• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿನಿಮಾ ಪೋಸ್ಟರಿನಿಂದ ಪ್ರೇರಿತವಾದ ಸತ್ಯ ಕಥೆ

By * ಜಯಶ್ರೀ
|

ಕೆಲವೊಂದು ಕಾರಣಗಳು ಸಿಲ್ಲಿ ಅನ್ನಿಸಬಹುದು. ಆದರೆ ಹಲಬಾರಿ ಅವು ವಾಸ್ತವವಾಗಿರುತ್ತವೆ. ಒಂದು ಸಾಮಾನ್ಯ ಸಂಗತಿ ರಾಯರ ಮಠದ ಸ್ಥಾಪನೆ ಮಾಡಲು ಕಾರಣವಾಯಿತು ಅಂದ್ರೆ ನಂಬುವುದಕ್ಕೆ ಸಾಧ್ಯವೇ? ಇಂತಹ ವಿಶೇಷವಾದ ಕೆಲ್ಸಕ್ಕೆ ಪ್ರೇರಕವಾದದ್ದು ಒಂದು ಸಿನಿಮಾ ಪೋಸ್ಟರ್ ಅಂದರೆ ನೀವು ನಂಬಲೇಬೇಕು. ಆ ಸತ್ಯಕಥೆ ಕೆಳಗಿನಂತಿದೆ ಓದಿರಿ.

1979ರಲ್ಲಿ ನಾ ನಿನ್ನ ಬಿಡಲಾರೆ ಸಿನಿಮಾ ಬಿಡುಗಡೆ ಆಗಿತ್ತು. ಅಲ್ಲಿ ರಾಯರ ದೊಡ್ದ ಪೋಸ್ಟರ್ ಅಂಟಿಸಿತ್ತು. ದೇವ್ರು ದಿಂಡರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಅನಂತ ಸ್ವಾಮಿ ಚಿಕ್ಕ ವಯಸ್ಸಿನಲ್ಲಿ ಬ್ಯುಸಿನೆಸ್ ನತ್ತ ಗಮನಹರಿಸಿ ಬೆಳೆದವರು. ಲಕ್ಷಾಂತರ ರು.ಗಳ ಆಸ್ತಿ ಪಾಸ್ತಿಯು ಜೊತೆಯಾಯಿತು. ರೋಟರಿ ಕ್ಲಬ್ ನ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದರು. ಜಪಾನ್, ಹಾಂಕಾಂಗ್ ದೇಶಗಳಲ್ಲಿ ಸುತ್ತಾಡುತ್ತ ಬದುಕುತ್ತಿದ್ದಾಗ ಅವರ ಬದುಕಲ್ಲಿ ಇಂತಹ ಮಹತ್ತರವಾದ ಪರಿವರ್ತನೆ ಆಗಲು ಸಿಲ್ಲಿ ಕಾರಣ ಸಾಧ್ಯ ಆಯ್ತು. ಅನಂತ ಸ್ವಾಮಿ ಎನ್ನುವವರ ಮನದಲ್ಲಿ ಅವ್ಯಕ್ತ ಪುಳಕದ ಅಲೆ ಎಬ್ಬಿಸಿತು. ಸರಿ ಅವರು ಒಂದು ರಾಯರ ಫೋಟೋ ತಂದು ಪೂಜಿಸಿಸುವ, ಭಜನೆ ಮಾಡುವ ಹಾಗೂ ಪ್ರಸಾದ ಹಂಚುವ ಕಾಯಕದಲ್ಲಿ ಮಗ್ನರಾದರು. ಅದು ಕ್ರಮೇಣ ಅಕ್ನೂರ್ ರಾಯರ ಮಠದ ಹುಟ್ಟಿಗೆ ಕಾರಣವಾಯಿತು.

ಒಮ್ಮೆ ಅವರು ಫೋಟೋ ಇಟ್ಟಿದ್ದ ಸ್ಥಳದ ಮೇಲಿಂದ ಮಣ್ಣು ಉದುರಿತು. ಅದನ್ನು ಮೃತ್ತಿಕೆ ಎಂದು ಸೇವಿಸಿದರಂತೆ. ಅಂದು ರಾತ್ರಿ ಅವರ ಕನಸಲ್ಲಿ ರಾಯರು ಬಂದು ತಾವು ಇಲ್ಲಿ ನೆಲೆಸುವುದಾಗಿ ಹೇಳಿದರು. ಆ ಕನಸಿನಿಂದ ಪ್ರೇರೇಪಿತರಾದ ಅನಂತ ಸ್ವಾಮಿಗಳು ತಮ್ಮ ಮನೆಯನ್ನು ಮಠ ಮಾಡಿ ಅಲ್ಲಿ ರಾಯರ ಬೃಂದಾವನ ಸ್ಥಾಪಿಸಿದರು. 1980ರ ಆಗಸ್ಟ್ ತಿಂಗಳಲ್ಲಿ ಅಕ್ನೂರ್ ರಾಯರ ಮಠ ಸ್ಥಾಪಿತವಾಯಿತು. ಇದು ಗಾಂಧಿ ಬಜಾರ್ ಸಮೀಪ ಇದೆ. ಇದನ್ನು ಅಕ್ನೂರ್ ಅನಂತ ಸ್ವಾಮಿ ರಾವ್ ಅವರು ಸ್ಥಾಪನೆ ಮಾಡಿದರು. ತಮ್ಮ ಸಕಲ ಸಂಪತ್ತನ್ನು ರಾಯರ ಸೇವೆಗೆ ಮುಡಿಪಾಗಿಟ್ಟರು.

ಇದೆ ರೀತಿಯ ಅಕ್ನೂರ್ ಮಠ ಯುಎಸ್ ದೇಶದ ನ್ಯೂ ಜೆರ್ಸಿಯಲ್ಲಿದೆ. ಇದನ್ನು 1983ರಲ್ಲಿ ಸ್ಥಾಪಿಸಿದ್ದು ಸಹ ಅವರೇ. ಇವರು ಆ ಸಮಯದಲ್ಲಿ ಧರ್ಮ ಪ್ರಚಾರಕ್ಕೆಂದು ಲಂಡನ್ ಗೆ ಹೋದಾಗ ಅಲ್ಲಿನ ಪ್ರಸಿದ್ಧ ಪತ್ರಿಕೆ ಒಂದರಲ್ಲಿ ಬಂದ ಸಂದರ್ಶನವು ಅಮೆರಿಕೆಯ ಭಾರತೀಯರಿಗೆ ತಲುಪಿತು. ಅವರ ಒತ್ತಾಯದಿಂದ ನ್ಯೂ ಜೆರ್ಸಿಯಲ್ಲಿ ಸಹ ಗಾಂಧಿ ಬಜಾರಿನಲ್ಲಿ ಇರುವಂತಹ ರಾಯರ ಬೃಂದಾವನ ಸ್ಥಾಪನೆ ಮಾಡಿದರಂತೆ ಅನಂತ ಸ್ವಾಮಿಗಳು.

ಅನಂತ ಸ್ವಾಮಿಗಳ ನಂತರ ಅವರ ಮಗ ಅಕ್ನೂರ್ ಕೃಷ್ಣಮೂರ್ತಿಗಳು(ಕಿಟ್ಟಣ್ಣ) Crompton Greavesನಲ್ಲಿ ಮ್ಯಾನೇಜರ್ ಆಗಿದ್ದವರು, ವೃತ್ತಿಗೆ ಬೈ ಹೇಳಿ ಈ ಮಠದ ಹೊಣೆ ಹೊತ್ತರು. ಅನಂತಸ್ವಾಮಿಗಳಂತೆ ಅದರ ಸರ್ವತೋಮುಖವಾದ ಬೆಳವಣಿಗೆಯತ್ತ ಗಮನ ಹರಿಸಿದ್ದಾರೆ. ರವಿ ಆಚಾರ್ ಮತ್ತು ಲೋಹಿತ್ ಆಚಾರ್ ಮಠದ ಪ್ರಮುಖ ಅರ್ಚಕರು. ಶ್ರೀ ಮಠಕ್ಕೆ ಪುತ್ತಿಗೆ ಶ್ರೀಗಳು ಸೇರಿದಂತೆ ಪೇಜಾವರ, ಭಂಡಾರ್ಕರ, ಕೂಡ್ಲಿ, ಫಲಿಮಾರು, ತಂಬಳ್ಳಿ ಶ್ರೀಗಳು ಮಠಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಮಧ್ವನವಮಿಯ ಪ್ರಯುಕ್ತ ಪುತ್ತಿಗೆ ಮಠದ ಶ್ರೀ ಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಆಗಮಿಸಿದ್ದರು. ಅಲ್ಲಿಗೆ ಬಂದಿದ್ದ ವಿದ್ವಾಂಸರಿಗೆ ಪುತ್ತಿಗೆ ಮಠದ ಪರವಾಗಿ ಸನ್ಮಾನಿಸಿ ಗೌರವಿಸಿದ್ದರು.

ಉಡುಪಿಯ ಶ್ರೀ ಕೃಷ್ಣ ಒಂದು ಜಾತಿ-ವರ್ಗಕ್ಕೆ ಯಾವ ರೀತಿಯಲ್ಲಿ ಸೀಮಿತ ಅಲ್ಲವೋ ಅದೇ ಬಗೆಯಲ್ಲಿ ರಾಘವೇಂದ್ರ ಗುರುಗಳು ಕೇವಲ ಒಂದು ಜಾತಿಗೆ ಪರಿಮಿತವಾಗಿರುವ ಗುರುಗಳಲ್ಲ. ಆದರೆ ಮಠಗಳ ವಿಷಯಕ್ಕೆ ಬರುವುದಾದರೆ ಅದರ ಬಗ್ಗೆ ಸಾಮಾನ್ಯರ ಅದರಲ್ಲೂ ಯುವ ಜನಾಂಗಕ್ಕೆ ಭಿನಾಭಿಪ್ರಾಯವಿದೆ. ಅತಿಯಾದ ಮಡಿ, ಶುದ್ಧತೆಯ ಕೊರತೆ, ಹೀಗೆ ಪಟ್ಟಿ ದೊಡ್ಡದಾಗುತ್ತದೆ. ಇದು ಮಠದ ಕಡೆ ಅವರು ಗಮನ ಹರಿಸದೆ ಇರುವ ಕಾರಣಗಳಲ್ಲಿ ಮುಖ್ಯವಾದವು. ವಿಶೇಷ ಅಂದ್ರೆ ಅಕ್ನೂರ್ ರಾಯ ಮಠ ಇದಕ್ಕೆ ಸಂಪೂರ್ಣ ಭಿನ್ನ. ಇಲ್ಲಿ ಕ್ಲೈನ್ಲಿನೆಸ್ -ಹೈಜಿನ್ ಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ರುಚಿ-ಶುಚಿಯಾದ ಊಟೋಪ ಚಾರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಕೃಷ್ಣ ಮೂರ್ತಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಮಠ ಈಗ ತನ್ನ ವಿಶೇಷತೆಯಿಂದ ಕೇವಲ ಬೆಂಗಳೂರಿಗರನ್ನು ಮಾತ್ರವಲ್ಲ, ರಾಜ್ಯದ ವಿವಿಧ ಸ್ಥಳ, ದೇಶ ವಿದೇಶದ ಭಕ್ತರನ್ನು ಸೆಳೆಯುತ್ತಿದೆ.

English summary
Aknur Raghavendra Swami mutt near Gandhi Bazaar in Bangalore has been attracting people of all religion. It was established by Aknur Anantha Swami in the year 1980. New Jersey in America too has Aknur Mutt established by Anantha Swami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X