ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರ ಸಾಮ್ರಾಜ್ಯದ ಕಡೇ ಚಕ್ರವರ್ತಿ ರೆಡ್ಡಿ!

By * ಕುಮಾರ ರೈತ
|
Google Oneindia Kannada News

Is Janardhana Reddy reincarnation of Krishnadevaraya?
ಎಲ್ಲಿಯ ಗಾಲಿ ಜನಾರ್ದನ ರೆಡ್ಡಿ-ಎಲ್ಲಿಯ ವಿಜಯನಗರದ ಶ್ರೀಕೃಷ್ದೇವರಾಯ? ಎಲ್ಲಿಂದ ಎಲ್ಲಿಗೋ ಸಂಬಂಧ ಕಲ್ಪಿಸುತ್ತಿದ್ದಾನೆ ಎಂದುಕೊಳ್ಳುವಿರಿ ಎಂಬ ಅರಿವು ನನಗಿದೆ. ಖಂಡಿತ ಇದು ನನ್ನ ಕಲ್ಪನೆಯಲ್ಲ. ಮತ್ಯಾರದು ಎಂದು ಮರು ಪ್ರಶ್ನೆ ಹಾಕುತ್ತೀರಿ! ಇದಕ್ಕೆ ಉತ್ತರ ನಿಮ್ಮ ಮುಂದಿದೆ.

ಸಿ.ಬಿ.ಐ. ಅಧಿಕಾರಿಗಳು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ ಭಾರಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿದರು. ಚಿನ್ನದ ಸಿಂಹಾಸನ, ಬೆಲ್ಟು, ಪೆನ್ನುಗಳು, ಚಿನ್ನದ ಅಂಗಿ, ತಟ್ಟೆಗಳು-ಚಮಚಗಳು, ಸಂಪೂರ್ಣ ಚಿನ್ನದಿಂದಲೇ ಮಾಡಿದ ತಿರುಪತಿ ತಿಮ್ಮಪ್ಪ-ಲಕ್ಷ್ಮಿ-ಪದ್ಮಾವತಿಯರ ವಿಗ್ರಹಗಳು, ಪೂಜಾ ಸಾಮಗ್ರಿಗಳು, ಅಸಂಖ್ಯಾತ ಅಭರಣಗಳು-ವಜ್ರ-ವೈಢೂರ್ಯಗಳು. ಅಬ್ಬಾ ಎನಿಸುವಂಥ ವಿವರಗಳು. ಆದರೆ ನೆನಪಿಡಿ. ಈ ಅದಿರು ವ್ಯಾಪಾರಿ ಕಟ್ಟಿದ ಸಂಪತ್ತಿನ ಸಾಮ್ರಾಜ್ಯದಲ್ಲಿ ಇದು ಅತ್ಯಲ್ಪ. 'ತಾನು 50.000 ಕೋಟಿ ಗಳಿಸಿದ್ದೇನೆ"ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರೆಡ್ಡಿ ಹೇಳಿದ್ದ ಮಾತಿದು! ಮುಖ್ಯವಾಗಿ ಇಲ್ಲಿ ಗಮನ ಸೆಳೆಯುವುದು ಚಿನ್ನದ ಸಿಂಹಾಸನ-ಬೆಲ್ಟು-ಅಂಗಿ. ಎಷ್ಟೆ ಹಣವಿದ್ದರೂ ಇಂಥ ಖಯಾಲಿ ಇರುವುದೇ ಎನಿಸದಿರದು.

ಬಳ್ಳಾರಿಯಲ್ಲಿದ್ದಾಗ ನಾನು ಗಮನಿಸಿದ ಅಂಶಗಳಲ್ಲಿ ಅಂದಿನ ಸಚಿವ ಜನಾರ್ದನ ರೆಡ್ಡಿ ಸುತ್ತಲೂ ಇದ್ದವರು ಅವರನ್ನು ಹೊಗಳುತ್ತಿದ್ದ ಪರಿ ಕೇಳಿದರೆ ಕಿವಿಗೆ ತೂತು ಬೀಳುತ್ತದೆ. ಅಭಿನವ ಶ್ರೀಕೃಷ್ಣದೇವರಾಯ, ಶ್ರೀಕೃಷ್ಣದೇವರಾಯರ ಅಪರವತಾರ ಎನ್ನುವುದೆಲ್ಲ ಆಶ್ಚರ್ಯ ಉಂಟು ಮಾಡಿತ್ತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಂದು ಮಾತನಾಡಿದ ಜಿಲ್ಲೆಯ ಶಾಸಕರೊಬ್ಬರು ಜನಾರ್ದನ ರೆಡ್ಡಿ ಅವರು ಶ್ರೀಕೃಷ್ಣದೇವರಾಯರ ಪುನರ್ಜನ್ಮ ಎಂದಿದ್ದರು. ಇದನ್ನು ಕೇಳಿದಾಗ ಹೊಗಳಿಕೆಗೂ ಒಂದು ಇತಿಮಿತಿ ಬೇಡವೇ ಎನಿಸಿತು.

English summary
Is Janardhana Reddy reincarnation of Vijaynagar Kingdom emperor Srikrishnadevaraya or is he the last emperor? The only people who agree with this is Janardhana Reddy and people who benefited from him. Kumara Raitha recounts the incidents which led to this belief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X