• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ನುಡಿಸಿರಿ : ಡಾ. ಮೋಹನ್ ಆಳ್ವ ಸಂದರ್ಶನ

By ರವಿರಾಜ್ ವಳಲಂಬೆ, ಉಡುಪಿ
|

Dr Mohan Alva interview
ಯಾವುದೇ ಸರಕಾರಿ ಪ್ರಾಯೋಜಿತ ಸಾಹಿತ್ಯ ಸಮ್ಮೇಳನ ಇರಲಿ, ಪ್ರತೀಬಾರಿಯೂ ಅಲ್ಲಿ ಅಪಸ್ವರದ್ದೇ ಸದ್ದು. ಹಾಗೆಯೇ ಸಮ್ಮೇಳನ ದಿನ ಹತ್ತಿರವಾಗುತ್ತಿದ್ದಂತೆ ಯುದ್ಧಕಾಲೇ ಶಸ್ತ್ರಾಭ್ಯಾಸ ನಡೆಸುವುದನ್ನೂ ನೋಡುತ್ತೇವೆ. ಆದರೆ ನುಡಿಸಿರಿ ಎಂಬ ಪರಿಕಲ್ಪನೆಯ ಮೂಲಕ ಸರಕಾರಿ ಸಾಹಿತ್ಯ ಸಮ್ಮೇಳನಕ್ಕೆ ಪರ‍್ಯಾಯವಾಗಿ ಮತ್ತು ಮಾದರಿಯಾಗಿ ಒಂದು ಅರ್ಥ ತಂದುಕೊಟ್ಟವರು ಮೂಡುಬಿದರೆಯ ಡಾ. ಮೋಹನ್ ಆಳ್ವ.

ಸಮಯ ಪ್ರಜ್ಞೆ, ಶಿಸ್ತಿನ ಜೊತೆಗೆ ಅಚ್ಚುಕಟ್ಟು ಎಂಬ ಶಬ್ಭಕ್ಕೆ ಅನ್ವರ್ಥವಾಗಿ ಸಮ್ಮೇಳನ ನಡೆಸಿ ತೋರಿಸಿದವರು. ಹಾಗೆಯೇ ಆಳ್ವಾಸ್ ವಿರಾಸತ್ ನಡೆಸುವ ಮೂಲಕ ಕೇವಲ ಜೈನ ಕಾಶಿಯಾಗಿದ್ದ ಮೂಡುಬಿದರೆಯನ್ನು ಅಂತಾರಾಷ್ಟ್ರೀಯ ಭೂಪಟದಲ್ಲಿ ಕಾಣುವಂತೆ ಮಾಡಿದ್ದು ಇದೇ ಆಳ್ವರ ವಿಭಿನ್ನ ವ್ಯಕ್ತಿತ್ವ ಮತ್ತು ಆಸಕ್ತಿಯ ಫಲ.

ಈಗ, ಆಳ್ವರು ನೆಟ್ಟ ನುಡಿಸಿರಿ ಎಂಬ ಮರ ಬೃಹದಾಕಾರವಾಗಿ ಬೆಳೆದಿದೆ. ಏಕ ವ್ಯಕ್ತಿಯಿಂದ ಇಷ್ಟೆಲ್ಲಾ ಮಾಡಲು ಸಾಧ್ಯವೇ ಎಂದು ಇಡೀ ಕನ್ನಡ ಸಾಹಿತ್ಯ ಲೋಕ ಮೂಗಿನಮೇಲೆ ಬೆರಳಿಡುವಂತೆ ಮಾಡಿದೆ. 'ಆಳ್ವರ ನುಡಿಸಿರಿ'ಯೆಂಬ ಸಾಹಿತ್ಯ ಯಾತ್ರೆಗೆ ಈಗ 10ನೇ ವರ್ಷ. ಹಾಗೆಯೇ ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಸಾಂಸ್ಕೃತಿಕ ಜಗತ್ತಿನ ಅನುಭೂತಿಯ ಪರಿಚಯ ಮಡಿಕೊಟ್ಟ ಸಾಂಸ್ಕೃತಿಕ ಹಬ್ಬ 'ಆಳ್ವಾಸ್ ವಿರಾಸತ್‌'ಗೆ 20ರ ಸಂಭ್ರಮ.

ಈವರೆಗೆ ಪ್ರತ್ಯೇಕವಾಗಿ ನಡೆಯುತ್ತಿದ್ದ ಸಾಹಿತ್ಯ ಸಾಂಸ್ಕೃತಿಕ ಹಬ್ಬವನ್ನು ಈ ಬಾರಿ 'ವಿಶ್ವ ನುಡಿಸಿರಿ ವಿರಾಸತ್' ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕನ್ನಡ ಸಾರಸ್ವತ ಜಗತ್ತಿಗೆ ಮಾದರಿ ಮತ್ತು ನ ಭೂತೋ ನ ಭವಿಷ್ಯತಿ ಅನ್ನೋ ರೀತಿಯಲ್ಲಿ ಮಾಡಲು ಡಾ.ಮೋಹನ್ ಆಳ್ವರು ಸಿದ್ದತೆ ನಡೆಸಿದ್ದಾರೆ. ಈ ಸಮ್ಮೇಳನದ ಅಂದಾಜು ಖರ್ಚು ಎಷ್ಟು ಗೊತ್ತಾ? ಬರೋಬ್ಬರಿ 15 ಕೋಟಿ ರು. ಸಮ್ಮೇಳನ ಸಿದ್ಧತೆ ಕುರಿತಂತೆ ಒನ್ಇಂಡಿಯಾ ಕನ್ನಡಕ್ಕೆ ಆಳ್ವರು ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದ ಮೆಲುಕು ಇಲ್ಲಿದೆ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr Mohan Alva has set his eyes on Vishwa Nudisiri Virasat, mega cultural and literary event from December 19-22, 2013. He has been conducting Alva's Nudisiri in Moodbirdri for 10 years. Raviraj Valalambe brings out more from Mohan Alva in an exclusive interview for Oneindia Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more