ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೆತ್ತಲೆ ಹರಕೆ' ಕನ್ನಡ ನಾಟಕ ವಿಮರ್ಶೆ

By * ಮಾಲತಿ ಎ., ಬೆಂಗಳೂರು
|
Google Oneindia Kannada News

A scene from Kannada Play Bettale Harake
'ಸಿರಿ ಸಂಭ್ರಮ' ತಂಡ ಕಟ್ಟಿ ಹರ್ಷ ಹೆಗಡೆರವರು ರಂಗಭೂಮಿಯಲ್ಲಿ ತಮ್ಮ ಚೊಚ್ಚಲ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್ 21ರಂದು ಪ್ರದರ್ಶನವಾದ 'ಬೆತ್ತಲೆ ಹರಕೆ' ನಾಟಕದಲ್ಲಿನ ಪಾತ್ರಗಳ ಹಂಚಿಕೆ, ವೇದಿಕೆಯ ವಿನ್ಯಾಸ, ಬೆಳಕಿನ ಸಂಯೋಜನೆ, ವಸ್ತ್ರ ವಿನ್ಯಾಸ, ಹಿನ್ನೆಲೆ ಗಾಯನ ಹೀಗೆ ಎಲ್ಲ ವಿಭಾಗಗಳಲ್ಲಿಯೂ ವೃತ್ತಿಪರತೆ ಮೆರೆದಿದ್ದಾರೆ. ದೃಶ್ಯದಿಂದ ದೃಶ್ಯಕ್ಕೆ ಅಭಿನಯದಲ್ಲಿನ ಹಾವಭಾವಗಳ ಬದಲಾವಣೆ ಮೈಗೂಡಿಸಿಕೊಂಡಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಬಹುದು. ಅಲ್ಲದೆ ಭಾಷೆಯ ಮೇಲೆ ಇನ್ನೂ ಹೆಚ್ಚಿನ ಪ್ರೌಢಿಮೆ ಸಾಧಿಸಬೇಕಾಗಿದೆ, ಇಲ್ಲದಿದ್ದಲ್ಲಿ 'ದಿವಸ್ಪತಿ ಹೆಗಡೆಯವರು BES ಕಾಲೇಜಿನ ಪ್ರಾಂಶುಪಾಲರಾಗಿ 20 ವರ್ಷಗಳ ಕಾಲ ವ್ಯಾಸಂಗ ಮಾಡಿದ್ದರು' ಎಂಬಂತಹ ಆಭಾಸಗಳು ಮರುಕಳಿಸಬಹುದು.

ನಾಟಕದ ಕಥಾವಸ್ತುವಿನ ಬಗ್ಗೆ ಹೇಳುವುದಾದರೆ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಆಚರಣೆಯಲ್ಲಿದ್ದ ಪದ್ಧತಿ/ನಂಬಿಕೆ/ಮೂಢನಂಬಿಕೆ. ತನ್ನ/ಮನೆಯವರ ಇಷ್ಟಾರ್ಥಸಿದ್ಧಿಗಾಗಿ ಆ ಮನೆಯ ಒಬ್ಬ ಹೆಣ್ಣು ಮಗಳು ಗ್ರಾಮದೇವತೆಯ ಜಾತ್ರೆಯಲ್ಲಿ ನಡೆಯುವ ಬೆತ್ತಲೆ ಹರಕೆ- ನಾಟಕದ ಕಥಾವಸ್ತು.

ಈ ಆಚರಣೆಯನ್ನು ಬೆಳಕಿಗೆ ತಂದದ್ದು 1985ರಲ್ಲಿ. ಅದರ ನಿಷೇಧಕ್ಕೆ ಕಾರಣರಾದ ದಿವಸ್ಪತಿ ಹೆಗಡೆಯವರು ಬರೆದಿರುವ ಕೃತಿಯನ್ನು ರಂಗಭೂಮಿಯ ಮೇಲೆ ಅವರ ಮೊಮ್ಮಗಳೇ ತನ್ನ ರಂಗಪ್ರವೇಶಕ್ಕೆ ಆರಿಸಿರುವುದು ಅವರ 'ದಾದಾ' 'ಹರ್ಷ' ಪಡುವ ಸಂಗತಿ. ಇಂತಹ ಸೂಕ್ಷ್ಮ ವಸ್ತುವನ್ನು ಸ್ವಾರಸ್ಯಕರವಾಗಿ ಪ್ರಸ್ತುತಪಡಿಸಿದ್ದು ಹರ್ಷರ ಹೆಗ್ಗಳಿಕೆಯೇ ಸರಿ.

ಈಗ ಈ ಆಚರಣೆ ಗ್ರಾಮಗಳಲ್ಲಿ ನಿಂತುಹೋಗಿದೆಯಾದರೂ ಕಾವತ್ತಾರ್ ರವರು ಹೇಳಿದಂತೆ ಜಾಹೀರಾತು ಸಿನೆಮಾಗಳಲ್ಲಿ ಮರುಹುಟ್ಟು ಪಡೆದಿರುವುದು ಸತ್ಯ. ಹಾಗೆಯೇ ಆ ಪ್ರದೇಶಗಳಲ್ಲಿನ ಕೆಲ ದುಷ್ಟರು ತಮ್ಮ ತೃಷೆಗಾಗಿ ಈ ಆಚರಣೆಯ ಪೋಷಕರಾಗಿದ್ದರು. ಈಗ ಅವರು ನಮ್ಮ ಸದನದಲ್ಲೂ ಇದ್ದಾರೆ ಎಂಬುದು ಖೇದಪಡುವ ವಿಷಯ. ಪ್ರಜೆಗಳ ನಾಯಕನಾಗುವವನು ಯಾವ ರೀತಿ ಇರಬೇಕು ಮತ್ತು ಹಾಗಿಲ್ಲದಾಗ ಆಗುವ ಅನಾಹುತಗಳನ್ನು ಮನಮುಟ್ಟುವಂತೆ ಪ್ರತಿಬಿಂಬಿಸಿದ್ದಾರೆ. ಇದಕ್ಕೆ ಕನ್ನಡಿಗರ ಪ್ರೋತ್ಸಾಹವಿರಲೆಂದು ಹಾರೈಸುತ್ತೇನೆ.

ನಾಟಕ ಮಾರ್ಚ್ 21, 22 ಮತ್ತು 24ರಂದು ಪ್ರದರ್ಶನಗೊಳ್ಳುತ್ತಿದೆ.
ಸ್ಥಳ : ಕೆ.ಹೆಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಹಿಂಭಾಗ, ಹನುಮಂತನಗರ, ಬೆಂಗಳೂರು.
ಸಮಯ : 6.30

English summary
Bettale Harake : Kannada play review by Malathi A.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X