• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

By ರಾಘವೇಂದ್ರ ಅಡಿಗ
|

ವೈನ್‌ ಬಗ್ಗೆ ಕೆಲವು ಅಚ್ಚರಿ ಸಂಗತಿಗಳಿವೆ. ಭಾರತದ ಆಹಾರ ಸಂಸ್ಕೃತಿಗೆ ವೈನ್ ನಿಧಾನಗತಿಯಿಂದ ಒಗ್ಗಿಕೊಳ್ಳುತ್ತಿದೆ. ಅದರೆ, ಆಲ್ಕೋಹಾಲ್ ಎಂದರೆ ಮೂಗು ಮುರಿಯುವವರೂ ಕೂಡಾ ಒಮ್ಮೆಯಾದರೂ ಮಕ್ಕಳಿಗೆ ನೆಗಡಿ ಬಂದರೆ ಡಾಕ್ಟರ್ ಸಲಹೆ ಮೇರೆಗೆ ಒಂದೆರಡು ಹನಿ 'ಎಣ್ಣೆ' ಹಾಕದೇ ಇರಲು ಸಾಧ್ಯವಿಲ್ಲ.

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ವಿಷ ಮತ್ತು ಅಮೃತ ಎರಡು ಸೇರಿ ಹುಟ್ಟಿದ್ದೇ ಮದ್ಯ ಎಂಬ ಕಥೆ ಇದೆ. ಅದೇನೇ ಇರಲಿ, ವೈನ್ ಕುಡಿದು ಕುಡುಕರಾಗುವ ಮುನ್ನ ವೈನ್ ಬಗ್ಗೆ ಇದ್ದ ನಂಬಿಕೆಗಳು, ಇತಿಹಾಸ, ಬಳಕೆ, ಆರೋಗ್ಯದ ಮೇಲೆ ಪರಿಣಾಮದ ಬಗ್ಗೆ ಲೇಖನ ಇಲ್ಲಿದೆ ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆಗಳನ್ನು ತಪ್ಪದೇ ಹಂಚಿಕೊಳ್ಳಿ...[ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!]

ವೈನ್‌ ಕುಡಿಯುವಾಗ ‘ಚಿಯರ್ಸ್‌' ಎನ್ನುತ್ತೇವಲ್ಲ ಈ ರೂಢಿ ಬಂದಿದ್ದು ರೋಮ್‌ನಿಂದಂತೆ. ಯಾರೊಬ್ಬರೂ ಇನ್ನೊಬ್ಬರನ್ನು ವಿಷ ಹಾಕಿ ಕೊಲ್ಲುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ‘ಚಿಯರ್ಸ್‌' ಮಾಡುತ್ತಿದ್ದರಂತೆ. ಹೀಗೆ ಮಾಡಿದಾಗ ಗ್ಲಾಸ್‌ಗಳಲ್ಲಿರುವ ಸ್ವಲ್ಪ ಮದ್ಯ ಇನ್ನೊಂದು ಗ್ಲಾಸಿಗೂ ಬೀಳುತ್ತದೆ. [ವೈನ್ ಲೈಬ್ರರಿ ಮತ್ತು ವೈನ್ ಅಕಾಡೆಮಿ]

ಒಬ್ಬ ಅದನ್ನು ಕುಡಿಯಲು ನಿರಾಕರಿಸಿದ ಎಂದಾದರೆ, ಅದರಲ್ಲಿ ವಿಷ ಬೆರೆಸಲಾಗಿದೆ ಎಂಬುದು ಸ್ಪಷ್ಟವಾಗುತ್ತಿತ್ತು. ಈ ಸಂಪ್ರದಾಯ ಮೊದಲ ಆರಂಭವಾಗಿದ್ದು ಗ್ರೀಸ್‌ನಲ್ಲಿ. ಅತಿಥಿಗೆ ಮದ್ಯ ನೀಡುವುದಕ್ಕೂ ಮುನ್ನ ಅವನೆದುರಿಗೆ ಮನೆಯ ಯಜಮಾನ ಅದನ್ನು ಕುಡಿಯಬೇಕಿತ್ತು! ['ಯಾನಾ' ಸಾವಯವ ವೈನ್ ಮಾರುಕಟ್ಟೆಗೆ] ವೈನ್ ಕುಡಿದರೆ ವೈನಾಗಿರಲು ಸಾಧ್ಯವೇ ಮುಂದೆ ಓದಿ...[

ರೋಮ್‌ನಲ್ಲಿ ಮಹಿಳೆ ವೈನ್‌ ಸೇವಿಸುವಂತಿರಲಿಲ್ಲ

ರೋಮ್‌ನಲ್ಲಿ ಮಹಿಳೆ ವೈನ್‌ ಸೇವಿಸುವಂತಿರಲಿಲ್ಲ

ಹಿಂದೆ ರೋಮ್‌ನಲ್ಲಿ ಮಹಿಳೆಯರು ವೈನ್‌ ಸೇವಿಸುವಂತಿರಲಿಲ್ಲ. ಒಂದೊಮ್ಮೆ ಮಹಿಳೆ ವೈನ್‌ ಕುಡಿಯುತ್ತಿರುವುದು ಪತಿ ಗಮನಕ್ಕೆ ಬಂದಲ್ಲಿ ಕಾನೂನು ಪ್ರಕಾರ ಆಕೆಯನ್ನು ಕೊಲ್ಲಲು ಅವಕಾಶ ನೀಡಲಾಗುತ್ತಿತ್ತಂತೆ. ಆದರೆ, ಈಗ ಜತೆಯಲ್ಲೇ ಕುಳಿತು ಪತಿ-ಪತ್ನಿ ವೈನ್‌ ಸ್ವಾದ ಸವಿಯುತ್ತಾರೆ.

ಈಜಿಪ್ಟ್‌ ನಾಗರೀಕತೆಯಲ್ಲಿ ವೈನ್‌ ಬಳಸುತ್ತಿರಲಿಲ್ಲ

ಈಜಿಪ್ಟ್‌ ನಾಗರೀಕತೆಯಲ್ಲಿ ವೈನ್‌ ಬಳಸುತ್ತಿರಲಿಲ್ಲ

ಈಜಿಪ್ಟ್‌ ನಾಗರೀಕತೆಯಲ್ಲಿ ವೈನ್‌ ಬಳಸುತ್ತಿರಲಿಲ್ಲ. ದೇವತೆಗಳ ಜತೆ ಯುದ್ಧ ಮಾಡಿ ಸೋತ ಪುರುಷನ ರಕ್ತ ಎಂದು ಅಲ್ಲಿನ ರಾಜ ಭಾವಿಸಿದ್ದ. ಹೀಗಾಗಿ ಅಲ್ಲಿ ವೈನ್‌ ಮೇಲೆ ನಿರ್ಬಂಧವಿತ್ತು.

ಕೋಬ್ರಾ ವೈನ್‌ ಹೆಚ್ಚು ಜನಪ್ರಿಯತೆ

ಕೋಬ್ರಾ ವೈನ್‌ ಹೆಚ್ಚು ಜನಪ್ರಿಯತೆ

ವಿಯೆಟ್ನಾಂನಲ್ಲಿ ಕೋಬ್ರಾ ವೈನ್‌ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅಕ್ಕಿಯಿಂದ ಮಾಡಿದ ವೈನ್‌ಗೆ ಸ್ಥಳದಲ್ಲೇ ಸಾಯಿಸಿದ ಹಾವಿನ ರಕ್ತ ಬೆರೆಸಿರುತ್ತಾರೆ. ನೀವು ಬಯಸಿದರೆ ಅದಕ್ಕೆ ಹಾವಿನ ಹೃದಯವನ್ನೂ ಸೇರಿಸಿಕೊಳ್ಳಬಹುದು.

5400 ವರ್ಷಗಳ ಇತಿಹಾಸ

5400 ವರ್ಷಗಳ ಇತಿಹಾಸ

ಕುಡಿತವನ್ನು ಇಷ್ಟಪಡುವವರು ನೀವಾಗಿದ್ದರೆ ನೀವು ರೆಡ್ ವೈನ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸ್ವಾಭಾವಿಕ ದ್ರಾಕ್ಷಿಯಿಂದ ತಯಾರಾದ ಈ ರೆಡ್ ವೈನ್ ಗೆ ಕ್ರಿ.ಪೂ 5400 ವರ್ಷಗಳ ಇತಿಹಾಸವಿದೆ ಎಂದು ವಿಜ್ಞಾನಿಗಳೇ ದೃಢಪಡಿಸಿದ್ದಾರೆ. ಪ್ರತಿ ದಿನ ಒಂದು ಗ್ಲಾಸ್ ರೆಡ್ ವೈನ್ ಸೇವನೆಯಿಂದ ಆಗುವ ಕೆಲವು ಲಾಭಗಳ ವಿವರ ಮುಂದಿದೆ.

ಮಲಗುವ ಮುನ್ನ ಮಿತವಾಗಿ ಸೇವಿಸಿ

ಮಲಗುವ ಮುನ್ನ ಮಿತವಾಗಿ ಸೇವಿಸಿ

ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಚೈಂಟಿ, ಮೆರ್ಲೋಟ್ ನಂಥ ರೆಡ್ ವೈನ್ ಮೆಲಟೋನಿನ್ ನಂಥ ಅಂಶಗಳನ್ನು ಒಳಗೊಂಡಿದೆ. ಮಲಗುವ ಮುನ್ನ ಮಿತವಾಗಿ ಇದನ್ನು ಸೇವಿಸುವುದರಿಂದ ದೇಹದ ಉಷ್ಣತೆ, Anti Ageing ಮತ್ತು ಕ್ಯಾನ್ಸರ್ ನಂಥ ಕೆಲವು ಖಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

ನಿದ್ದೆಯಲ್ಲಿ ದೇಹದ ಚಟುವಟಿಕೆಗಳನ್ನು ನಿಯಂತ್ರಿಸಿ ನಿದ್ದೆಯಿಂದ ನಮ್ಮ ಆರೋಗ್ಯಕ್ಕೆ ಲಾಭವಾಗುವಂತೆ ಮಾಡಲು ಈ ರೆಡ್ ವೈನ್ ಸಹಕರಿಸುತ್ತದೆ.

ದೀರ್ಘಾಯುಷ್ಯ

ದೀರ್ಘಾಯುಷ್ಯ

ರೆಡ್ ವೈನ್ ನಲ್ಲಿನ ರಿಸ್ವೆರಾಟ್ರೋಲ್ ಎಂಬ ಅಂಶ ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಲ್ಲದು ಎಂದು ಎನಿಮಲ್ ಸ್ಟಡೀಸ್ ನಿಂದ ತಿಳಿದು ಬಂದಿದೆ.

ಮಿದುಳಿನ ಆರೋಗ್ಯ

ಮಿದುಳಿನ ಆರೋಗ್ಯ

ರೆಡ್ ವೈನ್ ಸೇವನೆಯಿಂದ ರೆಡ್ ವೈನ್ ನಲ್ಲಿನ ರಿಸ್ವೆರಾಟ್ರೋಲ್ ಎಂಬ ಅಂಶ ಅಲ್ ಜೈಮರ್ ಹಾಗೂ ಬುದ್ದಿಮಾಂದ್ಯತ್ವವನ್ನು ಹೊಗಲಾಡಿಸುತ್ತದೆ. ಮತ್ತು ಮೆದುಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ಪ್ರಚೋದಿಸುತ್ತದೆ. ಬ್ರೈನ್ ಟ್ಯೂಮರ್ ನಂಥ ಖಾಯಿಲೆಗಳ ಸಾಧ್ಯತೆಗಳನ್ನು ಕಡಿಮೆಯಾಗಿಸುತ್ತದೆ.

ಕೊಲೆಸ್ಟ್ರಾಲ್ ಕೊಲ್ಲುತ್ತದೆ

ಕೊಲೆಸ್ಟ್ರಾಲ್ ಕೊಲ್ಲುತ್ತದೆ

ನಿತ್ಯ ರೆಡ್ ವೈನ್ ಸೇವನೆ ದೇಹದ ಕೊಲೆಸ್ಟ್ರಾಲ್ ನಿಯಂತ್ರಿಸುವುದಲ್ಲದೆ, ಕೊಲೆಸ್ಟ್ರಾಲ್ ಕಡಿಮೆಗೊಳಸಿ ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ಅದರೆ, ವೈನ್ ಸೇವನೆ ನಿಯಮಿತವಾಗಿರಬೇಕು. ಈ ಬಗ್ಗೆ ವೈದ್ಯರ ಸಲಹೆ ಅಗತ್ಯ.

ಹೃದಯದ ಆರೋಗ್ಯ

ಹೃದಯದ ಆರೋಗ್ಯ

ದಿನನಿತ್ಯ ಒಂದು ಗ್ಲಾಸ್ ರೆಡ್ ವೈನ್ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ ಹಾಗೂ ಹಾರ್ಟ್ ಅಟ್ಯಾಕ್ ಸಾಧ್ಯತೆಗಳನ್ನು ಹೋಗಲಾಡಿಸಿ ಕಾರ್ಡಿಯೋವ್ಯಾಸ್ಕುಲರ್ ನಂತಹ ಖಾಯಿಲೆಗಳಿಂದ ದೂರವಿರಿಸುತ್ತದೆ.

ಶ್ವಾಸಕೋಶ ಕ್ಯಾನ್ಸರ್ ತಡೆ

ಶ್ವಾಸಕೋಶ ಕ್ಯಾನ್ಸರ್ ತಡೆ

ಸ್ಪೇನಿನ ಸಾಟಿಯಾಗೋ-ಡಿ-ಕಾಂಪೋಸೆಲಾ ಎಂಬ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ ಪ್ರತಿ ದಿನ ಒಂದು ಗ್ಲಾಸ್ ರೆಡ್ ವೈನ್ ಸೇವನೆಯಿಂದ ಶೇ.13 ರಷ್ಟು ಶ್ವಾಸಕೋಶ ಕ್ಯಾನ್ಸರ್ ನಿಯಂತ್ರಿಸಬಹುದು. ಅಲ್ಲದೇ ಆಸ್ತಮಾದಂಥ ಖಾಯಿಲೆಯುಳ್ಳವರು ರೆಡ್ ವೈನ್ ಸೇವಿಸುವುದರಿಂದ ಉಸಿರಾಟದ ಅನೇಕ ತೊಂದರೆಗಳಿಂದ ದೂರವಿರಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Food Culture: Health Benefits Of Wine, History, Interesting Facts. Red Wine health benefits are many; it even helps to slim down your waistline. The beverage is gaining considerable attention day by day because of its health advantages. Drinking of red wine not only keeps your brain healthy but also your heart, your heart is precious!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more