ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ಬೆಸೆಯುವ 3ಡಿ ಕಾಸ್ಟಿಂಗ್

By ವನಿತ.ವೈ.ಜೈನ್
|
Google Oneindia Kannada News

ಬದುಕು ನಾವು ಅಂದು ಕೊಂಡಂತೆ ಸಾಗುವುದಿಲ್ಲ. ಬದುಕಿನಂತೆ ನಾವು ಸಾಗಬೇಕಾಗುತ್ತದೆ. ಆಗ ಕಳೆದುಹೋದುದರ ನೋವು, ನೆನಪುಗಳು ಹೆಜ್ಜೆ ಹೆಜ್ಜೆಗೂ ಇರುತ್ತದೆ. ಡಿಜಿಟಲ್ ಎನ್ನುವ ಮಾಯಾಲೋಕದಲ್ಲಿ ದಿನಗಳೆಯುವ ನಮಗೆ ಈ ಅನುಭವ ಆಗಿಯೇ ಇರುತ್ತದೆ.

ಹೌದಲ್ವ ನಮಗೆ ನಮ್ಮ ಬಾಲ್ಯದ ನೆನಪುಗಳು, ತಂದೆ ತಾಯಿ, ಪ್ರೀತಿಪಾತ್ರರ ಅಗಲಿಕೆಯ ನೋವುಗಳು ಸದಾ ಕಾಡುತ್ತಿರುತ್ತವೆ. ಆಗ ನಾವು ಅವರೊಂದಿಗಿರುವ ಯಾವುದೋ ಜಮಾನದ ಫೋಟೋ, ವಿಡಿಯೋಗಳನ್ನು ನೋಡಿ ಅಥವಾ ಒಂದು ಕಾಲ್ ಮಾಡಿ ಮಾತಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇವೆ. ಆದರೆ ಇವೆಲ್ಲಾ ಕ್ಷಣಕಾಲ ನೋವಿನ ಸೆಲೆ ಮರೆಮಾಚುವ ತಾತ್ಕಾಲಿಕ ಹಿಡಿತಗಳು ಅಷ್ಟೇ. ಆದರೆ ನಿಮ್ಮ ಎಲ್ಲಾ ಕಳೆದ ನೆನಪುಗಳಿಗೆ ಶಾಶ್ವತ ಸಂತಸದ ದೋಣಿಯಲ್ಲಿ ವಿಹರಿಸಲು 3ಡಿ ಕಾಸ್ಟಿಂಗ್ ಕಲೆ ನಿಮ್ಮನ್ನು ಕರೆಯುತ್ತಿದೆ.

ಹೌದು ನಮ್ಮ ಆತ್ಮೀಯರೊಂದಿಗೆ ಕಳೆದ ಕ್ಷಣಗಳ ನೆನಪುಗಳಿಗೆ ತಮ್ಮ ಹವ್ಯಾಸವಾದ 3ಡಿ ಕಾಸ್ಟಿಂಗ್ ಮೂಲಕ ಜೀವಂತಿಕೆಯ ಸ್ಪರ್ಶ ನೀಡುತ್ತಿದ್ದಾರೆ ಬೆಂಗಳೂರಿನವರು. ಆಧುನಿಕ ಕಲೆಯಾದ 3ಡಿ ಕಾಸ್ಟಿಂಗ್ ಮೂಲಕ ಜನರ ಭಾವನೆಗಳಿಗೆ, ಸಂತಸದ ಸ್ಪರ್ಶ ನೀಡುತ್ತಿರುವ ಮೂವರು ಸಹೋದರಿಯರು ಬೆಂಗಳೂರಿನಲ್ಲಿದ್ದಾರೆ. ಆದರೆ ಈ ಕಲೆಯ ಹೆಚ್ಚಿನ ಶ್ಲಾಘನೆ ಸಲ್ಲಬೇಕಾದುದು ಶಾಶ್ವತ ನಾಡಗಂಟಿ ಅವರಿಗೆ.[ಪರಿಸರಸ್ನೇಹಿ ಕಾಗದ ಗಣಪ : ಕಲಾವಿದ ಹುಸೇನಿ ಕೈಚಳಕ]

'ಹವ್ಯಾಸ ಬದುಕನ್ನು ಕಟ್ಟಿಕೊಡುತ್ತದೆ, ಅರಳಿಸುತ್ತದೆ' ಎಂಬುದಕ್ಕೆ ಸಾಕ್ಷಿಯಾಗಿ ನಿಂತಿರುವ ಶಾಶ್ವತ ನಾಡಗಂಟಿ ಅವರ ಕಾಯಕ ದೇಶ-ವಿದೇಶಗಳಲ್ಲೂ ಖ್ಯಾತಿ. ಎಂ.ಎ ಪೊಲಿಟಿಕಲ್ ಓದಿರುವ ಇವರು ಚಿತ್ರಕಲೆ ಸೇರಿದಂತೆ ನಾನಾ ಕಲೆಯಲ್ಲಿ ಪರಿಣಿತರಾದರೂ ಇವರು ತಮ್ಮ ಬದುಕನ್ನು ಅರಳಿಸಿಕೊಂಡಿದ್ದು, ಇದೀಗ ದುಬೈನಲ್ಲಿರುವ ಅಕ್ಷತಾ ಅವರಿಂದ. ಅಕ್ಷತಾ ಅವರಿಂದ ಹವ್ಯಾಸವಾಗಿ ಕಲಿತ 3ಡಿ ಕಾಸ್ಟಿಂಗ್ ಕಲೆ ಮೂಲಕ ನಮ್ಮವರ ಭಾವನೆಗಳು ಅಳಿಯದ ಅಚ್ಚುಗಳಾಗಿ ನಮ್ಮೊಂದಿಗಿರಲಿ ಎಂಬ ಹಂಬಲ ಇವರದ್ದು.

ಏನಿದು 3ಡಿ ಕಾಸ್ಟಿಂಗ್ ಕಲೆ?

ಏನಿದು 3ಡಿ ಕಾಸ್ಟಿಂಗ್ ಕಲೆ?

ಮಣ್ಣಿನ ಮೂಲಕ ಮಾಡಿದ ರೂಪ, ಆಕಾರಗಳು ಕೇವಲ ಒಂದೋ, ಎರಡೋ ವರ್ಷ ಸುಂದರವಾಗಿ ಗೋಚರಿಸುತ್ತವೆ. ನಂತರ ಅದು ಇನ್ನೊಂದು ಬಣ್ಣ ಪಡೆದೋ, ಹಾಳಾಗಿಯೋ, ಒಡೆದೋ ನೈಜ ಸ್ವರೂಪ ನಾಶವಾಗುತ್ತದೆ. ಆಮೇಲೆ ಮತ್ತೆ ಅದೇ ಕಾಣದ ನೆನಪುಗಳೊಂದಿಗೆ ಸಾಗಬೇಕಾಗುತ್ತದೆ. ಪುನಃ ಬೇಸರದ ಛಾಯೆ. ಆದರೆ 3ಡಿ ಕಾಸ್ಟಿಂಗ್ ಮೂಲಕ ಮಾಡಿರುವ ಆಕಾರಗಳು ಜೀವಂತ ಹಾಗೂ ಶಾಶ್ವತ.

3ಡಿ ಕಾಸ್ಟಿಂಗ್ ಕಲೆ ಕಳೆದ ನೆನಪನ್ನು ಹೇಗೆ ಬೆಸೆಯುತ್ತೆ?

3ಡಿ ಕಾಸ್ಟಿಂಗ್ ಕಲೆ ಕಳೆದ ನೆನಪನ್ನು ಹೇಗೆ ಬೆಸೆಯುತ್ತೆ?

ನಾನಾ ಆಕಾರಗಳಿಗಿಂತ ಹೆಚ್ಚಾಗಿ ಮಾನವರ ಭಾವನೆಗಳಿಗೆ ಬೆಲೆ ಕೊಡುವ ಶಾಶ್ವತ ಅವರು ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರವರ ಕೈಕಾಲುಗಳನ್ನು, ಅವರು ಹಾಕುವ ಒಡವೆಗಳನ್ನು ಯಥಾವತ್ತಾಗಿ ಮಾಡಿಕೊಡುವಲ್ಲಿ ಸಿದ್ದಹಸ್ತರು. ಇವುಗಳನ್ನು ನಾವು ಬದುಕುವವರೆಗೂ ನಮ್ಮೊಂದಿಗೆ ಇರಿಸಿಕೊಳ್ಳಬಹುದು. ನಮ್ಮ ಭಾವನೆಗಳ ರೀತಿ. ಇವುಗಳ ಜೊತೆಗೆ ಸ್ನೇಹ ಬಿಂಬ, ಬೆಡ್ ಲೈಟ್ ಸೇರಿದಂತೆ ನಾನಾ ಆಕಾರಗಳಿಗೆ 3ಡಿ ಕಾಸ್ಟಿಂಗ್ ಮೂಲಕ ರೂಪ ಕೊಡುತ್ತಾರೆ.

ಏನೆಲ್ಲಾ ಆಕೃತಿಗಳನ್ನು ಮಾಡಬಹುದು?

ಏನೆಲ್ಲಾ ಆಕೃತಿಗಳನ್ನು ಮಾಡಬಹುದು?

ಸಣ್ಣ ಮಕ್ಕಳ ಅಂದರೆ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನ ಮಕ್ಕಳ ಹಾಗೂ ತಂದೆ-ತಾಯಿಯರ, ಪ್ರೀತಿಪಾತ್ರರ, ಸ್ನೇಹಿತರ, ದಂಪತಿಗಳ, ಕೈಕಾಲುಗಳು, ಅವರು ಧರಿಸುವ ಒಡವೆಗಳು, ನೀವು ತುಂಬಾ ಇಷ್ಟಪಡುವ ವಸ್ತಗಳು, ಬೆಡ್ ಲೈಟ್ ಗಳು ಸೇರಿದಂತೆ ಎಲ್ಲಾ ಆಕಾರಗಳನ್ನು ಮಾಡಿ ಅದು ಹಾಳಾಗದಂತೆ ಫ್ರೇಮ್ ಹಾಕಿ ಕೊಡುತ್ತಾರೆ.

ಶಾಶ್ವತ ಅವರಿಗೆ ಎಲ್ಲೆಲ್ಲಿ ಗ್ರಾಹಕರಿದ್ದಾರೆ?

ಶಾಶ್ವತ ಅವರಿಗೆ ಎಲ್ಲೆಲ್ಲಿ ಗ್ರಾಹಕರಿದ್ದಾರೆ?

ಕಲೆಗಳ ಆಗರವಾದ ಭಾರತ, ಕರ್ನಾಟಕ, ಬೆಂಗಳೂರು, ತಮಿಳುನಾಡು, ಕೊಲ್ಕತ್ತಾ, ನವದೆಹಲಿ, ನೇಪಾಳ, ಕೃಷ್ಣಗಿರಿ, ಬಾಂಬೆ, ಮಡಿಕೇರಿ ಸೇರಿದಂತೆ ನಾನಾ ಕಡೆ ಇವರಿಗೆ ಗ್ರಾಹಕರಿದ್ದಾರೆ.

ಬೆಂಗಳೂರಿನ ಯಾವ ಯಾವ ಸಂಸ್ಥೆ, ಆಸ್ಪತ್ರೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ?

ಬೆಂಗಳೂರಿನ ಯಾವ ಯಾವ ಸಂಸ್ಥೆ, ಆಸ್ಪತ್ರೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ?

ಕೈಕಾಲುಗಳು ಎಂದಾಕ್ಷಣ ಚರ್ಮದ ಸಮಸ್ಯೆ ಬಗ್ಗೆ ಚಿಂತಿಸುವುದೇ ಜಾಸ್ತಿ. ಇದರಿಂದ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ಹೇಳುವ ಶಾಶ್ವತಿ ಅವರು ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಟೈಅಪ್ ಮಾಡಿಕೊಂಡಿದ್ದಾರೆ. ಅವುಗಳೆಂದರೆ, ರಾಜಾಜಿ ನಗರದ ಬಳ ಇರುವ ಫೋರ್ಟಿಸ್, ಕ್ಲೌಡ್ ನೈನ್, ಬ್ಲೂಸ್ ಆಂಡ್ ಪಿಂಕ್, ಪ್ಯಾಶ್ವಿನ್. ಕಾಂ

3ಡಿ ಆಕೃತಿಗಳು ಮಾಡಲು ಎಷ್ಟು ಸಮಯ ಹಿಡಿಯುತ್ತದೆ?

3ಡಿ ಆಕೃತಿಗಳು ಮಾಡಲು ಎಷ್ಟು ಸಮಯ ಹಿಡಿಯುತ್ತದೆ?

3ಡಿ ಆಕೃತಿಗಳು ಮಾಡುವ ಪ್ರತಿಯೊಂದು ವಸ್ತುಗಳನ್ನು ಬೆಲ್ಜಿಯಂನಿಂದ ತರಿಸಿಕೊಳ್ಳುವ ಶಾಶ್ವತಿಯವರು ಮೌಲ್ಡ್ ಮಾಡುವುದರಿಂದ ಹಿಡಿದು, ಪೇಯ್ಟಿಂಗ್ ಇನ್ನಿತರ ಕೆಲಸಗಳು ಸೇರಿದಂತೆ ಒಂದು ಆಕೃತಿಯನ್ನು ಸಂಪೂರ್ಣಗೊಳಿಸಲು 12 ರಿಂದ 15 ದಿನಗಳು ಸಾಕಾಗುತ್ತದೆ ಎನ್ನುತ್ತಾರೆ.

3ಡಿ ಮಾಡಲ್ ಮಾಡಲು ತಗಲುವ ವೆಚ್ಚ?

3ಡಿ ಮಾಡಲ್ ಮಾಡಲು ತಗಲುವ ವೆಚ್ಚ?

3ಡಿ ಮಾಡಲ್ ಮಾಡಲು ಬಹಳ ತಾಳ್ಮೆ ಬೇಕೆನ್ನುವ ಶಾಶ್ವತಿ ಅವರು ವಯಸ್ಸಿಗೆ, ಆಕೃತಿಗೆ ಅನುಸಾರವಾಗಿ ಬೆಲೆ ನಿಗದಿಮಾಡುತ್ತಾರೆ. ನಮಗೆ ಅನುಕೂಲವಾಗುವ ಬೆಲೆಯಲ್ಲಿಯೇ ನಮ್ಮವರ ಭಾವನೆಗಳು, ನಮಗೆ ದಕ್ಕುತ್ತದೆ.

ಶಾಶ್ವತ ಅವರ ಕೆಲಸದ ಸಮಯ ಏನು?

ಶಾಶ್ವತ ಅವರ ಕೆಲಸದ ಸಮಯ ಏನು?

ಶಾಶ್ವತ ಅವರು ಕೆಲಸಕ್ಕೆ ಇಂತಹದ್ದೇ ಸಮಯ ಎಂದು ನಿಗದಿಪಡಿಸಿಕೊಂಡಿಲ್ಲ. ಮನೆಗೂ ತೆರಳಿ 3ಡಿ ಕಾಸ್ಟಿಂಗ್ ಮಾಡೆಲ್ ಗಳನ್ನು ಮಾಡಿಕೊಡುತ್ತಾರೆ. ನೀವು ಹೇಳಿದ ಆಕೃತಿಗಳು 15 ದಿನದೊಳಗೆ ನಿಮ್ಮ ಕೈ ಸೇರುತ್ತದೆ.

ಯಾರಿದು ಶಾಶ್ವತ ನಾಡಗಂಟಿ?

ಯಾರಿದು ಶಾಶ್ವತ ನಾಡಗಂಟಿ?

ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಾಡಗಂಟಿಯವರು. ಶಾಶ್ವತ ಅವರಿಗೆ ಪೂಜಿತ, ಅಕ್ಷತಾ, ಸಿಂಧು ಎಂಬ ಅಕ್ಕತಂಗಿಯರಿದ್ದಾರೆ. ಪ್ರಸ್ತುತ ಮುಂಬೈನಲ್ಲಿರುವ ಅಕ್ಷತಾ ಅವರು ಮಾಡುತ್ತಿರುವ 3ಡಿ ಕಲೆಯಲ್ಲಿ ಸಹಾಯ ಮಾಡುತ್ತಿದ್ದ ಶಾಶ್ವತ ಅವರು ಇದೀಗ ತಾವೇ ಅದರ ಜವಾಬ್ದಾರಿ ತೆಗೆದುಕೊಂಡು 3ಡಿ ಕಾಸ್ಟಿಂಗ್ ಕಲೆಯನ್ನು ಮುಂದುವರೆಸುತ್ತಿದ್ದಾರೆ.

ಶಾಶ್ವತ ಅವರು ಹೇಳುವ ಮಾತುಗಳೇನು?

ಶಾಶ್ವತ ಅವರು ಹೇಳುವ ಮಾತುಗಳೇನು?

ದಿನನಿತ್ಯದ ಪ್ರಪಂಚದ ಬದುಕಿಗೆ ನಾವು ಒಗ್ಗಿಕೊಳ್ಳಲೇಬೇಕು. ಸಣ್ಣ ವಯಸ್ಸಿನಲ್ಲಿ ನಾವು ಒಂದು ಕಡೆ ನೆಲೆ ಕಂಡುಕೊಂಡಿದ್ದರೆ, ಬೆಳೆದು ದೊಡ್ಡವರಾದಾಗ ನಮ್ಮದೇ ಗುರಿಗಳೊಂದಿಗೆ ಇನ್ನೆಲ್ಲೋ ಬದುಕಿನ ಬಂಡಿ ಎಳೆಯಲು ಮುಂದಡಿ ಇಡುತ್ತೇವೆ. ಆಗ ಅಗಲಿಕೆ ಅನಿವಾರ್ಯ ನೆನಪೊಂದೇ ಶಾಶ್ವತ ಎಂಬ ಮಾತುಗಳು ನಮ್ಮ ಬೆನ್ನೊಂದಿಗೆ ಇದ್ದು, ಕ್ಷಣಕಾಲ ಸಾಂತ್ವಾನ ಸಿಗಬಹುದು. ಫೋಟೋಗಳಿದ್ದರೂ ಅವುಗಳಿಗಿಂತ ಭಿನ್ನವಾದ ಸ್ಪರ್ಶತೆಯ ಭಾವ ಕಂಡುಕೊಳ್ಳುವುದು ಕಷ್ಟಸಾಧ್ಯ. ನೀವು ನೆನಪುಗಳೊಂದಿಗೆ, ನಿಮ್ಮಿಷ್ಟದವರು ನಮ್ಮೊಂದಿಗೆ ಸದಾ ಇದ್ದಾರೆ ಎಂಬ ಭಾವ ತಾಳಬೇಕಾದರೆ ನಮ್ಮ ೩ಡಿ ಕಾಸ್ಟಿಂಗ್ ಕಲೆ ಅದನ್ನು ಮಾಡಿಕೊಡುತ್ತದೆ.

ಶಾಶ್ವತ ಅವರನ್ನು ಸಂಪರ್ಕಿಸುವುದು ಹೇಗೆ?

ಶಾಶ್ವತ ಅವರನ್ನು ಸಂಪರ್ಕಿಸುವುದು ಹೇಗೆ?

ನೀವು ನಿಮ್ಮ ನೆಚ್ಚಿನವರ ಜೊತೆಗೆ ನಿರಂತರ ಪಯಣ ಬೇಕಾದರೆ ಶಾಶ್ವತ ಅವರ 3ಡಿ ಕಾಸ್ಟಿಂಗ್ ಎಂಬ ಫೇಸ್ ಬುಕ್ ಪೇಜ್ ಇದೆ. ಅಲ್ಲದೆ [email protected], 09900452580, 9880520863, 80 95572962, 9481934565,
ಸಂಪರ್ಕಿಸಬಹುದು

English summary
Life is beautiful make it sweet with lovely memories. 3d casting captures memories of the children, elders, friends, wife, husband through the size of the hands and feet. Babies grow fast small hands and feet are precious memory. Do you want 3d casting models contact Shashwatha Nadaganty, Bangalore, akshatha.ramesh@gmail.com 09900452580, 9880520863, 80 95572962, 9481934565,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X