ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು...

By * ಸುಧಾಮೂರ್ತಿ ; ಕನ್ನಡಕ್ಕೆ: ವಿಶ್ವನಾಥ ಹುಲಿಕಲ್
|
Google Oneindia Kannada News

Sudha Narayana Murthy
ಸಂದರ್ಶನ ಮಂಡಳಿಯಲ್ಲಿ ಆರು ಜನರಿದ್ದರು. ನನಗಾಗ ಅನ್ನಿಸಿತು ಅವರುಗಳು ಸಂದರ್ಶನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವವರಲ್ಲ ಎಂದು. "ಜೆ ಆರ್ ಡಿ ಗೆ ಪತ್ರ ಬರೆದ ಹುಡುಗಿಯೇ ಈಕೆ" ಎಂದು ಪಿಸುಗುಟ್ಟಿದ್ದು ಆ ರೂಮನ್ನು ಪ್ರವೇಶಿಸಿದ ಕೂಡಲೇ ನನಗೆ ಕೇಳಿಸಿತು. ಆ ಕೆಲಸ ನನಗೆ ಸಿಗುವುದಿಲ್ಲ ಎಂದು ನನಗಾಗ ಖಾತ್ರಿಯಾಯಿತು. ಆ ಅರಿವೇ ನನ್ನ ಮನಸ್ಸಿನಿಂದ ಸಂದರ್ಶನದ ಬಗ್ಗೆ ಇದ್ದ ಸಕಲ ಭಯಗಳನ್ನು ನಿವಾರಿಸಿತು. ಹೀಗಾಗಿ ನಾನು ಸಮಚಿತ್ತಳಾಗಿ ಸಂದರ್ಶನವನ್ನು ನಿಭಾಯಿಸಲು ಎದುರಿಸಲು ಸಾಧ್ಯವಾಯಿತು.

ಆ ಸಂದರ್ಶನ ಮಂಡಳಿ ನನ್ನ ಬಗ್ಗೆ ಪೂರ್ವಾಗ್ರಹಪೀಡಿತವಾಗಿದೆ ಎಂದು ಭಾವಿಸಿ, ಸಂದರ್ಶನ ಆರಂಭವಾಗುವ ಮೊದಲೇ ನಾನು ಕೊಂಚ ಒರಟಾಗಿ ಹೇಳಿದೆ "ಇದೊಂದು ತಾಂತ್ರಿಕ ಸಂದರ್ಶನವೆಂದು ನಾನು ಆಶಿಸಿದ್ದೇನೆ". ಅವರುಗಳು ನನ್ನ ಒರಟು ನಿಲುವಿನಿಂದ ವಿಚಲಿತರಾದಂತೆ ಕಂಡುಬಂದರು. ನನಗೆ ಇಂದು, ನನ್ನ ಅಂದಿನ ವರ್ತನೆಯ ಬಗ್ಗೆ ನಾಚಿಕೆಯಾಗುತ್ತದೆ. ಮಂಡಳಿಯಲ್ಲಿದ್ದವರು ಆ ದಿನ ನನಗೆ ತಾಂತ್ರಿಕ ಪ್ರಶ್ನೆಗಳನ್ನೇ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿಯೇ ಉತ್ತರಿಸಿದೆ.

ಮಂಡಳಿಯ ಒಬ್ಬ ಹಿರಿಯ ಪುರುಷರು ಪ್ರೀತಿಯಿಂದ ನನಗೆ ಹೇಳಿದರು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕುವ ಅಗತ್ಯವಿಲ್ಲ" ಎಂದು ನಾವೇಕೆ ಜಾಹೀರಾತಿನಲ್ಲಿ ಬರೆದಿದ್ದೆವು ಎಂದು ನಿನಗೆ ಗೊತ್ತಿದೆಯೇ? ನಮ್ಮ ಕಾರ್ಖಾನೆಯ ಶಾಪ್ ಫ್ಲೋರ್ ನಲ್ಲಿ ನಾವು ಇದುವರೆಗೆ ಯಾವ ಮಹಿಳೆಯನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಇದು ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಓದುವ ಕಾಲೇಜು ಅಲ್ಲ; ಕಾರ್ಖಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀನು ಫಸ್ಟ್ rank ಎನ್ನುವುದು ನಮಗೆ ತಿಳಿದಿದೆ. ನಿನ್ನಂತವರು ಯಾವುದಾದರೂ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಬೇಕು!"

ನಾನೊಬ್ಬಳು ಹುಬ್ಬಳ್ಳಿಯಂತಹ ಸಣ್ಣ ಪಟ್ಟಣದಿಂದ ಬಂದಂತಹ ತರುಣಿ. ನನ್ನ ಪ್ರಪಂಚ ತುಂಬಾ ಚಿಕ್ಕದು. ನನಗೆ ದೊಡ್ಡ ಕಂಪನಿಗಳ ವ್ಯವಹಾರ ಮತ್ತು ಕಷ್ಟ-ನಷ್ಟಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಹೇಳಿದೆ- "ನಾವೂ ಎಲ್ಲೋ ಒಂದು ಕಡೆ ಕೆಲಸ ಶುರುಮಾಡಬೇಕಲ್ಲ! ಇಲ್ಲದಿದ್ದರೆ ಯಾವ ಮಹಿಳೆಯೂ ನಿಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗುತ್ತದೆ."

ದೀರ್ಘ ಸಂದರ್ಶನದ ನಂತರ, ಪರಮಾಶ್ಚರ್ಯವೆಂಬಂತೆ ನನಗೆ ಆ ಕೆಲಸ ದೊರಕಿತ್ತು! ಆ ಸಂದರ್ಶನ ಈ ರೀತಿ ನನ್ನ ಭವಿಷ್ಯವನ್ನು ಮೂಡಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪುಣೆಯಲ್ಲಿ ನಾನು ಕೆಲಸ ಮಾಡುತ್ತೇನೆಂದು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ತದನಂತರ ನಾನು ಕರ್ನಾಟಕದಿಂದ ಬಂದಿದ್ದ ಸಂಕೋಚ ಪ್ರವೃತ್ತಿಯ ಒಬ್ಬನ ಜೊತೆ ಸ್ನೇಹ ಬೆಳೆಸಿ, ನಂತರ ಮದುವೆಯಾದೆ.

English summary
Here is an inspirational article written by Infosys foundation chairman Sudha Murthy on her association with JRD Tata in Lasting Legacies (Tata Review- Special Commemorative Issue 2004). Translation by Vishvanath Hulikal, North Califoania, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X