ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಕೇತುವಿಗಿಂತ 'ಎಡಬಿಡಂಗಿ' ಅನಂತಮೂರ್ತಿ ಅಪಾಯಕಾರಿ

By Srinath
|
Google Oneindia Kannada News

ur anath murthy
ದಾವಣಗೆರೆ ಜೂ 29: ಜ್ಞಾನಪೀಠ ಪ್ರಶಸ್ತಿ ವಿಜೇತ ಯು ಆರ್ ಅನಂತಮೂರ್ತಿ ಬಲ-ಎಡ ಎರಡೂ ಪಂಥಕ್ಕೂ ಸೇರದ ಎಡಬಿಡಂಗಿ. ಅವರು ಸದಾ ಸುರಕ್ಷಿತ ವಲಯದಲ್ಲಿ ನಿಂತ ಪೂರ್ವಗ್ರಹ ಪೀಡಿತ ಸಾಹಿತಿ. ಇಂತಹ ಸಾಹಿತಿಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಎಸ್ ಎಲ್ ಭೈರಪ್ಪ ಅವರನ್ನು 'ರಾಹುಕೇತು ಗ್ರಹ' ಎಂದು ಜರಿಯುವ ಯುಆರ್ಎ ಯಾವ ಗ್ರಹ ಎಂದು ಎಂದು ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಹಾಗೂ ಚಂದ್ರಶೇಖರ ಪಾಟೀಲ ಟೀಕಿಸಿದ್ದಾರೆ.

ಇತ್ತೀಚೆಗೆ ಇಲ್ಲಿ ಹಮ್ಮಿಕೊಂಡಿದ್ದ ವಿಚಾರವಾದಿ ಬಿ.ವಿ. ವೀರಭದ್ರಪ್ಪ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಅಭಿನಂದನಾ ಗ್ರಂಥ 'ಲೋಕಾಯತ' ಬಿಡುಗಡೆ ಮಾಡಿ ಬರಗೂರು ಮಾತನಾಡಿದರು. ಭೈರಪ್ಪ ನವರ ಕೆಲವೊಂದು ಐಡಿಯಾಲಜಿ ನನಗೂ ಇಷ್ಟವಾಗುವುದಿಲ್ಲ. ಇದರ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸೋಣ, ಆದರೆ ಆದರ್ಶ ಪಾಠ ಹೇಳುವವರು ಚಲನಶೀಲತೆ ಬಿಟ್ಟು ಜಡತೆಯತ್ತ ಸರಿಯಾರಬಾರದು ಎನ್ನುವುದು ನನ್ನ ವಾದ ಎಂದಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ವಿಮರ್ಶೆ, ಸಂವಾದ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರನ್ನು ರಾಹುಗ್ರಸ್ತ ಲೇಖಕ, ಅವರ ಕೃತಿಗೆ ಹಿಡಿದ ರಾಹುವನ್ನು ಗಿರೀಶ್ ಕಾಸರವಳ್ಳಿ ತಮ್ಮ ಚಿತ್ರಗಳ ಮೂಲಕ ಬಿಡುಗಡೆ ಮಾಡಿದ್ದಾರೆ ಎಂದು ಅನಂತಮೂರ್ತಿ ಟೀಕಿಸಿದ್ದಾರೆ. ಅವರ ದೃಷ್ಟಿಯಲ್ಲಿ ಬಲಪಂಥೀಯರು ರಾಹು, ಎಡಪಂಥೀಯರು ಕೇತುಗಳು. ಎರಡೂ ಪಂಥಗಳನ್ನು ಸಮಾಜ ಸಹಿಸಿಕೊಳ್ಳುತ್ತದೆ. ಆದರೆ, ಎರಡೂ ಪಂಥಕ್ಕೂ ಸೇರದ ಅನಂತಮೂರ್ತಿ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದರು.

ಗೃಹಭಂಗದಂತಹ ಶ್ರೇಷ್ಠ ಕೃತಿಯನ್ನು ನೀಡಿದ ಭೈರಪ್ಪ ನಂತರ ಕರಪತ್ರದಂತಹ ಹಲವು ಕೃತಿ ರಚಿಸಿದರು. ಅವರನ್ನು, ಅವರ ಸಿದ್ಧಾಂತವನ್ನು ನೇರವಾಗಿ ಎದುರಿಸಬಹುದು. ಎಡಪಂಥೀಯ ನ್ಯೂನತೆಗಳ ಬಗ್ಗೆ ಪ್ರಶ್ನಿಸಬಹುದು. ಆದರೆ, ಸಾಂಸ್ಕೃತಿಕ ವಲಯದ ಮೂರನೇ ಜಗತ್ತು ಎಂದು ಗುರುತಿಸುವ ಸುರಕ್ಷತಾ ವಲಯದ ಆತ್ಮವಂಚಕರನ್ನು ಎದುರಿಸುವುದು ಕಷ್ಟದ ಕೆಲಸ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಂಪಾ, ಅನಂತಮೂರ್ತಿ ಹಾಗೂ ಭೈರಪ್ಪ ನಡುವಿನ ಜಗಳ ಬ್ರಾಹ್ಮಣರ ಒಳಗಿನ ಎಡಗೈ-ಬಲಗೈ ಜಗಳ. ವಶೀಕರಣ ಬಾಜಿಯ ಅನಂತಮೂರ್ತಿಯದು ಸದಾ ಎಡಬಿಡಂಗಿ ಪಂಥ ಎಂದು ಕುಟುಕಿದರು.

English summary
Once again it is S.L. Bhyrappa versus U.R. Anantha Murthy. But Writers Baragur Ramachandrappa and Chandrashekhar Patil take on U.R. Anantha Murthy who criticised SLB recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X