೈಸಲು ಶಕ್ತವಾಗಿರುವುದು ಕೇವಲ 3 ಸಾವಿರ. 30 ಜನರಲ್ಲಿ ಒಬ್ಬರ ಕಿಡ್ನಿಯ ಅವಶ್ಯಕತೆಯನ್ನು ಮಾತ್ರ ಪೂರೈಸಲು ಸಾಧ್ಯವಾಗಿದೆ. 90 ಶೇಕಡಾದಷ್ಟು ಕಿಡ್ನಿ ಅವಶ್ಯಕತೆ ಇರುವ ಜನ, ದಾನಿಗಳಿಲ್ಲದೆ ಸಾವಿನ ಬಾಗಿಲು ತಟ್ಟುತ್ತಿದ್ದಾರೆ.

ಹುಟ್ಟು ದಾನ ಕಣೋ... ಸಾವು ಗುಟ್ಟು ಕಣೋ..

ಇನ್ನು 25 ಸಾವಿರದಷ್ಟು ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಯಾರಾದ್ರೂ ದಾನಿಗಳು ನೆರವಾಗ್ಬೋದೇನೋ ಅಂತ ಕಾಯುತ್ತಿದ್ದಾರೆ. ಲಿವರ್ ಕೊರತೆಯಿಂದ ಅದೆಷ್ಟೋ ಜನರನ್ನು ಬದುಕುಳಿಸಲಾಗದೇ ವೈದ್ಯರು ಅಸಹಾಯಕರಾಗಿದ್ದಾರೆ. ಅದೆಷ್ಟೋ ಜೀವಗಳು ಬದುಕುಳಿಯಬೇಕು ಅಂದ್ರೆ ನಾವು ಕಿಂಚಿತ್ ಔದಾರ್ಯ ತೋರಬೇಕಿದೆ.

ಅಂಗಾಂಗ ದಾನ - ಬದುಕಿರುವ ಅಥವಾ ಸತ್ತ ವ್ಯಕ್ತಿಯ ದೇಹದಿಂದ ಆರೋಗ್ಯವಂತ ಅಂಗವನ್ನು ತೆಗೆದು ಅಗತ್ಯವಿರುವ ವ್ಯಕ್ತಿಗೆ ನೀಡುವಂಥದ್ದು ಅಂಗಾಂಗ ದಾನ. ಇದನ್ನ ಶಸ್ತ್ರಚಿಕಿತ್ಸೆಯ ಮೂಲಕ ನುರಿತ ವೈದ್ಯರು ಅಂಗಾಂಗ ವರ್ಗಾವಣೆ ಅಥವಾ ಮರುಜೋಡಣೆ ಮಾಡ್ತಾರೆ.

ಬದುಕಿರುವ ವ್ಯಕ್ತಿಯ ದೇಹದಿಂದ ದಾನ ನೀಡಬಹುದಾದಂಥಾ ಅಂಗಾಗಗಳು- ಕಿಡ್ನಿ, ರಕ್ತ, ಕೂದಲು, ಚರ್ಮ.

ಯಾರು ಬೇಕಾದರೂ ರಕ್ತದಾನ ಮಾಡಬಹುದು

ರಕ್ತದಾನ ಯಾರು ಬೇಕಾದ್ರೂ ಮಾಡಲು ಸಾಧ್ಯವಿದೆ. 18 ವಯೋಮಿತಿ ಮೇಲ್ಪಟ್ಟ, 50 ಕೆಜಿಗಿಂತ ಹೆಚ್ಚು ತೂಕವಿರುವ, 12 ಎಂಎಲ್, ಹಿಮೋಗ್ಲೋಬಿನ್ ಹೊಂದಿರುವ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ದಾನ ಪಡೆದ ರಕ್ತವನ್ನು 3 ತಿಂಗಳ ಕಾಲ ಸಂಗ್ರಹಿಸಿಡಬಹುದಾಗಿದೆ, ಮತ್ತು ಕ್ರಾಸ್ ಮ್ಯಾಚ್ ಮಾಡಿ ಅಗತ್ಯವಿರುವ ವ್ಯಕಿಗೆ ನೀಡಲಾಗುತ್ತೆ.

ಹೆಣ್ಣುಮಕ್ಕಳು ಮಾಸಿಕ ಋತುಸ್ರಾವದ 7 ದಿನಗಳಲ್ಲಿ ಮತ್ತು ಗರ್ಭದಾರಣೆಯ ಸಂದರ್ಭದಲ್ಲಿ ರಕ್ತದಾನ ಮಾಡುವಂತಿಲ್ಲ. ಯಾವುದೇ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲೂ ರಕ್ತದಾನ ಮಾಡುವಂತಿಲ್ಲ.

ಡೊನೇಟ್ ಹೇರ್- ಕೂದಲ ದಾನ ಮಾಡುವುದರಿಂದ ಕ್ಯಾನ್ಸರ್ ಪೀಡಿತರಿಗೆ ನೆರವಾಗಬಹುದು. ಕ್ಯಾನ್ಸರ್ ಪೀಡಿತ ವ್ಯಕ್ತಿಗಳಲ್ಲಿ ಕೂದಲು ಉದುರುವ ಸಮಸ್ಯೆ ಇರುತ್ತದೆ. ಕ್ಯಾನ್ಸರ್ ರೋಗಿಗಳಲ್ಲಿ ಕೂದಲು ಉದುರುವ ಸಮಸ್ಯೆ ಇರೋದ್ರಿಂದ ಅವರಿಗೆ ವಿಗ್ ತಯಾರಿಸಲು ಕೂದಲ ದಾನ ಸಹಕಾರಿಯಾಗುತ್ತದೆ.

ಕಿಡ್ನಿ- ಬದುಕಿರುವಂತಹಾ ವ್ಯಕ್ತಿಗೆ ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಹತ್ತಿರದ ಸಂಬಂಧಿಗಳು ಒಂದು ಕಿಡ್ನಿಯನ್ನು ದಾನ ಮಾಡಬಹುದು ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ.

ಮರಣದ ನಂತರ ದಾನ ಮಾಡಬಹುದಾದ ಅಂಗಗಳು-- ಕಣ್ಣು, ಕಿಡ್ನಿ, ಹೃದಯ, ಕಾರ್ನಿಯಾ, ಲಿವರ್, ಬೋನ್ ಮಾರೋ, ಮೃತ ವ್ಯಕ್ತಿಯ ದೇಹದ ಭಾಗಗಳನ್ನು ಬೇರ್ಪಡಿಸಿ ಮತ್ತೊಬ್ಬ ವ್ಯಕ್ತಿಗೆ ಜೋಡಣೆ ಮಾಡಲಾಗುತ್ತೆ. ಇದನ್ನ ಇಂತಿಷ್ಟೇ ಸಮಯದ ಅವಧಿಯೊಳಗೆ ನಡೆಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಮೃತರ ಕುಟುಂಬದವರ ಒಪ್ಪಿಗೆ ಅಗತ್ಯ..

ನೀವು ಮಾಡಬೇಕಾಗಿರುವುದು-

ದೇಹದಾನ/ ಅಂಗಾಂಗದಾನಕ್ಕೆ ನೋದಾವಣೆ ಮಾಡಿಕೊಳ್ಳಿ.

ನಿಮ್ಮ ನಿರ್ಧಾರವನ್ನು ನಿಮ್ಮ ಮನೆಯವರಿಗೆ/ ಸ್ನೇಹಿತರಿಗೆ ತಿಳಿಸಿ.

ನಿಮ್ಮ ಜೊತೆ ಗುರುತಿನ ಪತ್ರವನ್ನು ಇಟ್ಟುಕೊಂಡಿರಿ.

ನಿಮ್ಮ ಸ್ನೇಹಿತರಿಗೆ ಕುಟುಂಬಿಕರಿಗೆ ಅಂಗಾಂಗದಾನದ ಮಹತ್ವವನ್ನು ತಿಳಿಸಿ. ಅಂಗಾಂಗದಾನಕ್ಕೆ ಅವರನ್ನೂ ಪ್ರೇರೇಪಿಸಿ.

ಮಿಥ್ಯೆಗಳು-

ಸತ್ತನಂತರ ನೋವಿನ ಅನುಭವ ಉಂಟಾಗಬಹುದು - ಸುಳ್ಳು.

ಅಂಗಾಂಗ ದಾನ ಮಾಡಲು ಧಾರ್ಮಿಕ ತೊಡಕುಗಳಿವೆ - ಇಲ್ಲ.

ದೇಹದ ಭಾಗಗಳನ್ನು ತೆಗೆದ ನಂತರ ದೇಹ ವಿರೂಪಗೊಳ್ಳುತ್ತದೆ - ಸುಳ್ಳು.

ನನಗೆ ತುಂಬಾ ವಯಸ್ಸಾಗಿದೆ ನಾನು ದೇಹದಾನ ಮಾಡಲು ಸಾಧ್ಯವಿಲ್ಲ- ತಪ್ಪು.

ಅಂಗಾಂಗ ದಾನಕ್ಕೆ ವಯಸ್ಸಿನ ತೊಡಕಿಲ್ಲ. ಮೃತಪಟ್ಟ ಯಾವುದೇ ವಯಸ್ಸಿನ ವ್ಯಕ್ತಿಯ ಅಂಗಾಂಗಳು ಮತ್ತೊಬ್ಬರಿಗೆ ಜೋಡಿಸಲು ಸಾಧ್ಯವಿದೆ. ಇಲ್ಲಿ ಅಂಗಾಂಗಳ ಸುಸ್ಥಿತಿ ಅಥವಾ ಕ್ರಿಯಾಶೀಲತೆ ನಿರ್ಧಾರಕವಾಗಿರುತ್ತದೆ.

ಮೆಡಿಕಲ್ ಕಂಡಿಷನ್- ಕೆಲವೊಂದು ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳಿದ್ರೂ ಅಂಗಾಂಗ ದಾನ ಮಾಡಬಹುದಾಗಿದೆ. ಅಂಗಾಂಗದಾನದ ನಂತ್ರ ಅಂತ್ಯಕ್ರಿಯೆಗೆ ಮೃತದೇಹವನ್ನು ಕುಟುಂಬಿಕರಿಗೆ ಒಪ್ಪಿಸುವಾಗ ಸ್ವಲ್ಪ ತಡವಾಗಹುದು.

ಮೃತ ವ್ಯಕ್ತಿಯ ದೇಹದಿಂದ ಅಂಗಾಂಗಳನ್ನು ತುಂಬಾ ಜಾಗೃತೆಯಿಂದ ಬೇರ್ಪಡಿಸಲಾಗುತ್ತೆ, ವ್ಯಕ್ತಿಯ ಗೌರವಕ್ಕೆ ಕುಂದು ಬಾರದ ಹಾಗೆ ಸಾಮಾನ್ಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನುರಿತ ತಜ್ಞರಿಂದ ನಡೆಸಲಾಗುತ್ತೆ. ಒಮ್ಮೆ ಅಂಗಾಂಗಳನ್ನು ಬೇರ್ಪಡಿಸಿದ ನಂತರ ಸಹಜ ಸ್ಥಿತಿಯಲ್ಲಿ ಜಾಗೃತೆಯಿಂದ ದೇಹವನ್ನು ಮುಚ್ಚಲಾಗುತ್ತೆ. ದೇಹದಾನ ಮಾಡಿದ ನಂತರ ಕುಟುಂಬಿಕರಿಗೆ ಮೃತನ ದೇಹ ವೀಕ್ಷಣೆಗೆ ಮತ್ತು ಆ ದೇಹದೊಂದಿಗೆ ಸಮಯ ಕಳೆಯಲು ಅವಕಾಶ ನೀಡಲಾಗುತ್ತದೆ.

ಅಂಗಾಂಗದಾನಕ್ಕೆ ಒಮ್ಮೆ ನೋಂದಣಿ ಮಾಡಿಕೊಂಡ್ರೆ ಮತ್ತೆ ನಾನು ನನ್ನ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲವೆಂಬುದು ತಪ್ಪು. ಖಂಡಿತ ಅಂಗಾಂಗದಾನಕ್ಕೆ ಒಮ್ಮೆ ನೋಂದಣಿ ಮಾಡಿಕೊಂಡ್ರೆ ಯಾವುದೇ ಸಂದರ್ಭದಲ್ಲೂ ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಲು ಸಾಧ್ಯವಿದೆ.

ದೇಹದಾನ

ವೈದ್ಯಕೀಯ ವಿಜ್ಞಾನ ಮುಂದುವರೀಬೇಕು ಅಂದ್ರೆ ನಮ್ಮ ಪುಟ್ಟ ಕೊಡುಗೆ ತುಂಬ ಮಹತ್ವದ್ದಾಗಿದೆ. ಮರಣಾನಂತರ ಮಣ್ಣಾಗುವ ದೇಹವನ್ನು ವೈದ್ಯಕೀಯ ಸಂಸ್ಥೆ ಕಾಲೇಜುಗಳಿಗೆ ದಾನ ಮಾಡುವುದರಿಂದ ಅನೇಕ ಲಾಭವಿದೆ. ಇದರಿಂದ ವೈದ್ಯಕೀಯ ವಿಜ್ಞಾನ ಅಭಿವೃದ್ಧಿಯಾಗುತ್ತದೆ. ಅನೇಕ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುತ್ತದೆ. ಆಸಕ್ತರು ವೈದ್ಯಕೀಯ ಕಾಲೇಜು ಸಂಸ್ಥೆಗಳಿಗೆ ದೇಹದಾನ ಮಾಡಬಹುದು.

ಎಲ್ಲಿ ಮಾಡಬಹುದು?

ಖಾಸಗಿ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ, ಕೆಲವೊಂದು ಸರ್ಕಾರಿ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಅಂಗಾಂಗದಾನ ಮತ್ತು ದೇಹದಾನಕ್ಕೆ ನೋಂದಾವಣೆ ಮಾಡಿಸಿಕೊಳ್ಳಬಹುದು. ನೋಂದಾವಣೆಗೆ ಸಂಸ್ಥೆಗಳು ನೀಡುವಂತಹಾ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಜೊತೆಗೆ ನಮ್ಮ ಕುಟುಂಬದವರ ಒಪ್ಪಿಗೆಯ ಋಜು ಅಗತ್ಯವಾಗಿರುತ್ತದೆ. ಒಮ್ಮೆ ಅಂಗಾಂಗದಾನಕ್ಕೆ ನೋದಣಿ ಮಾಡಿಸಿಕೊಂಡ್ರೆ ಸಂಸ್ಥೆಯಿಂದ ಗುರುತಿನ ಚೀಟಿಯನ್ನು ನೀಡಲಾಗುತ್ತದೆ.

ದೇಹದಾನ/ ಅಂಗಾಂಗ ದಾನದ ವಿಚಾರ ಬಂದಾಗ ಕೋಪಿಸಿಕೊಳ್ಳುವವರೇ ಹೆಚ್ಚು. ಸತ್ತ ಮೇಲೆ ಏನಿಲ್ಲಾಂದ್ರೂ ನನ್ನ ದೇಹ ಮಾತ್ರ ನನ್ನ ಕುಟುಂಬದವರಿಗೆ ಬೇಕಪ್ಪಾ... ಅನ್ನೋ ಅಭಿಪ್ರಾಯಗಳೇ ಕೇಳಿಬರುತ್ತೆ. ದೇಹದಾನ, ಅಂಗಾಂಗದಾನ ಮಾಡೋಕೆ ನಾನೇನು ಅನಾಥನೇ? ಭಿಕಾರಿಯೇ? ಅಂತ್ಯಕ್ರಿಯೆ ಮಾಡದೇ ಹೋದರೆ ನನಗೆ ಮುಕ್ತಿ ಸಿಗಲ್ಲ.. ಸಮಾಜದಲ್ಲಿ ಇಂತಹ ಪ್ರತಿಕ್ರಿಯೆಗಳೇ ಹೆಚ್ಚು.

ದೇಹದಾನ ಮಾಡಿ ಆದರ್ಶ ಮೆರೆದ ದಂಪತಿಗಳು

ಇಂಥಾ ಜನರ ಮಧ್ಯೆ ಅಪರೂಪದ ಆದರ್ಶವಾಗಿ ಯುವಕರಿಗೆ ಒಂದು ಸ್ಫೂರ್ತಿಯಾಗಿ ನಿಲ್ಲುವವರು ಅಂದ್ರೆ ಡಾ. ವೇದಮೂರ್ತಿ, ಅಡಿಷನಲ್ ಎಸ್‌ಪಿ ಆಫ್ ಮಂಗಳೂರು. ಡಾ ವೇದಮೂರ್ತಿ ಕುಟುಂಬದ 10 ಜನ ಅಂಗಾಂಗದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ.

"ಸಮಾಜ ಇಷ್ಟು ಮುಂದುವರಿದ್ರೂ ಕೆಲವೊಂದು ವಿಚಾರಗಳಲ್ಲಿ ಜನರನ್ನು ಬದಲಿಸೋದು ಸಾಧ್ಯವಿಲ್ಲ. ಅಂಗಾಂಗದಾನ ದೇಹದಾನದ ವಿಚಾರ ಬಂದ್ರೆ ಹಿಂದೆ ಸರಿಯುವವರೇ ಹೆಚ್ಚು. ಜನ ಅಂಗಾಂಗ ದಾನಕ್ಕೆ ಮುಂದಾಗ್ಬೇಕು. ಈ ಮೂಲಕ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿದೆ. ಮಾನವೀಯತೆಯ ದೃಷ್ಟಿಯಿಂದ ಇದು ಮಹತ್ವದ ಕಾರ್ಯ" ಇದು ಡಾ. ವೇದಮೂರ್ತಿಯವರ ಮಾತು.

ಅಂಗಾಂಗದಾನ ದೇಹದಾನದ ಬಗ್ಗೆ ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿಗೆ ವಾಟ್ಸಾಪ್ ಮಾಡಿ.. ಡೊನೇಟ್ ಆರ್ಗನ್-ಸೇವ್ ಲೈಫ್ 9482847978

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Become an Organ Donor - Register to Save a Life‎. How does the process of organ donation work? What are the organs that can be donated after death? What does it mean to be an organ donor? Know all about organ donation. ಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more